ಬಿಜೆಪಿ ಪಕ್ಷ ಇರುವುದು ದೇಶ ಮತ್ತು ಜನರ ಉದ್ಧಾರಕ್ಕಾಗಿ- ಜೆ.ಪಿ ನಡ್ಡಾ
ಗದಗ, ಏಪ್ರಿಲ್ 29: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಇಂದು ಗದಗ ಜಿಲ್ಲೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದು, ರೋಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಪರ ಮತಯಾಚನೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಿ.ಪಿ ನಡ್ಡಾ, ಈ ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬದ್ಧವಿದೆ. ನಮ್ಮ ನರೇಂದ್ರ ಮೋದಿ ಅವರ ಸರಕಾರ ಬಂದಮೇಲೆ ದೇಶದ ಸಂಸ್ಕೃತಿ ಬದಲಾಗಿದೆ. ಜನರಿಗೆ ಕೇಳಿ ಮತ ಪಡೆಯುವುದಲ್ಲ, ದೇಶದ ಜನರ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು ಆಗ ಜನರೇ ನಿಮಗೆ ಆಶೀರ್ವಾದ ಮಾಡುತ್ತಾರೆ ಎಂದರು.

ಸದ್ಯ ಆ ಕೆಲಸವನ್ನು ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರ ಮಾಡಿದೆ. ಜನರ ಮಧ್ಯೆ ಇದ್ದು ಜನರ ಏಳಿಗೆಗಾಗಿ ದುಡಿಯುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿದೆ. ನರೇಂದ್ರ ಮೋದಿ ಅವರ ರಾಜನೀತಿ ಎಂದರೆ ದೇಶದ ಅಭಿವೃದ್ಧಿ. ನಿಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ನಾವಿದ್ದೇವೆ ಎಂದು ಭರವಸೆ ನೀಡಿದರು.
ಬಿಜೆಪಿ ಪಕ್ಷ ದೇಶದ ಮತ್ತು ಜನರ ಉದ್ಧಾರಕ್ಕಾಗಿ ಇದ್ದರೆ, ಕಾಂಗ್ರೆಸ್‌ನವರು ಅವರವ ಕುಟುಂಬ ಹಾಗೂ ಪೀಳಿಗೆಗೆ ಸೀಮಿತವಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಎಂದರೆ, ಭ್ರಷ್ಟಾಚಾರ ಜಾತಿವಾದ. 2014ರ ಮೊದಲು ಕಾಂಗ್ರೆಸ್ ಸರ್ಕಾರವಿತ್ತು. ಆಗ ದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು. ನರೇಂದ್ರ ಮೋದಿ ಅವರು ಬರುವ ಮೊದಲು ದೇಶದ ಆರ್ಥಿಕತೆ ನೆದೆಗುದಿಗೆ ಬಂದಿತ್ತು. ಇಗ ದೇಶದ ಆರ್ಥಿಕತೆ ಬ್ರಿಟನ್ ದೇಶವನ್ನು ಹಿಂದಿಕ್ಕಿ ಐದನೇ ಸ್ಥಾನದಲ್ಲಿ ಇದೆ ಇದಕ್ಕೆ ಕಾರಣ ಮೋದಿ ಮತ್ತು ಬಿಜೆಪಿ ಸರ್ಕಾರ ಎಂದು ವಿವರಿಸಿದರು.
ವಿದೇಶದ ಹಣ ದೇಶದಲ್ಲಿ ಹೂಡಿಕೆ ಮಾಡುತ್ತಿದೆ. ಅದರಲ್ಲಿಯೂ ಕರ್ನಾಟಕದಲ್ಲಿ ಅತ್ಯಧಿಕವಾಗಿ ಬಂಡವಾಳ ಹೂಡಿಕೆ ಮಾಡುತ್ತಿರುವಿದು ಹೆಮ್ಮೆಯ ವಿಷಯವಾಗಿದೆ. ಯಂತ್ರಗಳು ಮೊದಲು ವಿದೇಶದಿಂದ ಬರುತ್ತಿತ್ತು ಆದರೆ ಈಗ ಆಟೋಮೊಬೈಲ್ ಗಾಡಿಗಳನ್ನು ತಯಾರಿಸುವಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿ ಇರುವುದು ಹೆಮ್ಮೆಯ ವಿಚಾರ ಎಂದರು.

ಮೇ 10ನೇ ತಾರಿಕು ಡಬಲ್ ಇಂಜನ್ ಸರಕಾರಕ್ಕೆ ಆಶೀರ್ವಾದ ನೀಡಬೇಕಾಗಿದೆ. ಡಬಲ್ ಇಂಜನ್ ಎಂದರೆ ಮೋದಿಜೀ ಹಾಗೂ ಬೊಮ್ಮಾಯಿವರ ಅಭಿವೃದ್ಧಿಯ ಸರ್ಕಾರ. ಕರ್ನಾಟಕದಲ್ಲಿ ಹೈವೆ ಮಾಡಲು ಒಂದು ಲಕ್ಷ ಕೋಟಿ ಬಂಡವಾಳ ಹಾಕುವುದು. ಹೆಲಿಕಾಪ್ಟರ್ ಕಂಪನಿ ತುಮಕೂರುನಲ್ಲಿ ನಿರ್ಮಿಸುವುದು, ಹುಬ್ಬಳ್ಳಿಯಲ್ಲಿ ಬಹುದೊಡ್ಡ ರೈಲ್ವೆ ಪ್ಲಾಟ್ ಫಾರ್ಮ ನಿರ್ಮಿಸುವುದು ಡಬಲ್ ಇಂಜನ್ ಸರ್ಕಾರದ ಕೆಲಸ ಎಂದರು.












Click it and Unblock the Notifications