ದುಬೈ ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಕರೆನ್ಸಿಯೇ ಚಲ್ತಾ ಹೇ
ಭಾರತದ ಕರೆನ್ಸಿಯನ್ನು ಇನ್ನು ಮುಂದೆ ದುಬೈನ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಸ್ವೀಕರಿಸಲಾಗುತ್ತದೆ. ದುಬೈಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಅಂತರರಾಷ್ಟ್ರೀಯ ಪ್ರವಾಸಿಗರಲ್ಲಿ ಭಾರತೀಯರು ಪ್ರಮುಖರು. ಗಲ್ಫ್ ನ್ಯೂಸ್ ಮಾಡಿರುವ ವರದಿ ಪ್ರಕಾರ, ಭಾರತದ ರುಪಾಯಿಯನ್ನು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂರೂ ಟರ್ಮಿನಲ್ ಹಾಗೂ ಅಲ್ ಮಕ್ತೌಂ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಲಾಗುತ್ತದೆ.
ಹೌದು, ನಾವು ಭಾರತದ ರುಪಾಯಿಯನ್ನು ಸ್ವೀಕರಿಸಲು ಆರಂಭಿಸಿದ್ದೇವೆ ಎಂದು ದುಬೈನ ಸುಂಕರಹಿತ ಸಿಬ್ಬಂದಿಯು ನಿಯತಕಾಲಿಕೆ ಸುದ್ದಿಯನ್ನು ಉದಾಹರಿಸಿ, ಹೇಳಿದ್ದಾರೆ. ಭಾರತದ ಕರೆನ್ಸಿಯನ್ನು ಹೀಗೆ ಸ್ವೀಕರಿಸುವುದು ಭಾರತೀಯ ಪ್ರವಾಸಿಗರಿಗೆ ಅತ್ಯಂತ ಸಂತಸದ ಸುದ್ದಿ. ಇದಕ್ಕೂ ಮುನ್ನ ವಿನಿಮಯ ದರದ ಲೆಕ್ಕದಲ್ಲಿ ಒಂದಷ್ಟು ಪ್ರಮಾಣದ ಹಣವು ನಷ್ಟ ಆಗುತ್ತಿತ್ತು.

ಕಳೆದ ವರ್ಷ ದುಬೈನ ವಿಮಾನ ನಿಲ್ದಾಣದ ಮೂಲಕ ಹತ್ತಿರ ಹತ್ತಿರ ಒಂಬತ್ತು ಕೋಟಿ ಪ್ರಯಾಣಿಕರು ಹಾದುಹೋಗಿದ್ದಾರೆ. ಆ ಪೈಕಿ ಒಂದು ಕೋಟಿ ಇಪ್ಪತ್ತೆರಡು ಲಕ್ಷ ಮಂದಿ ಭಾರತೀಯರು ಎಂದು ವರದಿ ಹೇಳಿದೆ.












Click it and Unblock the Notifications