• search
  • Live TV
ದುಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಡ್ರೋಣ್ ದಾಳಿ

|

ದುಬೈ, ಸೆಪ್ಟೆಂಬರ್ 14: ಜಗತ್ತಿನ ಅತ್ಯಂತ ದೊಡ್ಡ ತೈಲ ಸಂಸ್ಕರಣಾ ಘಟಕವಾದ ಸೌದಿ ಅರೇಬಿಯಾದ ಸೌದಿ ಅರಾಮ್ಕೋದ ಮೇಲೆ ಶನಿವಾರ ಡ್ರೋನ್ ದಾಳಿ ನಡೆದಿದೆ.

ಅರಾಮ್ಕೋ ತೈಲ ಕಂಪೆನಿಯ ಅಬ್ಕೈಕ್ ಮತ್ತು ಖುರಾಯಿಸ್ ಘಟಕಗಳ ಮೇಲೆ ದಾಳಿ ನಡೆದಿದ್ದು, ಯೆಮನ್‌ನ ಹೌತಿ ಬಂಡುಕೋರರು ಇದರ ಹೊಣೆ ಹೊತ್ತಿದ್ದಾರೆ.

ಅಂಬಾನಿ ಒಪ್ಪಂದದ ಪರಿಣಾಮ: ಭಾರತದ ತೈಲ ಪೂರೈಕೆಯಲ್ಲಿ ಮೊದಲ ಸ್ಥಾನಕ್ಕೆ ಮರಳಿದ ಸೌದಿ

ಡ್ರೋನ್ ದಾಳಿಗಳ ಬೆನ್ನಲ್ಲೇ ತೈಲ ಘಟಕಗಳಲ್ಲಿ ಭಾರಿ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಬೆಳಗಿನ ಜಾವ 4 ಗಂಟೆ ಸುಮಾರಿಗೆ ಎರಡು ಕಡೆ ಡ್ರೋಣ್ ದಾಳಿಯಿಂದ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಮಾಹೊತೊ ದೊರಕಿತು. ಕೂಡಲೇ ಬೆಂಕಿ ನಂದಿಸುವ ಕಾರ್ಯ ಆರಂಭವಾಯಿತು.

ತೈಲಕ್ಕಾಗಿ ಸೌದಿ ಅರೇಬಿಯಾ, ಅಮೆರಿಕ ಅವಲಂಬಿಸುವಂತಾದ ಭಾರತ

ದಾಳಿಗೆ ಹತ್ತು ಡ್ರೋಣ್‌ಗಳನ್ನು ಬಳಸಿದ್ದಾಗಿ ಹೌತಿ ಬಂಡುಕೋರರು ಹೇಳಿಕೊಂಡಿದ್ದಾರೆ. ಸೌದಿ ಅರೇಬಿಯಾದ ಎಲ್ಲೆಡೆ ವ್ಯಾಪಕ ದಾಳಿಗಳನ್ನು ನಡೆಸಿದ್ದಾಗಿ ಕೂಡ ಅವರು ಎಚ್ಚರಿಕೆ ನೀಡಿದ್ದಾರೆ. 'ಈ ದಾಳಿಗಳು ನಮ್ಮ ಹಕ್ಕು. ನಮ್ಮ ದಾಳಿಯ ಗುರಿಗಳನ್ನು ಇನ್ನಷ್ಟು ವಿಸ್ತರಿಸುತ್ತೇವೆ ಎಂದು ಸೌದಿಗಳಿಗೆ ಎಚ್ಚರಿಕೆ ನೀಡುತ್ತೇವೆ' ಎಂದು ಬಂಡುಕೋರರ ವಕ್ತಾರ ತಮ್ಮ ಅಲ್ ಮಾಸಿರಾಹ್ ಟಿವಿಯಲ್ಲಿ ಪ್ರಕಟಣೆ ನೀಡಿದ್ದಾರೆ.

ಏಕಾಂಗಿಯಾಗಿ ಮಹಿಳೆಯ ವಿಮಾನಯಾನ: ಸೌದಿ ಸರ್ಕಾರದ ಮಹತ್ವದ ಆದೇಶ

'ಕಳೆದ ಐದು ವರ್ಷಗಳಲ್ಲಿ ನಮ್ಮ ನಾಗರಿಕರನ್ನು ಗುರಿಯನ್ನಾಗಿರಿಸಿ ನಡೆಸಿದ ವೈಮಾನಿಕ ದಾಳಿಗಳಿಗೆ ಪ್ರತ್ಯುತ್ತರವಾಗಿ ದಾಳಿ ನಡೆಸುವುದು ನಮ್ಮ ಹಕ್ಕು' ಎಂದಿದ್ದಾರೆ.

ಹೌತಿ ಸಂಘಟನೆಗಳ ಒತ್ತಡದಿಂದಾಗಿ ಅಧಿಕಾರದಿಂದ ಕೆಳಗಿಳಿದಿದ್ದ ಯೆಮನ್ ಅಧ್ಯಕ್ಷ ಅಬ್ದ್ ರಬ್ಬು ಮನ್ಸೌರ್ ಹಾದಿ ಅವರಿಗೆ ಬೆಂಬಲವಾಗಿ ಸೌದಿ ನೇತೃತ್ವದ ಮೈತ್ರಿಕೂಟ 2015ರಲ್ಲಿ ಮಧ್ಯಪ್ರವೇಶ ನಡೆಸಿತ್ತು.

English summary
Two oil facilities of Saudi Arabia's Saudi Aramco were attacked by drones on Saturday. Houthi group has claimed the resplinisbility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X