• search
 • Live TV
ದುಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶ್ರೀದೇವಿ ಸತ್ತಿದ್ದು ಹೇಗೆ? ಇಲ್ಲಿದೆ ಆಘಾತಕಾರಿ ಸುದ್ದಿ!

By Prasad
|
   ಶ್ರೀದೇವಿ ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಯಲು ಮಾಡಿದ ಭಯಾನಕ ಸುದ್ದಿ | Oneindia Kannada

   ಬಾಲಿವುಡ್ ಬೆಡಗಿ, ಚಿತ್ರರಸಿಕರ ಸಾಮ್ರಾಜ್ಞಿ ಶ್ರೀದೇವಿ ನಿಜವಾಗಿಯೂ ಸತ್ತಿದ್ದು ಹೇಗೆ? ಈ ಬಗ್ಗೆ ಹಲವಾರು ಕಪೋಲಕಲ್ಪಿತ ಸುದ್ದಿಗಳು ಇಂಟರ್ನೆಟ್ಟಿನಲ್ಲಿ ಹರಿದಾಡುತ್ತಿದ್ದವು. ಆದರೆ, ಇದೀಗ ಪೋಸ್ಟ್ ಮಾರ್ಟಂ ರಿಪೋರ್ಟ್ ಹೊರಬಿದ್ದಿದ್ದು, ನಿಜಕ್ಕೂ ಆಘಾತಕಾರಿ ಸಂಗತಿಗಳು ಹೊರಬೀಳುತ್ತಿವೆ.

   ಆರಂಭಿಕ ಮಾಹಿತಿಯ ಪ್ರಕಾರ, ಶ್ರೀದೇವಿ ಅವರು ತೀವ್ರ ಹೃದಯಾಘಾತದಿಂದ ಸತ್ತಿದ್ದರು ಎಂದು ಹೇಳಿತ್ತು. ಆದರೆ, ಅವರಿಗೆ ಹೃದಯ ಬೇನೆಯ ಸುಳಿವೂ ಇರಲಿಲ್ಲ. ಹೃದಯಬೇನೆ ಇಲ್ಲದಿದ್ದರೂ ಹೃದಯಾಘಾತ ಆಗಬಾರದೆಂದೇನಿಲ್ಲ. ಆದರೆ, ಅವರು ನಿಜಕ್ಕೂ ಸತ್ತಿದ್ದು ಹೃದಯಾಘಾತದಿಂದಲ್ಲವೆ? ಈ ಕುರಿತು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಏನನ್ನೂ ಹೇಳುವುದಿಲ್ಲ.

   ತುಂಬಿದ ಬಾತ್ ಟಬ್ ನಲ್ಲಿ ನಿಶ್ಚಲವಾಗಿ ಬಿದ್ದಿದ್ದ ಶ್ರೀದೇವಿ!

   ಹಾಗಿದ್ರೆ ಹೇಗೆ? ಫೋರೆನ್ಸಿಕ್ ವರದಿಯ ಪ್ರಕಾರ, ಅವರಿದ್ದ ಹೋಟೆಲಿನ ಸ್ನಾನದ ಕೋಣೆಯಲ್ಲಿ ನೀರಿನಿಂದ ತುಂಬಿದ್ದ ಬಾತ್ ಟಬ್ ನಲ್ಲಿ ಅಕಸ್ಮಾತಾಗಿ ಬಿದ್ದು, ಮುಳುಗಿ ಅಸುನೀಗಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಇದು ನಿಜಕ್ಕೂ ಅಚ್ಚರಿ ಮತ್ತು ಆಘಾತಕಾರಿ ಸುದ್ದಿ. ಅಕಸ್ಮಾತಾಗಿ ಬಿದ್ದಿದ್ದಾದರೂ ಹೇಗೆ?

   ಶ್ರೀದೇವಿಯವರ ಸಾವಿಗೆ ನಿಜವಾದ ಕಾರಣವಾದರೂ ಏನು?

   ಆ ವರದಿಯ ಪ್ರಕಾರ, ಶ್ರೀದೇವಿಯವರ ದೇಹದಲ್ಲಿ ಮದ್ಯದ ಅಂಶ ಕಂಡುಬಂದಿದ್ದು, ಅವರು ಗುಂಡಿನ ನಶೆಯಲ್ಲಿದ್ದರು ಎಂಬುದು ಬಹಿರಂಗವಾಗಿದೆ. ಚಿತ್ರರಂಗದ ತಾರೆಯರ ಜೀವನಶೈಲಿಯನ್ನು ನೋಡಿದಾಗ, ಮದ್ಯ ಸೇವಿಸುವ ಸಂಗತಿ ಅಚ್ಚರಿ ತರದು. ಆದರೆ, ಆದದ್ದು ಮಾತ್ರ ಘೋರ ದುರಂತ.

   ಶ್ರೀದೇವಿ ಸತ್ತಿದ್ದು ಹೃದಯಾಘಾತದಿಂದಲ್ಲ

   ಫೋರೆನ್ಸಿಕ್ ವರದಿಯ ಪ್ರತಿ ಮತ್ತು ಮರಣ ಪ್ರಮಾಣ ಪತ್ರದ ಪ್ರತಿಯನ್ನು ಪಡೆದಿರುವ ದುಬೈ ಪೊಲೀಸರು ಫೋರೆನ್ಸಿಕ್ ವರದಿಯ ಬಗ್ಗೆ ಹೇಳಿಕೆ ನೀಡಿದ್ದು, ಬಾಲಿವುಡ್ ನಟಿ ಶ್ರೀದೇವಿ ಅವರು ಹೋಟೆಲಿನ ಬಾತ್ ಟಬ್ ನಲ್ಲಿ ಅಕಸ್ಮಾತಾಗಿ ಬಿದ್ದು ಮುಳುಗಿ ಸತ್ತಿದ್ದಾರೆ. ಅವರು ಸತ್ತಿದ್ದು ಹೃದಯಾಘಾತದಿಂದಲ್ಲ.

   ಅಕಸ್ಮಾತಾಗಿ ಏಕೆ ಮತ್ತು ಹೇಗೆ ಬಿದ್ದರು?

   ಅಕಸ್ಮಾತಾಗಿ ಏಕೆ ಮತ್ತು ಹೇಗೆ ಬಿದ್ದರು?

   ಅವರ ಸಾವಿನ ಕುರಿತು ನೀಡಲಾಗಿರುವ ಪ್ರಥಮ ಮಾಹಿತಿ ಕೂಡ ಇದನ್ನೇ ಹೇಳುತ್ತಿದೆ. ಆದರೆ, ಬಾತ್ ಟಬ್ ನಲ್ಲಿ ಅಕಸ್ಮಾತಾಗಿ ಏಕೆ ಮತ್ತು ಹೇಗೆ ಬಿದ್ದರು? ಯಾರನ್ನೂ ಕರೆಯದಷ್ಟು ಮದ್ಯದ ನಶೆಯಲ್ಲಿದ್ದರೆ? ಹೀಗೆ ಹಲವಾರು ಪ್ರಶ್ನೆಗಳು ಎದ್ದಿದ್ದು, ಪೊಲೀಸರು ಅಧಿಕೃತ ವರದಿಯನ್ನು ಬಿಡುಗಡೆ ಮಾಡಲಿದ್ದು, ನಂತರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಿದ್ದಾರೆ.

   ಪ್ರಜ್ಞೆ ಕಳೆದುಕೊಳ್ಳುವಷ್ಟು ಕುಡಿದಿದ್ದರೆ?

   ಪ್ರಜ್ಞೆ ಕಳೆದುಕೊಳ್ಳುವಷ್ಟು ಕುಡಿದಿದ್ದರೆ?

   ಹೋಟೆಲಿನಲ್ಲಿನ ಬಾತ್ ಟಬ್ ಗೆ ಬೀಳುವ ಮುನ್ನವೇ ಶ್ರೀದೇವಿಯವರು ಪ್ರಜ್ಞೆ ಕಳೆದುಕೊಂಡಿದ್ದರೆಂಬ ಮಹತ್ವದ ಮಾಹಿತಿಯನ್ನು ಪೋಸ್ಟ್ ಮಾರ್ಟಂ ವರದಿ ಹೇಳುತ್ತಿದೆ. ಪ್ರಜ್ಞೆ ಕಳೆದುಕೊಳ್ಳುವ ಮಟ್ಟಿಗೆ ಅವರು ಕುಡಿದಿದ್ದರೆ? ಅಷ್ಟೊಂದು ಕುಡಿದಿದ್ದಾದರೆ ಇದು ಬೋನಿ ಕಪೂರ್ ಅವರ ಗಮನಕ್ಕೆ ಏಕೆ ಬರಲಿಲ್ಲ? ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ.

   ಗಾಳಿಸುದ್ದಿಗಳನ್ನು ಟುಸ್ ಮಾಡಿದ ವರದಿ

   ಗಾಳಿಸುದ್ದಿಗಳನ್ನು ಟುಸ್ ಮಾಡಿದ ವರದಿ

   ಶ್ರೀದೇವಿಯವರು ವಿಪರೀತ ಡಯಟ್ ಮಾಡುತ್ತಿದ್ದರು, ತಮ್ಮನ್ನೇ ತಾವು ದ್ವೇಷಿಸಿಕೊಳ್ಳುತ್ತಿದ್ದರು, ಸೌಂದರ್ಯ ಕಳೆದುಕೊಂಡಿದ್ದರಿಂದ ತೀವ್ರ ಒತ್ತಡದಲ್ಲಿದ್ದರು, ಸೌಂದರ್ಯ ಮರಳಿ ಪಡೆಯಲು ಪ್ರಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು... ಇತ್ಯಾದಿಗಳಿಂದ ಹೃದಯಾಘಾತವಾಗಿ ಅವರು ಅಸುನೀಗಿದರು ಎಂಬ ವ್ಯಾಖ್ಯಾನವೇ ಫೋರೆನ್ಸಿಕ್ ವರದಿಯಿಂದ ಉಲ್ಟಾಪುಲ್ಟಾ ಆಗಿದೆ.

   ಸಾವು ಬೆನ್ನತ್ತಿದ ಹಿಂದಿನ ದಿನವೂ

   ಸಾವು ಬೆನ್ನತ್ತಿದ ಹಿಂದಿನ ದಿನವೂ

   ಶ್ರೀದೇವಿಯವರ ಮೈದುನರಾದ ಸಂಜಯ್ ಕಪೂರ್ ಅವರು, ತಮ್ಮ ನಾದಿನಿಗೆ ಯಾವುದೇ ಹೃದಯಬೇನೆ ಇರಲಿಲ್ಲ, ಅವರು ಆರೋಗ್ಯವಾಗಿದ್ದರು ಎಂಬ ಹೇಳಿಕೆ ನೀಡಿದ್ದರು. ಸಂಬಂಧಿಯ ಮದುವೆಯಲ್ಲಿ ಕೂಡ ಶ್ರೀದೇವಿಯವರು ಮಹಾರಾಣಿಯಂತೆ ದಿರಿಸು ಧರಿಸಿ ಮಿಂಚಿದ್ದರು. ಹಲವಾರು ಫೋಟೋಗಳನ್ನು ತೆಗೆದುಕೊಂಡು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದರು. ಅವರ ಮುಖದಲ್ಲಿ ಬಳಲಿಕೆಯಾಗಲಿ, ದುಃಖವಾಗಲಿ ಕಂಡುಬಂದಿರಲಿಲ್ಲ.

   ಸಾವಿನ ಹಿಂದೆ ಯಾವುದೇ ಷಡ್ಯಂತ್ರ ಇಲ್ಲ

   ಸಾವಿನ ಹಿಂದೆ ಯಾವುದೇ ಷಡ್ಯಂತ್ರ ಇಲ್ಲ

   ಶ್ರೀದೇವಿಯವರ ಸಾವಿನ ಹಿಂದೆ ಯಾವುದೇ ಷಡ್ಯಂತ್ರ ಇಲ್ಲ ಎಂದು ದುಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈಗಾಗಲೆ ಕೇಸನ್ನು ದುಬೈ ಪೊಲೀಸರು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಗೆ ಹಸ್ತಾಂತರಿಸಲಾಗಿದ್ದು, ಅವರು ಮುಂದಿನ ಕಾನೂನು ಕ್ರಮಗಳನ್ನು ಜರುಗಿಸಲಿದ್ದಾರೆ. ಶ್ರೀದೇವಿಯ ಪತಿ ಬೋನಿ ಕಪೂರ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.

   ಶ್ರೀದೇವಿ ವೈನ್ ಮಾತ್ರ ಆಗಾಗ ಕುಡಿಯುತ್ತಿದ್ದರು

   ಶ್ರೀದೇವಿ ವೈನ್ ಮಾತ್ರ ಆಗಾಗ ಕುಡಿಯುತ್ತಿದ್ದರು

   ಶ್ರೀದೇವಿಯವರು ಹಾರ್ಡ್ ಲಿಕ್ಕರ್ ಕುಡಿದಿರಲಿಲ್ಲ. ಅವರು ಆಗಾಗ ನನ್ನಂತೆ ಮತ್ತು ಇತರರಂತೆ ಸೆಲೆಬ್ರಿಟಿಗಳಂತೆ ಆಗಾಗ ವೈನ್ ಹೀರುತ್ತಿದ್ದರು. ನಾನು ಅಬುಧಾಬಿಯ ಶೇಖ್ ಅಲ್ ನಹಯಾನ್ ಜೊತೆ ಮಾತನಾಡಿದ್ದೇನೆ. ಅವರು ಕಾನೂನು ಶಿಷ್ಟಾಚಾರಗಳನ್ನು ಬೇಗ ಪೂರೈಸಿ, ಕಪೂರ್ ವಶಕ್ಕೆ ಶ್ರೀದೇವಿಯರ ಶರೀರವನ್ನು ನೀಡುವುದಾಗಿ ಹೇಳಿದ್ದಾರೆ ಎಂದು ಅಮರ್ ಸಿಂಗ್ ತಿಳಿಸಿದ್ದಾರೆ.

   ಬಾಲಿವುಡ್ ನಟಿ ಶ್ರೀದೇವಿ ಸಾವು : ಉತ್ತರ ಸಿಕ್ಕದ 5 ಪ್ರಶ್ನೆಗಳು

   ಜ್ಯೋತಿಷ್ಯ: ಶ್ರೀದೇವಿಯವರ ಸಾವು ಬಂದದ್ದಲ್ಲ, ತಂದುಕೊಂಡದ್ದು!

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Actress Sridevi did not die of heart attack. Then how did she die? As per forensic report, the 'Chandini' fame actress accidentally fell and drowned in the bath tub in hotel she was staying in. It also says she was in influence of alcohol.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more