Get Updates
Get notified of breaking news, exclusive insights, and must-see stories!

97ನೇ ವಯಸ್ಸಿನಲ್ಲಿ ದುಬೈನಲ್ಲಿ ಡಿಎಲ್ ನವೀಕರಣ ಮಾಡಿಸಿದ ಮೆಹ್ತಾ

ದುಬೈ, ಫೆಬ್ರವರಿ 11: ಇಲ್ಲೊಂದು ಆಸಕ್ತಿಕರ ಸುದ್ದಿ ಇದೆ. ಭಾರತೀಯ ಮೂಲದ ವ್ಯಕ್ತಿಯೊಬ್ಬರು ಯುಎಇಯಲ್ಲಿ ತಮ್ಮ ಡ್ರೈವಿಂಗ್ ಲೈಸೆನ್ಸ್ ನವೀಕರಣ ಮಾಡಿಸಿದ್ದಾರೆ. ಅಯ್ಯೋ ಇದೇನು ಮಹಾ ಸುದ್ದಿ ಅಂತೀರಾ? ಅವರ ಹೆಸರು ತೆಹೆಮ್ತೆನ್ ಹೋಮಿ ಧುಂಜಿಬಾಯ್ ಮೆಹ್ತಾ, ಜನಿಸಿದ್ದು 1922ರಲ್ಲಿ.

ತಮ್ಮ 97ನೇ ವಯಸ್ಸಿನಲ್ಲಿ ಲೈಸೆನ್ಸ್ ರಿನೀವ್ ಮಾಡಿಸಿದ್ದು, ಇನ್ನು ಮೂರು ವರ್ಷದ ನಂತರ ದುಬೈ ರಸ್ತೆಯಲ್ಲಿ ಚಾಲನೆ ಮಾಡಿದ ಮೊದಲ ಶತಾಯುಷಿ ಎಂಬ ಕೀರ್ತಿಗೆ ಭಾಜನರಾಗಬಹುದು. ಇವರ ಲೈಸೆನ್ಸ್ 2023ರ ಅಕ್ಟೋಬರ್ ತನಕ ಮಾನ್ಯತೆ ಹೊಂದಿದೆ.

ಕಾಕತಾಳೀಯ ಅನ್ನಿಸುವಂಥ ಘಟನೆಯೊಂದನ್ನು ನೆನಪಿಸಬೇಕು. ಬ್ರಿಟಿಷ್ ರಾಣಿ ಎರಡನೇ ಎಲಿಜಬೆತ್ ರ ಪತಿ ಫಿಲಿಪ್ ಗೆ ಕೂಡ 97 ವರ್ಷ. ದೊಡ್ಡ ಪ್ರಮಾಣದ ಅಪಘಾತದಿಂದ ಸ್ವಲ್ಪದರಲ್ಲಿ ಪಾರಾದ ಅವರು, ತಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಈಚೆಗಷ್ಟೇ ವಾಪಸ್ ನೀಡಿದ್ದಾರೆ.

97 year old Indian origin man renews Dubai licence

ಮೆಹ್ತಾ ಅವರು ಭಾರತೀಯ ಮೂಲದ ಕೀನ್ಯಾದವರು. ಅವರಿಗೆ ಕಾರಿನ ಬಗ್ಗೆ ಅಂಥ ಒಲವೇನೂ ಇಲ್ಲ. ಕಾರು ಇದ್ದರೆ ಮನುಷ್ಯರನ್ನು ಆಲಸಿಗಳನ್ನಾಗಿ ಮಾಡುತ್ತದೆ ಎಂಬ ನಂಬಿಕೆ ಅವರದು. ನಡಿಗೆಯೇ ಮೆಹ್ತಾ ಅವರ ಆದ್ಯತೆ. ದಿನಕ್ಕೆ ಕನಿಷ್ಠ ನಾಲ್ಕು ಗಂಟೆ ನಡೆದಾಡುತ್ತಾರೆ.

ದೀರ್ಘ ಕಾಲದಿಂದ ದುಬೈನಲ್ಲಿ ವಾಸವಾಗಿರುವ ಅವರು, ಅವಿವಾಹಿತರು. ಕೊನೆಯದಾಗಿ ಅವರು ವಾಹನ ಚಲಾಯಿಸಿರುವುದು 2004ರಲ್ಲಿ. ಸದ್ಯಕ್ಕೆ ಸಾರ್ವಜನಿಕ ಸಾರಿಗೆಯನ್ನೇ ಬಳಸುತ್ತಾರೆ ಅಥವಾ ನಡೆದೇ ಹೋಗುತ್ತಾರೆ.

"ನನ್ನ ದೀರ್ಘಾಯುಷ್ಯದ ಗುಟ್ಟನ್ನು ಯಾರಿಗೂ ಹೇಳಬೇಡಿ. ನಾನು ಸಿಗರೇಟ್ ಸೇದುವುದಿಲ್ಲ, ಮದ್ಯಪಾನ ಮಾಡುವುದಿಲ್ಲ. ಇದೇ ನನ್ನ ಆರೋಗ್ಯಕ್ಕೆ ಕಾರಣ" ಎನ್ನುತ್ತಾರೆ.

1980ರಲ್ಲಿ ದುಬೈಗೆ ಬಂದಿರುವ ಮೆಹ್ತಾ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಅಕೌಂಟಿಂಗ್ ಕೆಲಸವನ್ನು 2002ರ ತನಕ ಮಾಡಿದ್ದಾರೆ. ಆ ನಂತರ ವಯಸ್ಸಿನ ಕಾರಣಕ್ಕೆ ಅವರ ಬಳಿ ರಾಜೀನಾಮೆ ಪಡೆಯಲಾಗಿದೆ. "ಆಗ ನನಗೆ 80 ವರ್ಷ ವಯಸ್ಸು. ಕುಟುಂಬ ಇರಲಿಲ್ಲ. ಎಲ್ಲಿಗೂ ಹೋಗಬೇಕಿರಲಿಲ್ಲ. ನನ್ನ ಜೀವಮಾನದ ಗಳಿಕೆ ಒಟ್ಟುಗೂಡಿಸಿ, ಒಂದು ಬೆಡ್ ರೂಮ್ ನ ಅಪಾರ್ಟ್ ಮೆಂಟ್ ದುಬೈನಲ್ಲಿ ಖರೀದಿಸಿದೆ ಎನ್ನುತ್ತಾರೆ.

ನನ್ನ ಜೀವನದಲ್ಲಿ ಬಹುತೇಕ ಒಂಟಿಯಾಗಿ ಕಳೆದಿದ್ದೇನೆ. ಏಕೆಂದರೆ ನಾನು ಮದುವೆ ಆಗಿಲ್ಲ. ನನ್ನ ತಂಗಿ ಯು.ಕೆ.ಯಲ್ಲಿ ಇದ್ದಾಳೆ. ಪ್ರತಿ ಬೇಸಿಗೆಯಲ್ಲಿ ಅಲ್ಲಿಗೆ ಹೋಗುತ್ತೇನೆ. ಕೆಲವು ವರ್ಷಗಳ ಹಿಂದೆ ಹಗಲು ವೇಳೆಯಲ್ಲೇ ನನ್ನ ಹತ್ತಿರ ಕಳುವು ಮಾಡಿದರು. ಅಂತಹ ಘಟನೆಯನ್ನು ದುಬೈನಲ್ಲಿ ಊಹಿಸಲು ಕೂಡ ಸಾಧ್ಯವಿಲ್ಲ. ಆದ್ದರಿಂದ ಇಲ್ಲೇ ಇದ್ದೀನಿ ಎನ್ನುತ್ತಾರೆ ಮೆಹ್ತಾ.

ಮೆಹ್ತಾರ ಸ್ನೇಹಿತರೆಲ್ಲ ಬಹಳ ಹಿಂದೆಯೇ ತೀರಿಕೊಂಡಿದ್ದಾರೆ. ಅವರಿಗೆ ದುಬೈನಲ್ಲಿರುವ ಏಕೈಕ ಬೆಂಬಲ ಅಂದರೆ ಅಲ್ ಮಿದ್ ಫಾ ಅಂಡ್ ಅಸೀಸಿಯೇಟ್ಸ್ ಕಾನೂನು ಸಂಸ್ಥೆಯ ಸದಸ್ಯರದು. ತಮ್ಮ ವಿಲ್ ಬರೆಸುವ ಸಲುವಾಗಿ ಮೆಹ್ತಾ ಅವರು 2004ರಲ್ಲಿ ಭೇಟಿಯಾಗಿದ್ದಾರೆ. ಆಗಿನಿಂದ ಸ್ನೇಹ ಹಾಗೇ ಉಳಿದುಕೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+