ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಲ್ಲಿ ಬಿಎಸ್ಸೆನ್ನೆಲ್ ಲ್ಯಾಂಡ್ ಲೈನ್, ಬ್ರಾಡ್ ಬ್ಯಾಂಡ್ ಬಂದ್

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜೂ.6- ನಗರದಲ್ಲಿ ಸೋಮವಾರ ಬೆಳಗ್ಗೆಯಿಂದ ಸುಮಾರು 500 ಕ್ಕೂ ಹೆಚ್ಚು ಬಿಎಸ್ಸೆನ್ನೆಲ್ ಗ್ರಾಹಕರು ದೂರವಾಣಿ ಮತ್ತು ಇಂಟರನೆಟ್ ಸೌಲಭ್ಯವಿಲ್ಲದೇ ಪರದಾಡುತ್ತಿದ್ದಾರೆ.

ಈ ಬಗ್ಗೆ ದೂರಸಂಪರ್ಕ ಇಲಾಖೆಯವರನ್ನು ಕೇಳಿದರೆ ಇಂದು ಸಂಜೆಯೊಳಗೆ ಸರಿ ಮಾಡುತ್ತೇವೆ ಎಂದು ಹೇಳಿದ್ದು ಜನರಿಗೆ ಇಲಾಖೆಯ ಭರವಸೆ ಮೇಲಲೆ ನಂಬಿಕೆ ಇಲ್ಲ.[ಪ್ರಹ್ಲಾದ್ ಜೋಶಿ ವಿರುದ್ಧ ಬಿಎಸ್ಎನ್ಎಲ್ ನೌಕರರ ಪ್ರತಿಭಟನೆ]

bsnl

ಆಗಿದ್ದೇನು : ನಗರದೆಲ್ಲೆಡೆ ವಿದ್ಯುತ್ ತಂತಿಗಳನ್ನು ನೆಲದಲ್ಲಿ ಅಳವಡಿಸುವ ಕಾಮಗಾರಿ ಹೆಸ್ಕಾಂನಿಂದ ಅತೀ ವೇಗದಲ್ಲಿ ನಡೆದಿದೆ. ಹೀಗಾಗಿ ಹಲವಾರು ಕಡೆಗಳಲ್ಲಿ ನೆಲ ಅಗೆದು ಈಗಾಗಲೇ ಅರ್ಧಕ್ಕೆ ಬಿಡಲಾಗಿದೆ. ಇದೇ ರೀತಿ ಇಂದು ಇಂಡಸ್ಟ್ರೀಯಲ್ ಎಸ್ಟೇಟ್ ಹತ್ತಿರದ ಮೈಕ್ರೋಫೀನೀಶ್ ಫ್ಯಾಕ್ಟರಿ ಬಳಿ ಜೆಸಿಬಿಯಿಂದ ನೆಲ ಅಗೆಯುವಾಗ ಟೆಲಿಪೋನ್ ಲೈನ್ ಕಟ್ಟಾಗಿದೆ.

ಹೀಗಾಗಿ ನೂರಾರು ಗ್ರಾಹಕರು ಪರದಾಡುತ್ತಿದ್ದಾರೆ. ಈ ಕುರಿತು ಬಿಎಸ್ಸೆನ್ನೆಲ್ ಕಚೇರಿಗೆ ವಿಪರೀತ ದೂರುಗಳು ಬರುತ್ತಿದ್ದಂತೆಯೇ ಆಗಿದ್ದೇನು ಎಂದು ಹಿರಿಯ ಅಧಿಕಾರಿಗಳು ಪರಿಶೀಲಿಸಿದಾಗ ವೈರ್ ಕಟ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ನಂತರ ನಿಧಾನವಾಗಿ ವೈರ್ ರಿಪೇರಿ ಮಾಡಲು ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ತೆರಳುತ್ತಿದ್ದಾರೆ.[ರಾಷ್ಟ್ರೀಯ ಹೆದ್ದಾರಿಯಾಗಲಿರುವ 14 ರಾಜ್ಯ ಹೆದ್ದಾರಿಗಳ ಪಟ್ಟಿ]

ಭಾರೀ ಪ್ರಚಾರ : ಭಾರತೀಯ ದೂರ ಸಂಪರ್ಕ ಇಲಾಖೆ ಹೊಸ ದೂರವಾಣಿ ಸಂಪರ್ಕ ಪಡೆಯುವಂತೆ ಸಾರ್ವಜನಿಕರಿಗೆ ಮಾಧ್ಯಮಗಳ ಮೂಲಕ ಪ್ರಚಾರ ಮಾಡುತ್ತದೆ. ಆದರೆ ಇದ್ಯ ವ್ಯವಸ್ಥೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಹೇಳುವುದಿಲ್ಲ ಇದೆಂಥಾ ವಿಪರ್ಯಾಸ. ಒಟ್ಟಿನಲ್ಲಿ ದೂರವಾಣಿ ಪಡೆದುಕೊಂಡ ಗ್ರಾಹಕರ ಇಂಗು ತಿಂದ ಮಂಗನಂತಾಗಿ ಖಾಸಗಿ ಸಂಪರ್ಕ ಪಡೆದುಕೊಂಡಿದ್ದರೆ ಒಳ್ಳೇಯದಿತ್ತಲ್ಲವೇ ಎನ್ನುತ್ತಿದ್ದಾರೆ.

English summary
Hubballi: After the unscientific work of HESCOM Hubballi people suffers from Bharat Sanchar Nigam Limited(BSNL) broad band service on June 6, 2016, Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X