ಜೂನ್ ಅಂತ್ಯಕ್ಕೆ ಸಮವಸ್ತ್ರ ವಿತರಣೆ: ಕಿಮ್ಮನೆ

ಹುಬ್ಬಳ್ಳಿ, ಜೂನ್ 08: ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಜೂನ್ ಅಂತ್ಯದೊಳಗೆ ಬಟ್ಟೆ ಮತ್ತು ಪುಸ್ತಕಗಳನ್ನು ವಿತರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಶಿಕ್ಷಕರ ವರ್ಗಾವಣೆ ನೀತಿಯನ್ನು ಬದಲಾಯಿಸಿದೆ. ವರ್ಗಾವಣೆಯಲ್ಲಿದ್ದ ವಿವಿಧ ನೀತಿಗಳನ್ನು ಸರಿಪಡಿಸಿ ಗೊಂದಲ ನಿವಾರಣೆ ಮಾಡಲಾಗಿದೆ ಎಂದರು.[ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫೇಲ್ ಆಗಿದ್ದ ಸರ್ಕಾರ!]

kimmane

ಕೆಲವೊಂದು ನಿಯಮಗಳಿಗೆ ತಿದ್ದುಪಡಿಗಳನ್ನು ತರಲಾಗಿದೆ. ಗಂಡ-ಹೆಂಡತಿಯ ವರ್ಗಾವಣೆ ವಿಷಯದಲ್ಲಿ ಶೇ. 5 ರಷ್ಟು ಇದ್ದ ವರ್ಗಗಳನ್ನು ಶೇ.8ಕ್ಕೆ ಏರಿಸಲಾಗಿದೆ.. ಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕನ್ನು ಮುಖ್ಯಾಧ್ಯಾಪಕರನ್ನಾಗಿಸಲಾಗಿದೆ ಎಂದು ತಿಳಿಸಿದರು.[ಹುಬ್ಬಳ್ಳಿ ಮೇಯರ್ ಮಂಜುಳಾರನ್ನೇ ಬಸ್ ಹತ್ತಿಸಿದ ಪಾಲಿಕೆ!]

ವರ್ಗಾವಣೆಯಲ್ಲಿನ ಕೆಲ ನೀತಿ ಬದಲಾವಣೆ ಮಾಡಿ 9 ಸಾವಿರ ಶಿಕ್ಷಕರಿಗೆ ಮುಖ್ಯಾಧ್ಯಾಪಕರಾಗಿ ಬಡ್ತಿ ನೀಡಲಾಗಿದೆ ಎಂದು ತಿಳಿಸಿದರು. ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕ ವಿತರಣೆಯಾದರೆ ವಿದ್ಯಾರ್ಥಿಗಳಿಗೆ ಅನಗತ್ಯ ಗೊಂದಲ ತಪ್ಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+