ಧಾರವಾಡ : ಲಾಕೌಟ್ ತೆರವುಗೊಳಿಸಿದ ಮಾರ್ಕೊಪೋಲೊ ಘಟಕ

Posted By:
Subscribe to Oneindia Kannada

ಧಾರವಾಡ, ಮಾರ್ಚ್ 07 : ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವಿನ ಬಿಕ್ಕಟ್ಟು ಬಗೆಹರಿದಿದ್ದು ಧಾರವಾಡ ಮಾರ್ಕೊಪೋಲೊ ಘಟಕ ಸೋಮವಾರ ಲಾಕೌಟ್‌ ತೆರವುಗೊಳಿಸಿದೆ. ಕೆಲವು ಕಾರ್ಮಿಕರು ಮಾತ್ರ ಇಂದು ಕೆಲಸಕ್ಕೆ ಹಾಜರಾಗಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಕೊಪೋಲೊ ಘಟಕದ ಕಾರ್ಮಿಕರು ಜನವರಿ 31ರಿಂದ ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದಾಗಿ ಉತ್ಪಾದನೆ ಸ್ಥಗಿತಗೊಂಡಿತ್ತು. ಫೆಬ್ರವರಿ 6ರಂದು ಘಟಕವನ್ನು ಮುಚ್ಚಲಾಗಿತ್ತು. [ಮಾರ್ಕೋಪೋಲೋ ಗಲಭೆಯ ಬಲಿಪಶು ಕಂಪನಿಯೋ, ಕಾರ್ಮಿಕರೋ?]

tata

ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಮಾತುಕತೆ ಬಳಿಕ ಘಟಕವನ್ನು ಪುನಃ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಸೋಮವಾರ ಲಾಕೌಟ್ ತೆರವುಗೊಳಿಸಲಾಗಿದೆ. ಆದರೆ, ಎಲ್ಲಾ ಕಾರ್ಮಿಕರು ಇಂದು ಕೆಲಸಕ್ಕೆ ಹಾಜರಾಗಿಲ್ಲ. [ಟಾಟಾ ಮಾರ್ಕೋಪೋಲೋ ಕಂಪನಿ ಲಾಕ್ ಔಟ್]

'ವೇತನ ಹೆಚ್ಚಳ ಸೇರಿದಂತೆ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸಲು ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಇದರಿಂದಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಕಾರ್ಮಿಕರಿಗೆ ಮುಷ್ಕರ ಕೈಬಿಡುವಂತೆ ಸೂಚಿಸಲಾಗಿದೆ' ಎಂದು ಮಾರ್ಕೊಪೋಲೊ ಕಾರ್ಮಿಕ ಸಂಘದ ಅಧ್ಯಕ್ಷ ಅಭಿಷೇಕ್ ದೇಸಾಯಿ ಹೇಳಿದ್ದಾರೆ. [ಹೀರೋ ಮೋಟೊಕಾರ್ಪ್ ಗೆ ಕೈ ಕೊಟ್ಟ ಕರ್ನಾಟಕ]

ಕೆಲಸಕ್ಕೆ ಹಾಜರಾಗುವ ಕಾರ್ಮಿಕರಿಗೆ ಆಡಳಿತ ಮಂಡಳಿ 3 ಷರತ್ತುಗಳನ್ನು ವಿಧಿಸಿದೆ. ಕೆಲಸಕ್ಕೆ ತೊಂದರೆ ಮಾಡುವುದಿಲ್ಲ, ಶಿಸ್ತನ್ನು ಕಾಪಾಡುತ್ತೇವೆ ಮತ್ತು ಗುಣಮಟ್ಟ ಕಾಪಾಡಲು ಆದ್ಯತೆ ನೀಡುತ್ತೇವೆ ಎಂಬ ಷರತ್ತನ್ನು ಒಪ್ಪಿ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದಾರೆ.

ಮಾರ್ಕೊಪೋಲೊ ಘಟಕದಲ್ಲಿ 2000ಕ್ಕೂ ಅಧಿಕ ನೌಕರರಿದ್ದಾರೆ. ಪ್ರತಿಭಟನೆಗಿಳಿದಿದ್ದ ಕೆಲವು ನೌಕರರನ್ನು ಆಡಳಿತ ಮಂಡಳಿ ಅಮಾನತು ಮಾಡಿತ್ತು. ಇದನ್ನು ಪ್ರಶ್ನಿಸಿದ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್‌ನ ಪ್ರಕ್ರಿಯೆಗಳನ್ನು ಮುಗಿಸಿಕೊಂಡ ಬಳಿಕ ಅವರು ಕೆಲಸಕ್ಕೆ ಹಾಜರಾಗಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Leading automobile manufacturer Tata Motors has lifted the lockout at Tata Marcopolo plant at Dharwad, Karnataka. The management had declared a lockout at its bus manufacturing plant on February 6, 2016 after the workers protest for demanding higher wages.
Please Wait while comments are loading...