ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ಜರುಗಿದ ವಿದ್ಯಾ ಸಂತೆ

ಹುಬ್ಬಳ್ಳಿ, ಸೆಪ್ಟೆಂಬರ್ 21 : ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಮಾರುಕಟ್ಟೆ ಕೌಶಲ್ಯ ಅಭಿವೃದ್ದಿಪಡಿಸುವ ತಂತ್ರ - 'ವಿದ್ಯಾ ಸಂತೆ' ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿತ್ತು.

ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಧಾರವಾಡ (ಸಿಡಾಕ್), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಇವರ ಆಶ್ರಯದಲ್ಲಿ ಇದೇ ಸೆಪ್ಟೆಂಬರ್ 12, 13 ಮತ್ತು 14ರಂದು ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಕೆ.ಎಚ್.ಪಾಟೀಲ ವಾಣಿಜ್ಯ ಮತ್ತು ಬಿ.ಬಿ.ಎ. ಮಹಾವಿದ್ಯಾಲಯದಲ್ಲಿ ಯಶಸ್ವಿಯಾಗಿ ನಡೆಯಿತು.

3 ದಿನಗಳ ಕಾಲ ನಡೆದ ಈ ವಾಣಿಜ್ಯ ವ್ಯವಹಾರಿಕಾ ಮಾರಾಟ ಮಳಿಗೆ ವಿದ್ಯಾಸಂತೆಯಲ್ಲಿ ವಿದ್ಯಾರ್ಥಿಗಳು ತಾವೇ ಸ್ವತ: ತಯಾರಿಸಿದ ಅಥವಾ ಬೇರೆ ಕೈಗಾರಿಕಾ ವಸ್ತುಗಳ ಮಾರಾಟದ ಮತ್ತು ಆಹಾರ-ಉಪಹಾರ ಮಳಿಗೆಗಳನ್ನು ತೆರೆದು ಸಾರ್ವಜನಿಕ ಪ್ರದರ್ಶದ ಜೊತೆಗೆ ಮಾರಾಟ ಮಾಡಿದರು.

Successful Vidya Sante concludes in Hubballi

ಕೆ.ಎಲ್.ಇ. ಸೊಸೈಟಿ ಕಾಲೇಜ್ ಆಫ್ ಕಾಮಸ್, ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಕಾಮರ್ಸ್ ಕಾಲೇಜ್ ಹೆಗ್ಗೇರಿ, ನಲಂದ ಕಾಲೇಜ್ ಆಫ್ ಕಾಮರ್ಸ್, ನಿಡವಣಿ ಕಾಮರ್ಸ್ ಕಾಲೇಜ್ ಧಾರವಾಡ ಹಾಗೂ ಕೆ.ಎಚ್.ಪಾಟೀಲ್ ವಾಣಿಜ್ಯ ಕಾಲೇಜ್ ವಿದ್ಯಾನಗರದ ಸುಮಾರು 140 ವಾಣಿಜ್ಯ ವಿದ್ಯಾರ್ಥಿಗಳು ಈ ಸಂತೆಯಲ್ಲಿ ಭಾಗವಹಿಸಿದರು. ಮೇಳಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿತ್ತು.

ವಿಶ್ವಶ್ರೇಷ್ಠ ಯುನೆಸ್ಕೋ ಪ್ರಶಸ್ತಿ, ಇತ್ತೀಚೆಗೆ ರಾಷ್ಟ್ರಪತಿಯವರಿಂದ ಅತ್ಯುತ್ತಮ ಶಿಕ್ಷಕಿ ಪುರಸ್ಕಾರ ಪಡೆದ ಕುಮಾರಿ ಬಿಜಲ್ ದಮಾನಿ ಅವರು ವಾಣಿಜ್ಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಅವರು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಿ ತಮ್ಮ ಅನುಭವ ಹಂಚಿಕೊಂಡರು. [ಹುಬ್ಬಳ್ಳಿಯ ಈ ಸಂತೀ ಒಳಗ ಕಾಯಿಪಲ್ಯಾ ಸಿಗಂಗಿಲ್ಲ!]

Successful Vidya Sante concludes in Hubballi

ಮನರಂಜನೆ ಸಂತೆ:
ವಿದ್ಯಾಸಂತೆ ಕೇವಲ ಮಾರುಕಟ್ಟೆ ವ್ಯವಾರಿಕ ಜ್ಞಾನವನ್ನು ನೀಡದೆ, ವಿದ್ಯಾರ್ಥಿಗಳ ಮನ ತಣಿಸಲು ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸ್ತ್ರಿಯ ಗಾಯನ, ಜಾನಪದ ನೃತ್ಯ, ರೂಪಕ, ಭರತನಾಟ್ಯ, ಕಿರುನಾಟಕ ಅತಿಥಿಗಳೊಂದಿಗೆ ಸಂವಾದ ಏರ್ಪಡಿಸಲಾಗಿತ್ತು.

ವಿದ್ಯಾ ಸಂತೆ ವಿಶೇಷವಾಗಿ ವಾಣಿಜ್ಯ ವಿಷಯ ಅಧ್ಯಯನದ ವಿದ್ಯಾರ್ಥಿಗಳಿಗಾಗಿ ಪರಿಚಯಿಸಲಾಗಿದೆ. ಇಲ್ಲಿ ಈ ವಿದ್ಯಾರ್ಥಿಗಳು ವಾಣಿಜ್ಯ ವ್ಯಾಪಾರಿ ಮಳಿಗೆಗಳನ್ನು ಸ್ಥಾಪಿಸಿ, ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ವ್ಯವಹಾರಿಕ ಜ್ಞಾನವನ್ನು ಪಡೆಯುತ್ತಾರೆ. ಆ ಮೂಲಕ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಗುಣ, ವ್ಯವಹಾರಿಕ ಜ್ಞಾನ ಪಡೆಯಲು ಸಹಾಯಕವಾಗುತ್ತದೆ.

ವಿದ್ಯಾ ಸಂತೆ ಮೂಲ ಪರಿಕಲ್ಪನೆ :
ವಿದ್ಯಾ ಸಂತೆ ಎಂಬ ಪರಿಕಲ್ಪನೆ ಗುಜರಾತ ರಾಜ್ಯದಲ್ಲಿ ಬಿಜಲ್ ದಮಾನಿ ಎಂಬ ನುರಿತ ವ್ಯವಹಾರಿಕ ಜ್ಞಾನದ ಶಿಕ್ಷಕಿಯಿಂದ 2002ರಲ್ಲಿ ಆರಂಭಗೊಂಡಿತು. ಮೊದಲೇ ಪಕ್ಕಾ ಮಾರುಕಟ್ಟೆ ವ್ಯವಹಾರಿಕ ಕ್ಷೇತ್ರವಾದ ಆ ರಾಜ್ಯದಲ್ಲಿ ಈ ಯೋಜನೆ ಅನೇಕ ನುರಿತ ವಿದ್ಯಾರ್ಥಿ ಉದ್ಯಮಿಗಳ ಬೆಳವಣಿಗೆಗೆ ನೆರವಾಗಿದೆ.

ವಿದ್ಯಾಸಂತೆ ಮಾರುಕಟ್ಟೆಯ ಕ್ಷೇತ್ರಗಳು:
ವಿದ್ಯಾಸಂತೆಯಲ್ಲಿ ಆಯ್ದ ಕಾಲೇಜಗಳ ವಾಣಿಜ್ಯ ವಿದ್ಯಾರ್ಥಿಗಳು ಆಟೊಮೊಬೈಲ್, ಸಿದ್ಧವಸ್ತು ಉತ್ಪಾದನೆ, ಚರ್ಮೋದ್ಯಮ, ಆಭರಣ ತಯಾರಿಕೆ, ಸೌಂದರ್ಯ ವರ್ಧಕ, ಇಲೆಕ್ಟಿಕ್, ಎಲೆಕ್ಟ್ರಾನಿಕ್ಸ್, ಕರಕುಶಲ ವಸ್ತುಗಳು ಸ್ಟೆಷನರಿ ಉತ್ಪನ, ಪ್ಲಾಸ್ಟಿಕ್ ಸಾಮಗ್ರಿ, ಗಿಫ್ಟ್ -ಆರ್ಟಿಕಲ್, ಹೊಟೆಲ್ ಮ್ಯಾನೇಜಮೆಂಟ್, ಆಹಾರೋದ್ಯಮ, ಮನರಂಜನೆ, ಮೊಬೈಲ್ ಸೇವೆಗೆ ಸಂಬಂಧಪಟ್ಟ ಮಾರಾಟ ಮಳಿಗೆಗಳನ್ನು ತೆರೆಯುತ್ತಾರೆ. ನಂತರ ಸ್ವತ: ವಿದ್ಯಾರ್ಥಿಗಳೇ ಗ್ರಾಹಕರಿಗೆ ವಸ್ತ್ತಗಳನ್ನು ಮಾರಾಟ ಮಾಡಿ ಬಂದ ಲಾಭಾಂಶವನ್ನು ಪಡೆಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+