20 ದಿನದ ಮಗುವಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ

ಧಾರವಾಡ, ಅಕ್ಟೋಬರ್ 22 : ಧಾರವಾಡದ ನಾರಾಯಣ ಹೃದಯಾಲಯದ ವೈದ್ಯರು ಮಗುವಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ ನಡೆಸಿ ಜೀವದಾನ ನೀಡಿದ್ದಾರೆ. 20 ದಿನದ ಮಗು ಗಂಭೀರ ಹೃದಯ ಸಮಸ್ಯೆಯಿಂದ ಬಳಲುತ್ತಿತ್ತು.

ಹುಬ್ಬಳ್ಳಿ ಮೂಲಕ ಫಾರೂಕ್ ಮತ್ತು ಮುಬಿನ್ ದಂಪತಿಯ ಮಗು ಹುಟ್ಟಿದಾಗ 2.3 ಕೆಜಿ ತೂಕವಿತ್ತು. ಮಗುವಿನ ಹೃದಯದಲ್ಲಿ ರಕ್ತ ಪರಿಚಲನೆ ಸಮಸ್ಯೆ ಇರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದರು.

ಪೋಷಕರು ಮಗುವನ್ನು ಮೊದಲು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ವೈದ್ಯರು ನಾರಾಯಣ ಹೃದಯಾಲಕ್ಕೆ ಕಳುಹಿಸಿಕೊಟ್ಟಿದ್ದರು. ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.

ಮಗುವಿನ ಹೃದಯದ ಮಹಾಪಧಮನಿಯಲ್ಲಿ ದೊಡ್ಡ ಪ್ರಮಾಣದ ದೋಷವಿತ್ತು. ಇದರಿಂದಾಗಿ ರಕ್ತ ಪರಿಚಲನೆಗೆ ತೊಂದರೆಯಾಗಿತ್ತು. ಸೂಕ್ತ ಸಮಯದಲ್ಲಿ ಮಗುವಿಗೆ ಚಿಕಿತ್ಸೆ ಸಿಕ್ಕಿದೆ. ಇಲ್ಲವಾದಲ್ಲಿ ಗಂಭೀರ ಸಮಸ್ಯೆ ಎದುರಾಗುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.

Successful Heart Operation For 20 Days Old Child

ಮಗುವಿನ ಹೃದಯನಾಳದಲ್ಲಿ ಕೇವಲ 3 ಎಂಎಂ ಮಾತ್ರ ಜಾಗವಿತ್ತು. ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯನ್ನು ಪೂರ್ಣಗೊಳಿಸಿದ್ದು, ಮಗುವಿನ ಪೋಷಕರು ಸಂತಸಗೊಂಡಿದ್ದಾರೆ.

ಹೃದ್ರೋಗ ತಜ್ಞ ಡಾ. ಅರುಣ ಕೆ.ಬಬ್ಲೇಶ್ವರ, ಮುಖ್ಯ ಶಸ್ತ್ರ ಚಿಕಿತ್ಸಕ ಡಾ. ರವಿವರ್ಮ ಪಾಟೀಲ್, ಅರವಳಿಕೆ ತಜ್ಞರ ತಂಡ ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+