ಧಾರವಾಡದಲ್ಲಿ ರಂಗೇರಿದ ರಾಜ್ಯ ಒಲಿಂಪಿಕ್ ಹವಾ

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಧಾರವಾಡ, ಫೆಬ್ರವರಿ,4 : ಹುಬ್ಬಳ್ಳಿ- ಧಾರವಾಡ ಆವಳಿ ನಗರದಲ್ಲಿ ನಡೆಯುತ್ತಿರುವ ಒಲಿಂಪಿಕ್ 2017 ರ ಹವಾ ಜಿಲ್ಲೆಯಾದ್ಯಂತ ಹಬ್ಬಿದೆ. ವಿವಿಧ ಕ್ರೀಡೆಗಳಲ್ಲಿ ಭಾಗಿಯಾಗಲು ರಾಜ್ಯದೆಲ್ಲಡೆಯಿಂದ ಬಂದು ಭಾಗಿಯಾಗಿ ತಮ್ಮ ಪ್ರದರ್ಶವನ್ನು ಮೆರೆದಿದ್ದಾರೆ.

ಧಾರವಾಡದ ಆರ್ .ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗಿನಿಂದಲೇ ರಾಜ್ಯ ಒಲಂಪಿಕ್ ಕ್ರೀಡೆಗಳು ಆರಂಭವಾದವು ಆದರೆ ಸಿಎಂ ಸಿದ್ದರಾಮಯ್ಯನವರು ಕಾರ್ಯಕ್ರಮಕ್ಕೆ ಬಂದಿದ್ದು ಮಾತ್ರ ಸಂಜೆಗೆ. ಸಾಯಂಕಾಲದಲ್ಲಿಯೇ ಕಾರ್ಯಕ್ರಮವನ್ನು ಉದ್ಘಾಟಿಸಿ, ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಒಲಂಪಿಕ್ ಕ್ರೀಡಾಕೂಟ ಆಯೋಜಿಸಲಾಗುವುದು ಎಂದು ಹೇಳಿದರು.[ಒಲಿಂಪಿಕ್ 2017: ಸೈಕ್ಲಿಂಗಿನಲ್ಲಿ ವಿಜಯಪುರದ ಆರತಿಗೆ ಒಲಿದ ಚಿನ್ನ]

ಮುಂದಿನ ವರ್ಷಗಳಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಮುಂದಿನ ಬಜೆಟ್ ನಲ್ಲಿಯೂ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಮುಂದಿನ ಬಜೆಟ್ ನಲ್ಲಿ ಕ್ರೀಡೆಗೆ ಒತ್ತು

ಮುಂದಿನ ಬಜೆಟ್ ನಲ್ಲಿ ಕ್ರೀಡೆಗೆ ಒತ್ತು

ಭಾರತವು ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ ಅಲ್ಲದೇ ಶೇ.45 ರಷ್ಟು ಯುವಕ-ಯುವತಿಯರು ನಮ್ಮ ದೇಶದಲ್ಲಿದ್ದರೂ ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ನಮ್ಮ ಸಾಧನೆ ಅಷ್ಟೇನೂ ತೃಪ್ತಿಕರವಾಗಿಲ್ಲ.

ಮುಂಬರುವ ಬಜೆಟ್ ನಲ್ಲಿ ಕ್ರೀಡೆಗೆ ಹೆಚ್ಚಿನ ಪ್ರಮಾಣದ ಹಣವನ್ನು ಮೀಸಲಿಟ್ಟು ರಾಜ್ಯಮಟ್ಟದ ಕ್ರೀಡಾಂಗಣ, ಕ್ರೀಡಾ ವಸತಿ ನಿಲಯ ಹಾಗೂ ಇನ್ನಿತರ ಸವಲತ್ತು ನೀಡಲು ಒತ್ತು ನೀಡಲಾಗುವುದು ಎಂದರು.

ಮನರಂಜಿಸಿದ ಪಥಸಂಚಲನ

ಮನರಂಜಿಸಿದ ಪಥಸಂಚಲನ

ಸುಮಾರು 3180 ಕ್ಕೂ ಹೆಚ್ಚು ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು ಒಟ್ಟು 24 ಕ್ರೀಡೆಗಳು ಜರುಗಲಿವೆ. ಎಲ್ಲ ಕ್ರೀಡಾಪಟುಗಳು ಮೈದಾನದಲ್ಲಿ ಪಥಸಂಚಲನ ನಡೆಸಿ ನೆರೆದ ಸಾವಿರಾರು ಪ್ರೇಕ್ಷಕರ ಮನ ಸೆಳೆದರು.

500 ಹೆಚ್ಚು ಕಲಾವಿದರು

500 ಹೆಚ್ಚು ಕಲಾವಿದರು

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 500ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು. ಸಂಜೆಯ ಇಳಿ ಹೊತ್ತಿನಲ್ಲಿ ಪಟಾಕಿ ಮತ್ತು ಸಿಡಿಮದ್ದು ಸಿಡಿಸಿ ಕ್ರೀಡಾಕೂಟವನ್ನು ಸ್ವಾಗತಿಸಲಾಯಿತು.

ಟ್ರ್ಯಾಕ್ ಸೂಟ್ ಇಲ್ಲ

ಟ್ರ್ಯಾಕ್ ಸೂಟ್ ಇಲ್ಲ

ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕ್ರೀಡಾಪಟುಗಳಿಗೆ ಟೀ ಶರ್ಟ್ ಮತ್ತು ಟ್ರ್ಯಾಕ್ ಸೂಟ್ ನೀಡದಿರುವದು ಕ್ರೀಡಾಳುಗಳಿಗೆ ಬೇಸರ ಮೂಡಿಸಿದೆ. ಒಲಿಂಪಿಕ್ ನಲ್ಲಿ ಪಾಲ್ಗೊಂಡು ಎಲ್ಲ ಅಧಿಕಾರಿಗಳು ವಿಶೇಷ ಟ್ರ್ಯಾಕ್ ಸೂಟ್ ಧರಿಸಿದ್ದರೆ, ಕ್ರೀಡಾಳುಗಳು ಮಾತ್ರ ತಮ್ಮದೇ ಟ್ರ್ಯಾಕ್ ಸೂಟ್ ನಲ್ಲಿ ಪಥಸಂಚಲನ ನಡೆಸಿದರು.

100 ಕ್ರೀಡಾಳುಗಳಿಗೆ ತರಬೇತಿ

100 ಕ್ರೀಡಾಳುಗಳಿಗೆ ತರಬೇತಿ

ಕ್ರೀಡಾ ಬಜೆಟ್ ದ್ವಿಗುಣಗೊಳ್ಳಲಿದ್ದು, ಇದರಿಂದ 100 ಕ್ರೀಡಾ ಸಾಧಕರನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದು ಕ್ರೀಡಾ ಸಚಿವ ಪ್ರಮೋದ ಮಧ್ವರಾಜ್ ಹೇಳಿದರು.

ಅವರು ಸಂಜೆ ನಡೆದ ಒಲಿಂಪಿಕ್ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಈ ಭಾಗದಲ್ಲಿ ಶೂಟಿಂಗ್ ರೇಂಜ್ ಸ್ಥಾಫನೆ ಮಾಡಲಾಗುವುದು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
State level Olympic games inaugurated by Chief Minister Siddaramaiah in Dharwad R.N. Shetty stadium.
Please Wait while comments are loading...