ಮೈಸೂರು ದಸರಾ: ಧಾರವಾಡ ಸ್ತಬ್ದಚಿತ್ರಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಗರಿ
ಧಾರವಾಡ, ಅಕ್ಟೋಬರ್,14: ವಿಜೃಂಭಣೆಯ ಶುರುವಾದ ವಿಶ್ವ ವಿಖ್ಯಾತ ಮೈಸೂರಿನ ದಸರಾ 2024ಗೆ ಅದ್ಧೂರಿಯಾಗಿ ತೆರೆ ಬಿದ್ದಿದೆ. ಈ ಬಾರಿ ಅನೇಕ ವಿಶೇಷತೆಗಳಿಂದ ಕೂಡಿದ್ದ ನಾಡಹಬ್ಬವನ್ನು ದೇಶ, ವಿದೇಶ ಜನರು ಕಣ್ತುಂಬಿಕೊಂಡಿದ್ದಾರೆ. ಈ ಮೈಸೂರು ದಸರಾ ಮಹೋತ್ಸದ ಸ್ತಬ್ದಚಿತ್ರ ಉಪ ಸಮಿತಿಯಿಂದ ಸೋಮವಾರ ಫಲಿತಾಂಶ ಹೊರ ಬಿದ್ದಿದೆ. ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆ, ವಿದ್ಯಾಕಾಶಿಗೆ ಮತ್ತೊಂದು ಗರಿ ಲಭಿಸಿದೆ.
ಹೌದು, ಇಂದು ಮೈಸೂರು ದಸರಾ ಮಹೋತ್ಸದ ಸ್ತಬ್ದಚಿತ್ರ ಉಪ ಸಮಿತಿ ಸ್ತಬ್ದಚಿತ್ರಗಳ ಫಲಿತಾಂಶ ಪ್ರಕಟಿಸಿದೆ. ಇದರಲ್ಲಿ ಭಾಗವಹಿಸಿದ್ದ ಧಾರವಾಡ ಜಿಲ್ಲಾ ಪಂಚಾಯಿತ ಸ್ತಬ್ದಚಿತ್ರಕ್ಕೆ ರಾಜ್ಯಮಟ್ಟದ ದ್ವೀತಿಯ ಪ್ರಶಸ್ತಿ ಲಭಿಸಿದೆ. ಇದು ಅವಳಿ ನಗರದ ಜನರಲ್ಲಿ ಹರ್ಷ, ಹುಮ್ಮಸ್ಸು ಹೆಚ್ಚಾಗುವಂತೆ ಮಾಡಿದೆ.

ಇಸ್ರೋ ಗಗನಯಾನದಲ್ಲಿ ಹಣ್ಣಿನ ನೋಣಗಳ ಕುರಿತು ಧಾರವಾಡ ಜಿಲ್ಲಾ ಪಂಚಾಯತಿಯಿಂದ ಸ್ತಬ್ದ ಚಿತ್ರ ರೂಪಿಸಲಾಗಿತ್ತು. ಅತ್ಯತ್ತಮ ಸ್ತಬ್ದಚಿತ್ರ ಆಯ್ಕೆಗಾಗಿನ ತಜ್ಞರ ಸಮಿತಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲ ಜಿಲ್ಲೆಗಳ ಸ್ತಬ್ದ ಚಿತ್ರಗಳನ್ನು ಪರುಶೀಲಿಲಾಗಿತ್ತು. ಧಾರವಾಡ ಜಿಲ್ಲೆಯ ಈ ವಿನೂತನ, ವಿಶಿಷ್ಟ ಹಾಗೂ ಹೊಸ ವೈಜ್ಞಾನಿಕ ಸಂದೇಶ ಹೊಂದಿದ್ದ ಸ್ತಬ್ದಚಿತ್ರವನ್ನು ದ್ವೀತಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸ್ತಬ್ದಚಿತ್ರ ವಿಭಾಗದಲ್ಲಿ ದ್ವೀತಿಯ ಪ್ರಶಸ್ತಿ ಪಡೆಯುವ ಮೂಲಕ ಜಿಲ್ಲೆಗೆ ಗೌರವ ತಂದಿರುವ ಜಿಲ್ಲಾ ಪಂಚಾಯಿತ ಸಿಇಓ ಸ್ವರೂಪ ಟಿ.ಕೆ ಅವರು ಮತ್ತು ಅವರ ನೇತೃತ್ವದ ಅಧಿಕಾರಿಗಳ ತಂಡವನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹಾಗೂ ಇತರರು ಅಭಿನಂದಿಸಿದ್ದಾರೆ.
ಅದ್ಧೂರಿ ಜಂಬೂ ಸವಾರಿ, ದಸರಾಗೆ ತೆರೆ
ಶನಿವಾರ ಜಂಬೂ ಸವಾರಿ ನೋಡಲು ದೇಶ ವಿದೇಶಿ ಪ್ರವಾಸಿಗರು, ಚಾಮುಂಡೇಶ್ವರಿ ಭಕ್ತರು ಮೈಸೂರಿಗೆ ಆಗಮಿಸಿದ್ದರು. ಮೈಸೂರು ದಸರಾ ಅಂಬಾರಿ ಹೊತ್ತ ಅಭಿಮನ್ಯು (ಆನೆ) ಗಾಂಭಿರ್ಯ ನಡೆಗೆ, ದೀಪಾಲಂಕಾರದಿಂದ ಸಿಂಗಾರ ಗೊಂಡಿದ್ದು, ಮೈಸೂರು ಅರಮನೆ, ರಾಜಬೀದಿ, ವೃತ್ತಗಳನ್ನು ಜನಸ್ತೋಮ ಕಣ್ತುಂಬಿಕೊಂಡಿತು. ರಾಜ ಬೀದಿಯಲ್ಲಿ ಅಂಬಾರಿ ಮೆರವಣಿಗೆ ನೋಡಲು ಎರಡು ಕಣ್ತು ಸಾಲದಂತಿತ್ತು.
ಈ ಬಾರಿ ಡ್ರೋನ್ ಹಾರಾಟ ಹೆಚ್ಚು ವಿಶೇಷವಾಗಿತ್ತು. ಕಳೆದ ಹತ್ತು ದಿನಗಳ ಕಾಲ ನಿರಂತರವಾಗಿ ನಿರಂತರ ಕಾರ್ಯಕ್ರಮ ಜರುಗಿದವು. ಲಕ್ಷಾಂತರ ಜನರು ಮೈಸೂರಿನಲ್ಲಿ ಬೀಡು ಬಿಟ್ಟಿದ್ದರು. ದಸರಾ ಕೊನೆಗೊಂಡಿದ್ದು, ವಿಶ್ರಾಂತಿಯಲ್ಲಿರುವ ಆನೆಗಳ ಗುಂಪು ಇನ್ನೊಂದು ವಾರದಲ್ಲಿ ತಮ್ಮ ಮೂಲ ಬಿಡಾರಗಳತ್ತ ಮುಖ ಮಾಡಲಿವೆ.












Click it and Unblock the Notifications