ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ ಪ್ರದಾನ
ಗದಗ, ಫೆ.5 : ಗದಗ ಜಿಲ್ಲೆಯ ಯಲಿಶಿರೂರ ಗ್ರಾಮದ ಡಾ.ಎಸ್.ಪಿ.ಶಾನವಾಡ ಅವರಿಗೆ 2013ನೇ ಸಾಲಿನ ರಾಜ್ಯಮಟ್ಟದ "ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ" ನೀಡಿ ಗೌರವಿಸಲಾಗಿದೆ. ಪ್ರೊ.ಸಿ.ಪಿ.ಕೆ ಅವರು ಪ್ರಶಸ್ತಿಯನ್ನು ಭಾನುವಾರ ಪ್ರದಾನ ಮಾಡಿದ್ದಾರೆ.
ಗದಗದ ಮೈಸೂರಿನ ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಭಾನುವಾರ ನಡೆದ "ಪ್ರೇಮಕವಿ ಕೆ.ಎಸ್.ನರಸಿಂಹ ಸ್ವಾಮಿ" ನೆನಪಿನ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇಸುಬು ರೋಗದ ತಜ್ಞ ವೈದ್ಯರಾದ ಡಾ.ಎಸ್.ಪಿ.ಶಾನವಾಡ ಅವರಿಗೆ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಸಿ.ಪಿ.ಕೆ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಡಾ.ಎಸ್.ಪಿ.ಶಾನವಾಡ ಅವರು, ಆಯುರ್ವೇದ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಸಲ್ಲಿಸದ ಸೇವೆಯನ್ನು ಪರಿಗಣಿಸಿ ಈ ಪ್ರಶ್ತಿಯನ್ನು ನೀಡಲಾಗಿದೆ.
ಡಾ.ಎಸ್.ಪಿ.ಶಾನವಾಡ ಅವರು 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಇದುವರೆಗೂ ಯಶಸ್ವಿಯಾಗಿ 20 ಸಾವಿರಕ್ಕೂ ಹೆಚ್ಚಿನ ಹೆರಿಗೆಗಳನ್ನು ಮಾಡಿಸಿದ್ದಾರೆ. 10 ಸಾವಿರಕ್ಕೂ ಹೆಚ್ಚಿನ ಇಸುಬು ರೋಗಿಗಳನ್ನು ಗುಣಪಡಿಸಿದ್ದಾರೆ. ಆಯುರ್ವೇದ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಶಾನವಾಡ ಅವರಿಗೆ ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.












Click it and Unblock the Notifications