ನೈರುತ್ಯ ರೈಲ್ವೆ ಕಾಮಗಾರಿ ಚುರುಕು:ರೈಲುಗಳ ಮಾರ್ಗ & ಸಮಯ ಬದಲಾವಣೆಯ ಸಂಪೂರ್ಣ ಮಾಹಿತಿ

ಹುಬ್ಬಳ್ಳಿ, ಸೆಪ್ಟೆಂಬರ್‌ 19: ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿನ ರೈಲ್ವೆ ಕಾಮಗಾರಿ ಹಿನ್ನೆಲೆಯಲ್ಲಿ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ಸೇರಿದಂತೆ ವಿವಿಧ ರೈಲುಗಳ ಮಾರ್ಗ ಮತ್ತು ವೇಳಾಪಟ್ಟಿ ಬದಲಾವಣೆಯಾಗಿದೆ.

ಉಗಾರ ಖುರ್ದ್-ಕುಡಚಿ ಭಾಗದ ನಡುವಿನ ಜೋಡಿ ಮಾರ್ಗದ ಇಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಕೆಲವು ರೈಲುಗಳನ್ನು ರದ್ದು ಭಾಗಶಃ,ರದ್ದು ತಡವಾಗಿ ಪ್ರಾರಂಭ ಮತ್ತು ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

South Western Railway Work Faster: Complete Information About Train Route & Timing Changes

ರೈಲು ಸಂಖ್ಯೆ 17332 ಎಸ್.ಎಸ್.ಎಸ್ ಹುಬ್ಬಳ್ಳಿ-ಮಿರಜ್ ಡೈಲಿ ಎಕ್ಸ್‌ಪ್ರೆಸ್‌ ಸೆಪ್ಟೆಂಬರ್ 22 ರಿಂದ 26 ರವರೆಗೆ ರದ್ದುಗೊಳಿಸಲಾಗುತ್ತಿದೆ.

ರೈಲು ಸಂಖ್ಯೆ 17333/17334 ಮೀರಜ್-ಕ್ಯಾಸಲ್ ರಾಕ್-ಮೀರಜ್ ಡೈಲಿ ಎಕ್ಸ್‌ಪ್ರೆಸ್‌ ರೈಲುಗಳನ್ನು ಸೆಪ್ಟೆಂಬರ್ 22 ರಿಂದ 26 ರವರೆಗೆ ರದ್ದುಗೊಳಿಸಲಾಗುತ್ತಿದೆ.

ರೈಲು ಸಂಖ್ಯೆ 17331 ಮೀರಜ್-ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್‌ ರೈಲನ್ನು ಸೆಪ್ಟೆಂಬರ್ 23 ರಿಂದ 27 ರವರೆಗೆ ರದ್ದುಗೊಳಿಸಲಾಗುತ್ತಿದೆ.

ನೈಋತ್ಯ ರೈಲ್ವೆ ವಲಯ

ಹಬ್ಬದ ದಿನಗಳಲ್ಲಿ 83 ವಿಶೇಷ ರೈಲುಗಳು, 1,798 ಹೆಚ್ಚುವರಿ ಬೋಗಿಗಳ ಅಳವಡಿಕೆ 2 ರೈಲುಗಳು ಭಾಗಶಃ ರದ್ದು. ಸೆಪ್ಟೆಂಬರ್ 21 ರಿಂದ 25 ರವರೆಗೆ ತಿರುಪತಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17415 ತಿರುಪತಿ-ಕೊಲ್ಹಾಪುರ ಹರಿಪ್ರಿಯಾ ಡೈಲಿ ಎಕ್ಸ್‌ಪ್ರೆಸ್‌ ರೈಲನ್ನು ಬೆಳಗಾವಿ-ಕೊಲ್ಹಾಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಸೇವೆ ಬೆಳಗಾವಿಯಲ್ಲಿ ಕೊನೆಯಾಗಲಿದೆ.

ರೈಲು ಸಂಖ್ಯೆ 17416 ಕೊಲ್ಹಾಪುರ-ತಿರುಪತಿ ಹರಿಪ್ರಿಯಾ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಕೊಲ್ಹಾಪುರ-ಬೆಳಗಾವಿ ನಿಲ್ದಾಣಗಳ ನಡುವೆ ಸೆಪ್ಟೆಂಬರ್ 22 ರಿಂದ 26 ರವರೆಗೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಹೀಗಾಗಿ ಈ ರೈಲು ಕೊಲ್ಹಾಪುರ ನಿಲ್ದಾಣದ ಬದಲು ಬೆಳಗಾವಿ ನಿಲ್ದಾಣದಿಂದ ತನ್ನ ನಿಗದಿತ ಸಮಯದಲ್ಲಿ ಪ್ರಾರಂಭವಾಗಲಿದೆ.

South Western Railway Work Faster: Complete Information About Train Route & Timing Changes

ರಾಣಿ ಚೆನ್ನಮ್ಮ ರೈಲು ತಡವಾಗಿ ಪ್ರಾರಂಭ?

ರೈಲು ಸಂಖ್ಯೆ 16590 ಮೀರಜ್-ಕೆ.ಎಸ್.ಆರ್ ಬೆಂಗಳೂರು ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲನ್ನು ಸೆಪ್ಟೆಂಬರ್ 22 ರಿಂದ 24 ರವರೆಗೆ 40 ನಿಮಿಷ ಹಾಗೂ ಸೆಪ್ಟೆಂಬರ್ 26 ರಂದು 60 ನಿಮಿಷಗಳ ಕಾಲ ಮಿರಜ್ ನಿಲ್ದಾಣದಿಂದ ತಡವಾಗಿ ಪ್ರಾರಂಭವಾಗಲಿದೆ.

ಮಾರ್ಗ ಮಧ್ಯ ನಿಯಂತ್ರಣ

ಸೆಪ್ಟೆಂಬರ್ 25ರಂದು ಎರ್ನಾಕುಲಂ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 11098 ಎರ್ನಾಕುಲಂ-ಪುಣೆ ಎಕ್ಸ್ಪ್ರೆಸ್ ರೈಲನ್ನು ಮಾರ್ಗ ಮಧ್ಯ 60 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

ಮೈಸೂರು ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ಮಾರ್ಗ ಬದಲಾವಣೆ

ಸೆಪ್ಟೆಂಬರ್ 25 ರಂದು ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12782 ಹಜರತ್ ನಿಜಾಮುದ್ದೀನ್ -ಮೈಸೂರು ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಅಹ್ಮದನಗರ್, ದೌಂಡ್, ಕುರ್ದುವಾಡಿ, ಪಕ್ನಿ, ಸೋಲಾಪುರ, ಹೊಟಗಿ, ವಿಜಯಪುರ, ಗದಗ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ, ದೌಂಡ್ ಕಾರ್ಡ್ ಲೈನ್, ಪುಣೆ, ಸತಾರಾ, ಕರಾಡ , ಸಾಂಗ್ಲಿ, ಮಿರಜ್, ಬೆಳಗಾವಿ ಮತ್ತು ಧಾರವಾಡ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ವಲಯ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+