ಹುಬ್ಬಳ್ಳಿ ಟೈ ಸಮಾವೇಶದಲ್ಲಿ, ದಿಗ್ಗಜ ಮಹಿಳೆಯರ ಸಾಧನೆಯಾನ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ,06: ಮಹಿಳೆಯರ ನೇತೃತ್ವದಲ್ಲಿ ಉದ್ಯಮಗಳು ಆರಂಭವಾದರೆ ಅವು ಯಶಸ್ಸನ್ನು ಸಾಧಿಸುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹೇಳಿದರು.

ಶುಕ್ರವಾರ ನಗರದ ಖಾಸಗಿ ಹೊಟೆಲ್ ನಲ್ಲಿ ನಡೆದ "ಟೈ" ಮಹಿಳಾ ಅಧಿವೇಶನದ ಮೊದಲ ದಿನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ.ಶಾಲಿನಿ ರಜನೀಶ್ ಅವರು, 'ಮಹಿಳೆಯರು ಉದ್ಯಮ ಕ್ಷೇತ್ರಕ್ಕೆ ಬರುತ್ತಿಲ್ಲ. ಗ್ರಾಮೀಣ ಕೃಷಿ ಮಹಿಳೆಯರು ಉದ್ಯಮ ಸ್ಥಾಪನೆ ಮಾಡಲು ಸಾಧ್ಯವೇ ಇಲ್ಲ ಎನ್ನುವ ದುಃಸ್ಥಿತಿಯಿದೆ ಎಂದು ವಿಷಾದ ವ್ಯಕ್ತಪಡಿಸಿದ ಡಾ.ಶಾಲಿನಿ, ಮಹಿಳೆಯರು ಉದ್ಯಮಶೀಲತಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.['ಗ್ಯಾಂಗ್ ರೇಪ್, ಜೈಲುವಾಸ ನನ್ನ ಹೋರಾಟಕ್ಕೆ ಪ್ರೇರಣೆ']

ಈ ಟೈ ಸಮಾವೇಶದಲ್ಲಿ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ ಸರ್ಕಲ್ ಮುಖ್ಯಸ್ಥೆ ರಜನಿ ಮಿಶ್ರಾ, ಬಾಹ್ಯಾಕಾಶ ಯಾನಿ , ಮೇರಿಕದ ಪ್ರೊಡಿಯಾ ಸಿಸ್ಟಮ್ಸ್ ನ ಸಹ ಸಂಸ್ಥಾಪಕಿ ಹಾಗೂ ಸಿಇಓ ಇರಾನಿ ಸಂಜಾತೆ ಡಾ.ಅನೌಶೆ ಅನ್ಸಾರಿ ಹೀಗೆ ನಾನಾ ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು. ಇವರ ಉತ್ಸಾಹ ಪ್ರತಿಯೊಬ್ಬರಲ್ಲೂ ಸಾಧನೆಯ ಕಡೆ ಮುಖ ಮಾಡುವಂತೆ ಮಾಡಿತ್ತು.

ಟೈ ಸಮಾವೇಶದಲ್ಲಿ ಪ್ರತಿಯೊಬ್ಬರು ತಮ್ಮ ಭಾವಯಾನದಲ್ಲಿ ಪಯಣಿಸಿದ್ದು, ಅವರ ಸಾಧನೆಯ ಹಾದಿಯನ್ನು ತೆರೆದಿಟ್ಟರು. ಬನ್ನಿ ಅವರ ಸಾಧನೆಯ ಹಾದಿಯಲ್ಲಿ ನಾವು ಪಯಣಿಸೋಣ. ಇಲ್ಲಿವೆ ಅವರ ಮಾತುಗಳು.

ಡಾ. ಶಾಲಿನಿ ರಜನೀಶ್ ಹೇಳಿದ್ದೇನು?

ಡಾ. ಶಾಲಿನಿ ರಜನೀಶ್ ಹೇಳಿದ್ದೇನು?

ಪುರುಷ ಹಾಗೂ ಮಹಿಳೆಯರ ಲಿಂಗಾನುಪಾತ ನೋಡಿದಾಗ ಜಗತ್ತಿನಲ್ಲಿ ಶೇ.50 ಮಹಿಳೆಯರಿದ್ದಾರೆ. ಇದರಲ್ಲಿ ಶೇ.60 ರಷ್ಟು ಮಂದಿ ಕೆಲಸದಲ್ಲಿದ್ದಾರೆ. ಇವರು ಜೀವಮಾನವಿಡೀ ಮಾಡಿದ ಕೆಲಸ ಲೆಕ್ಕ ಹಾಕಿದರೆ ಒಂದು ಕಂಪನಿಯ ಸಿಇಓ ಪಡೆದುಕೊಳ್ಳುವಷ್ಟು ಸಂಪಾದನೆ ಮಾಡಬಹುದು ಎಂದು ವಿವರಿಸಿದರು.

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್ ಮಾತುಗಳು

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್ ಮಾತುಗಳು

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್ ಮಾತನಾಡಿ, ಕಠಿಣ ಪರಿಶ್ರಮದಿಂದ ಯಶಸ್ಸು ಖಂಡಿತವಾಗಿ ಸಿಗುತ್ತದೆ. ಯಾವುದೇ ಕ್ಷೇತ್ರವಿರಲಿ ಕಠಿಣ ಪರಿಶ್ರಮ, ಶ್ರದ್ಧೆ ಮುಖ್ಯ ಎಂದರು.

ರಜನಿ ಮಿಶ್ರಾ ಯಾರು? ಏನು ಮಾಡಿದ್ದಾರೆ?

ರಜನಿ ಮಿಶ್ರಾ ಯಾರು? ಏನು ಮಾಡಿದ್ದಾರೆ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ ಸರ್ಕಲ್ ಮುಖ್ಯಸ್ಥೆ ರಜನಿ ಮಿಶ್ರಾ ಮಾತನಾಡಿ, ಹುಬ್ಬಳ್ಳಿಯಲ್ಲಿ ಮಹಿಳಾ ನವೋದ್ಯಮಿಗಳಿಗೆ ಸಹಾಯವಾಣಿ, ಕೌನ್ಸೆಲಿಂಗ್, ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಬ್ಯಾಂಕ್ ವತಿಯಿಂದ ಸೆಟಲೈಟ್ ಸಲಹಾ ಕೇಂದ್ರ ಆರಂಭಿಸಲಾಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಇಂತಹ ಕೇಂದ್ರವೊಂದು ಕಾರ್ಯನಿರತವಾಗಿದೆ ಎಂದರು.

ಬಾಹ್ಯಾಕಾಶ ಯಾನಿಯ ಮಾತುಗಳು :

ಬಾಹ್ಯಾಕಾಶ ಯಾನಿಯ ಮಾತುಗಳು :

ಮನುಷ್ಯ ಕನಸು ಕಂಡರೆ ಮಾತ್ರ ದೊಡ್ಡ ವ್ಯಕ್ತಿಯಾಗಲು ಸಾಧ್ಯ ಎಂದು ಅಮೇರಿಕದ ಪ್ರೊಡಿಯಾ ಸಿಸ್ಟಮ್ಸ್ ನ ಸಹ ಸಂಸ್ಥಾಪಕಿ ಹಾಗೂ ಸಿಇಓ ಡಾ.ಅನೌನೇಶ ಅನ್ಸಾರಿ ಹೇಳಿದರು. "ಮಹಿಳಾ ವಾಣಿಜ್ಯೋದ್ಯಮಿಯಾಗಿ ಬಾಹ್ಯಾಕಾಶದಲ್ಲಿ ನನ್ನ ಪ್ರವಾಸ" ವಿಷಯ ಮಾತನಾಡುತ್ತ, ನಾ ಬಾಲ್ಯದಲ್ಲಿ ನಕ್ಷತ್ರಗಳ ಬಳಿ ಹೋಗುವ ಕನಸು ಕಂಡಿದ್ದೆ. 10 ವರ್ಷಗಳ ಹಿಂದೆ ನಾನು ಸ್ಪೇಸ್ ಅಡ್ವೆಂಚರ್ಸ್ನಲ್ಲಿ 6 ತಿಂಗಳು ತರಬೇತಿ ಪೂರ್ಣಗೊಳಿಸಿ 2006 ಸೆಪ್ಟೆಂಬರ್ 18 ಕ್ಕೆ ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಸುಯಾಜ್ ಟಿಎಂಎ-9 ಉಪಗ್ರಹ ಮೂಲಕ ಆಕಾಶಕ್ಕೆ ಹಾರಿದೆ. 10 ದಿನಗಳು ನಭೋಮಂಡಲದಲ್ಲಿದ್ದು ಶೂನ್ಯ ಗುರುತ್ವಾಕರ್ಷಣೆ, ಆಕಾಶದ ಅಚ್ಚರಿಗಳನ್ನು ನೋಡಿ ದಿಗ್ಬ್ರಾಂತಳಾಗಿದ್ದೆ ಎಂದರು

ಕಿವುಡರಿಗೆ ಸಂಗೀತ ಸಾಧನ

ಕಿವುಡರಿಗೆ ಸಂಗೀತ ಸಾಧನ

ಕಿವುಡು ಮಕ್ಕಳಿಗೆ ಸಂಗೀತದ ಅನುಭವ ನೀಡಲು ವೈಬ್ರೇಟ್ ಸಾಧನವನ್ನು ಜಾನ್ವಿ ಜೋಶಿ ಮತ್ತು ನೂಪುರಾ ಕಿಲರಸ್ಕೋಸ್ಕರ್ ನಿರ್ಮಿಸಿದ್ದಾರೆ. ಕಾಲೇಜ್ ಪ್ರಾಜೆಕ್ಟ್ಗಾಗಿ ಮಾದರಿಯಾಗಿ ಈ ಸಾಧನ ನಿರ್ಮಿಸಲಾಗಿತ್ತು. ಈಗ 'ಗೆಟ್ ಬ್ಲಿ' ಎನ್ನುವ ಉದ್ಯಮ ಆರಂಭಿಸಲು ಸಾಧ್ಯವಾಗಿದೆ ಎಂದರು. ಕಿವುಡು ಮಕ್ಕಳಿಗಾಗಿ ತಾವು ವೈಬ್ರೆಟ್ ಎಂಬ ಸಾಧನ ನಿರ್ಮಾಣ ಮಾಡುತ್ತಿದ್ದೇವೆ ಎಂದರು. ಟೈ ಅಧ್ಯಕ್ಷ ಗೌತಮ ಓಸ್ವಾಲ್, ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕಿ ಜಯಶ್ರೀ ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dr. Shalini rajneesh, Hescom Managing Director Kushboo goel, State bank of India Karnataka circle Director Rajani Mishra and other women participated in tai samavesha in Hubballi on Friday, February 06th.
Please Wait while comments are loading...