ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ, ನಾನು ಯಾವ ರೇಸಿನಲ್ಲಿ ಇಲ್ಲ: ಆರ್.ವಿ.ದೇಶಪಾಂಡೆ

ಧಾರವಾಡ, ಸೆಪ್ಟಂಬರ್ 04: ರಾಜ್ಯ ಸರ್ಕಾರದ ಮಟ್ಟದಲ್ಲಿ ಆಗಾಗ ಮುಖ್ಯಮಂತ್ರಿಗಳ ಬದಲಾವಣೆ, ಸಿಎಂ ಕುರ್ಚಿಗಾಗಿ ರೇಸ್‌ನಲ್ಲಿ ಯಾರಿದ್ದಾರೆ ಎಂಬ ವಿಚಾರ ಮುನ್ನೆಲೆಗೆ ಬರುತ್ತದೆ. ಮೊನ್ನೆಯಷ್ಟೇ ನಾನು ಸಹ ಮುಖ್ಯಮಂತ್ರಿ ಆಗುವೆ ಎಂದು ಹೇಳಿದ್ದ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಅವರು, ಇದೀಗ ಸಿಎಂ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಇರುತ್ತಾರೆ ಎಂದು ತಿಳಿಸಿದ್ದಾರೆ.

ಧಾರವಾಡದಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಆರಂಭದಲ್ಲಿ ರಾಜಕೀಯವಾಗಿ ಏನನ್ನು ನಾನು ಮಾತನಾಡುವುದಿಲ್ಲ ಎನ್ನು ಮಾತು ಆರಂಭಿಸಿದರು. ನಾನು ಮುಖ್ಯಮಂತ್ರಿ ರೇಸ್, ಯಾವ ರೇಸ್‌ನಲ್ಲೂ ಇಲ್ಲ. ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಐದು ವರ್ಷ ಮುಂದುವರೆಯುತ್ತಾರೆ ಎಂದು ತಿಳಿಸಿದರು.

RV Deshpande Talk Again CM Siddaramaiah Post

ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಸಹ ಕಷ್ಟ ಪಡುತ್ತಿದ್ದಾರೆ. ಸರ್ಕಾರದಲ್ಲಿ ಎಲ್ಲವೂ ಸರಿ ಇದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನದ ಮೇಲೆ ಆಸೆಪಡಲು ಅವಕಾಶವೇ ಇಲ್ಲ.

ಸಿಎಂ ಸ್ಥಾನದ ವಿಚಾರವಾಗಿ ಮಾಧ್ಯಮದವರು ಎಷ್ಟು ಪ್ರಚೋದನೆ ಮಾಡಿದರೂ ನಾನು ನಿಮ್ಮ ಬಲೆಯಲ್ಲಿ ಬಿಳಲ್ಲ ಸರ್ಕಾರ ಹಾಗೂ ಸಿಎಂ ಕುರ್ಚಿ ವಿಚಾರದ ಹೇಳಿಕೆಯ ಗೊಂದಲಗಳಿಗೆ ಅವರು ತೆರೆ ಎಳೆದರು.

RV Deshpande Talk Again CM Siddaramaiah Post

ನಮ್ಮ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ತಂದಿದ್ದೆ. ರೂ. 57,000 ಕೋಟಿ ಹಣ ಗ್ಯಾರೆಂಟಿ ಯೋಜನೆಗಳಿಗೆ ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಾರಕಿಹೋಳಿ ದೆಹಲಿ ಭೇಟಿ ಬಗ್ಗೆ ಹೇಳಿದ್ದೇನು?

ಸತೀಶ್ ಜಾರಕಿಹೋಳಿ ದೆಹಲಿ ಬೇಟಿ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಾರಕಿಹೊಳಿಯವರು ಒಬ್ಬ ಜವಾಬ್ದಾರಿ ಸಚಿವರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಬೇಟಿಯಾಗಿ ಹೆಚ್ಚಿನ ಅನುದಾನ ತರಲು ದೆಹಲಿಗೆ ಹೋಗಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮದ್ಯ ಸೇವನೆ ಸಿದ್ದರಾಮಯ್ಯ ಸರ್ಕಾರದಲ್ಲಿ ಆರಂಭವಾಗಿಲ್ಲ

ಐದು ಗ್ಯಾರೆಂಟಿ ಯೋಜನೆಗಳಿಂದ ಜನರು ಮದ್ಯ ಸೇವನೆಗೆ ದಾಸರಾಗಿದ್ದಾರೆ ಎಂದು ವರೂರು ಸ್ವಾಮಿಜಿ ಅವರ ಹೇಳಿಕೆ ವಿಚಾರ, ಸ್ವಾಮಿಜಿ ಹೇಳಿದರ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ಮದ್ಯ ಸೇವನೆ ಮಾಡಬಾರದು ಎಂದು ಅಪಿಲು ಮಾಡುತ್ತೇನೆ. ಮದ್ಯ ಸೇವನೆ ಸಿದ್ದರಾಮಯ್ಯ ಸರ್ಕಾರ ಬಂದಾಗ ಆರಂಭವಾಗಿಲ್ಲ. ಅಜ್ಜ ಮುತ್ತಜ್ಜರ ಕಾಲದಿಂದಲೂ ಆರಂಭವಾಗಿದೆ. ಕೆಲವರು ಹೆಚ್ಚು ಮದ್ಯ ಸೇವಿಸುತ್ತಾರೆ ಎಂದು ಅವರು ಆರೋಪ ತಳ್ಳಿಹಾಕಿದರು.

ಮದ್ಯ ಮಾರಾಟ ಬಂದ್ ಮಾಡುವ ಕಾರ್ಯಕ್ರಮ ಯಾವ ಸರ್ಕಾರದಲ್ಲಿ ಇಲ್ಲ. ಲಿಕ್ಕರ್ ಮೇಲೆ ಆರೋಗ್ಯಕ್ಕೆ ಹಾನಿಕರ ಎಂದು ಬರೆದಿರುತ್ತಾರೆ. ಅದನ್ನು ಜನರು ಓದುಬೇಕು, ಅದಕ್ಕೆ ನಾನು ಏನು ಮಾಡಲಿ? ಸರ್ಕಾರ ಇನ್ನೆನೂ ಮನೆಮನೆಗೆ ಹೋಗಿ ಹೇಳಬೇಕು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+