Dharwad Road accident: ತೇಗೂರಿನಲ್ಲಿ ಪುಟ್ಟ ಕಂದಮ್ಮ ಸೇರಿ 5 ಮಂದಿ ದುರ್ಮರಣ, ಮೂವರಿಗೆ ಗಂಭೀರ ಗಾಯ

ತೇಗೂರಿನ ಬಳಿ ಭೀಕರ ರಸ್ತೆ ಅಪಘಾತವಾಗಿದ್ದು, ಅಪಘಾತದಲ್ಲಿ 5 ವರ್ಷದ ಪುಟ್ಟ ಕಂದಮ್ಮ ಸೇರಿ 5 ಮಂದಿ ದುರ್ಮರಣ, ಮೂವರಿಗೆ ಗಂಭೀರ ಗಾಯಗೊಂಡಿದ್ದಾರೆ.

ಧಾರವಾಡ, ಫೆಬ್ರವರಿ, 23: ಧಾರವಾಡ ತಾಲೂಕಿನ ತೇಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿ ಹಾಗೂ ಕಾರಿನ ಮಧ್ಯೆ ಭೀಕರ ರಸ್ತೆ ಅಪಘಾತವಾಗಿದೆ. ಈ ಭೀಕರ ಅಪಘಾತದಲ್ಲಿ ಒಂದು ಮಗು ಸೇರಿದಂತೆ ಒಟ್ಟು 5 ಜನ ಸಾವನ್ನಪಿದ್ದು, 3 ಜನ ಗಂಭೀರ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಪಘಾತದಲ್ಲಿ ಸಾವನ್ನಪ್ಪಿದವರ ವಿವರ
ಕಿತ್ತೂರು ತಾಲೂಕಿನ ಅವರಾದಿ ಗ್ರಾಮದ ನಾಗಪ್ಪ ಮುದ್ದೋಜಿ (29), ಮಹಾಂತೇಶ ಮುದ್ದೋಜಿ (40), ಬಸವರಾಜ ನರಗುಂದ (35), ನಿಚ್ಚಣಕಿ ಗ್ರಾಮದ ಶ್ರೀಕುಮಾರ ನರಗುಂದ (5 ವರ್ಷದ ಮಗು) ಹಾಗೂ ಹೆಬ್ಬಳ್ಳಿ ಗ್ರಾಮದ ಪಾದಚಾರಿ ಈರಣ್ಣ ರಾಮನಗೌಡರ (35) ಎಂಬುವವರಯ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

Road accident in Tegur: 5 people including child death, 3 injured

ಅಪಘಾತದಲ್ಲಿ ಗಾಯಗೊಂಡವರ ವಿವರ
ಇನ್ನು ಶ್ರವಣಕುಮಾರ ನರಗುಂದ (07), ಮಡಿವಾಳಪ್ಪ ಅಳ್ನಾವರ, ಪ್ರಕಾಶಗೌಡ ಪಾಟೀಲ (22) ಹಾಗೂ ಮಂಜುನಾಥ ಶಿಂಧೆ (22) ಎನ್ನುವವರು ಅಪಘಾತದಲ್ಲಿ ಗಂಭೀರ ಗಾಯಗೊಂಡವರಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇನ್ನು ಮಂಜುನಾಥ ಮುದ್ದೋಜಿ ಎಂಬಾತ ಅಗ್ನಿಪಥ ಯೋಜನೆಯಡಿ ಸೈನ್ಯಕ್ಕೆ ಸೇರ್ಪಡೆಯಾಗಿದ್ದರು. ಆತನನ್ನ ಬಿಟ್ಟು ಬರಲೆಂದು ಇವರೆಲ್ಲರು ಕಾರು ತೆಗೆದುಕೊಂಡು ಹುಬ್ಬಳ್ಳಿಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+