ವಿದ್ಯುತ್ ಉಳಿಸಿ, ಮಿತವಾಗಿ ಬಳಿಸಿ, ಮನುಕುಲವನ್ನು ಬೆಳೆಸಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಮೇ 22 : ನಗರದ ದೇಶಪಾಂಡೆ ಏಜ್ಯುಕೇಶನಲ್ ಟ್ರಸ್ಟ್, ಹುಬ್ಬಳ್ಳಿ ಮತ್ತು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಂಯುಕ್ತ ಆಶ್ರಯದಲ್ಲಿ ವಿದ್ಯುತ್ ಉಳಿತಾಯದ ಜಾಗೃತಿ ಮೂಡಿಸಲು ಶನಿವಾರ ಜಾಥಾ ಹಮ್ಮಿಕೊಂಡಿತ್ತು.

"ವಿದ್ಯುತ್‌ನ್ನು ಉಳಿಸಿ, ಮಿತವಾಗಿ ಬಳಿಸಿ, ಮನುಕುಲವನ್ನು ಬೆಳೆಸಿ" ಎನ್ನುವ ಘೋಷವಾಕ್ಯದೊಂದಿಗೆ ವಿದ್ಯಾನಗರದ ದೇಶಪಾಂಡೆ ಎಜ್ಯುಕೇಶನಲ್ ಟ್ರಸ್ಟ್ ನಲ್ಲಿ ಆರಂಭವಾದ ಜಾಥಾವನ್ನು ಹೆಸ್ಕಾಂ ಆಡಳಿತ ವ್ಯವಸ್ಥಾಪಕ ಎಸ್. ಆರ್. ಕುಲಕರ್ಣಿ ಉದ್ಘಾಟಿಸಿದರು. [ಕರೆಂಟು ಕೈಕೊಟ್ಟಾಗ ಅಂಗಿ ಇಸ್ತ್ರಿ ಹೆಂಗೆ ಮಾಡ್ತೀರಿ?]

Rally in Hubballi to save power by hescom and Deshpande trust

ನಂತರ ಮಾತನಾಡಿದ ಕುಲಕರ್ಣಿ, ಭವಿಷ್ಯತ್ತಿಗಾಗಿ ವಿದ್ಯುತ್ತನ್ನು ಉಳಿಸಿ ದೇಶವನ್ನು ಬೆಳೆಸಬೇಕಾಗಿದೆ ಎಂದರು. ದೇಶಪಾಂಡೆ ಎಜ್ಯುಕೇಶನಲ್ ಟ್ರಸ್ಟ್ಟ್ ಇವರೊಂದಿಗೆ ವಿದ್ಯುತ್ ಉಳಿತಾಯ ಮಾಡಲು ಹಮ್ಮಿಕೊಳ್ಳುವ ಅರಿವು ಕಾರ್ಯಕ್ರಮಗಗಳ ವಿವರ ನೀಡಿದರು. [ಮೋದಿ ಮನದ ಮಾತು: ಬರಗಾಲ, ಅರಣ್ಯ ರಕ್ಷಣೆಗೆ ಅದ್ಯತೆ]

ಹೆಸ್ಕಾಂ ವ್ಯವಸ್ಥಾಪಕ ನೀರ್ದೇಶಕಿ ಖುಷ್ಬು ಗೋಯಲ್ ಮಾತನಾಡಿ, ವಿದ್ಯುತ್ ಉಳಿಕೆ ಪ್ರತಿಯೊಬ್ಬ ನಾಗರಿಕನ ಹಕ್ಕು. ಇದನ್ನು ಜಾರಿಯಾಗಲು ನಾವು ನೀವೆಲ್ಲಾ ಕೈ ಜೋಡಿಸುವಲ್ಲಿ ಪಾತ್ರರಾಗೋಣ ಎಂದರು. [ಬ್ರೇಕಿಂಗ್ : ಕರ್ನಾಟಕದಲ್ಲಿ ವಿದ್ಯುತ್ ದರಗಳು ಏರಿಕೆ]

Rally in Hubballi to save power by hescom and Deshpande trust

ದೇಶಪಾಂಡೆ ಎಜ್ಯುಕೇಶನಲ್ ಟ್ರಸ್ಟ್ ಹುಬ್ಬಳ್ಳಿಯ ವ್ಯವಸ್ಥಾಪಕ ನವೀನ ಝಾ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಮ್ಮೊಂದಿಗೆ ಕೈ ಜೋಡಿಸಿರುವದಕ್ಕೆ ಹರ್ಷ ವ್ಯಕ್ತಪಡಿಸಿದರು. ಜಾಥಾದ ಉದ್ದೇಶ ಏನು ಎನ್ನುವದನ್ನು ಎಲ್ಲರಿಗೆ ಅರಿವು ಬರುವಂತಾಗಲಿ, ದೇಶದ ಅಭಿವೃದ್ಧಿಗೆ ವಿದ್ಯುತ್ ಉಳಿತಾಯ ಅತ್ಯವಶ್ಯಕ ಎಂದರು.

ಜಾಥಾದಲ್ಲಿ 300ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು, ಹೆಸ್ಕಾಂ ಸಿಬ್ಬಂದಿ ವರ್ಗ ಘೋಷಣೆ ಮತ್ತು ಗೀತೆಗಳ ಮೂಲಕ ಜನರಿಗೆ ಅರಿವು ಮೂಡಿಸುತ್ತಾ ಐಟಿ ಪಾರ್ಕನ ಗ್ಲಾಸ್ ಹೌಸ್ ಬಳಿ ಜಾಥಾವನ್ನು ಮುಕ್ತಾಯಗೊಳಿಸಿದರು. ಹೆಸ್ಕಾಂ ಮುಖ್ಯಕಾರ್ಯ ನಿರ್ವಾಹಕ ಅಭಿಂತರ ಆರ್. ರಾಜಪ್ಪಾ ಎಲ್ಲರಿಗೆ ಶುಭ ಕೋರಿದರು. [ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್‌ನಿಂದ ಅಭಿವೃದ್ಧಿ ಮಂತ್ರ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubli Electricity Supply Company Limited in association with Deshpande Education Trust conducted rally in Hubballi to create awareness among residents to save power and save environment for the development of India. Hundreds of residents participated in the rally.
Please Wait while comments are loading...