ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀವು ಅಧಿಕಾರಕ್ಕೆ ಬಂದಿರುವುದು ಹಿಂದೂ ಸಂಘಟನೆಯಿಂದ: ಬಿಜೆಪಿ ವಿರುದ್ಧ ಮುತಾಲಿಕ್‌ ಕಿಡಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ನವೆಂಬರ್‌29 : ಶಾಸಕ ಗರುಡಾಚಾರ್ ಮನೆಗೆ ಮುತ್ತಿಗೆ ಹಾಕಿದ ಹಿಂದೂ ಕಾರ್ಯಕರ್ತರ ಬಂಧನ ಕುರಿತು ಧಾರವಾಡದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ರಾತ್ರಿ ಒಂದು ಗಂಟೆಗೆ ಪುನೀತ್‌ ಕೆರೆಹಳ್ಳಿ, ತೇಜಸ್ ಗೌಡ ಎನ್ನುವ ಭಜರಂಗದಳದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದನ್ನು ಖಂಡಿಸುತ್ತೇನೆ. ಹಿಂದೂ ಕಾರ್ಯಕರ್ತರು ದೇಶದ ಸುರಕ್ಷತೆಯ ಕಾರ್ಯಕ್ಕೆ ನಿಂತವರು. ಅವರನ್ನು ರೌಡಿಗಳ ರೀತಿ ಬಂಧನ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ, ಅದೂ ಬಿಜೆಪಿ ಸರ್ಕಾರದಲ್ಲಿ ಬಂಧನ ಮಾಡಿದ್ದು ಸರಿಯಲ್ಲ ಎಂದು ಮುತಾಲಿಕ್ ಕಿಡಿಕಾರಿದರು.

ಶಬರಿಮಲೆಯಲ್ಲಿ ಪುನೀತ್‌ ಫೋಟೊ ಹಿಡಿದು ಸರತಿ ಸಾಲಿನಲ್ಲಿ ನಿಂತ ಭಕ್ತ ಶಬರಿಮಲೆಯಲ್ಲಿ ಪುನೀತ್‌ ಫೋಟೊ ಹಿಡಿದು ಸರತಿ ಸಾಲಿನಲ್ಲಿ ನಿಂತ ಭಕ್ತ

ಮಾತು ಮುಂದುವರಿಸಿದ ಅವರು, ಅವರೇನು ರೌಡಿಗಳಾ..?, ಗೂಂಡಾಗಳಾ..? ಕ್ರಿಮಿನಲ್‌ಗಳಾ..? ರಾತ್ರಿ ಬಂಧನ ಮಾಡುತ್ತೀರಾ..? ಅವರನ್ನು ಬಹಳ‌ ಹೀನಾಯವಾಗಿ ನಡೆಸಿಕೊಂಡಿದ್ದೀರಿ, ಕ್ರಿಮಿನಲ್‌ಗಳ‌ ರೀತಿ ನಡೆದುಕೊಂಡಿದ್ದೀರಿ. ನಿಮಗೆ ಅಧಿಕಾರ ಸಿಕ್ಕ ತಕ್ಷಣ ಸೊಕ್ಕಿನಿಂದ ಇದನ್ನು ಮಾಡುವುದು ಸರಿಯಲ್ಲ. ನೀವು ಅಧಿಕಾರಕ್ಕೆ ಬಂದಿರುವುದು ಹಿಂದೂಗಳಿಂದ, ಹಿಂದೂ ಸಂಘಟನೆಯಿಂದ. ಬರುವ‌ ಚುನಾವಣೆಯನ್ನು ಗಮನಿಸಿ ಮಾತನಾಡಬೇಕು ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Pramod Muthalik Reaction About Hindu Activists Arrested In Bengaluru

ಚಿಕ್ಕಪೇಟೆಯ ಗರುಡಾಚಾರ್ ಅವರದು ಸೊಕ್ಕಿನ ಮಾತು. ಮುಸ್ಲಿಮರು ಏನು ಮಾಡುತಿದ್ದಾರೆ ಎಂದು ಪರಿವೇ ಇಲ್ಲ, ಹಲಾಲ್ ದಿಂದ ಏನಾಗುತ್ತಿದೆ ಎಂದು ನೋಡಿ. ಎಷ್ಟು ದುಡ್ಡು ಜಮಾ ಮಾಡಿ ಟೆರರಿಸ್ಟಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಗರುಡಾಚಾರ್ ಅವರೇ ನಿಮಗೆ‌ ಕಲ್ಪನೆ ಇದೆಯಾ ಎಂದು ಪ್ರಶ್ನಿಸಿದ ಮುತಾಲಿಕ್, ನೀವು ಬರಿ ಎಂಎಲ್ಎ ಅಲ್ಲ, ಇಲ್ಲಿಯ ನಾಗರಿಕರು, ಒಂದು ನಾಡಿನ ಪ್ರತಿನಿಧಿ,‌ ನೀವು ಒಬ್ಬ ಹಿಂದೂ, ನೀವು ಭಾರತೀಯರು. ಈ‌ ರೀತಿ ರಾತ್ರೊ ರಾತ್ರಿ ಬಂಧನ ಮಾಡಿದ್ದು ಅಪರಾಧ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ನಿಯಮದ ಪ್ರಕಾರ 200 ಮೀಟರ್ ಒಳಗೆ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ‌ ಕೊಡಬಾರದು ಎಂಬ ನಿಯಮ ಇದೆ,‌ ಅದನ್ನ ಪಾಲಿಸಬೇಕು ಎಂದರು.

ಮುಸ್ಲಿಮರು ಏಕದೇವೊಪಾಸಕರು. ಯಾರು ಬಹುದೇವೊಪಾಸಕರು ಅವರನ್ನು ಇವರು ಕಾಫಿರ್ ಅಂತ ಕರೆಯುತ್ತಾರೆ. ದೇವರ ಪೂಜೆ ಮಾಡುವವರಲ್ಲ ಅವರು, ದೇವಸ್ಥಾನ ಒಡೆಯುವವರು. ದೇವರ ನಂಬದೇ ಇರುವವರು ದೇವರ ಲಾಭ ಏಕೆ ಬೇಕು ನಿಮಗೆ ಎಂದು ಗುಡುಗಿದರು. ಈ ರೀತಿ ಬಿಜೆಪಿ ಸರ್ಕಾರ ಮಾಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಬಂಧಿಸಿದವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮುತಾಲಿಕ್ ಆಗ್ರಹಿಸಿದರು.

English summary
Pramod Muthalik Lashes Out At BJP. His Reaction about hindu activists arrested in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X