ಹಿಂದು ಎಂದಿಗೂ ಹಿಂಸೆ ಬಯಸುವುದಿಲ್ಲ: 'ರಾಗಾ' ಹೇಳಿಕೆಗೆ ವ್ಯಾಪಕ ಖಂಡನೆ
ಧಾರವಾಡ, ಜುಲೈ 02: ಹೊಸ ಕೇಂದ್ರ ಸರ್ಕಾರ ರಚನೆ ಆದ ಬಳಿಕ ಮೊದಲ ಲೋಕಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಹಿಂದೂಗಳ ಕುರಿತು ದೇವರ ಫೋಟೋ ಹಿಡಿದು ಮಾತನಾಡಿದರು. ಅವರ ಈ ಹೇಳಿಕೆಗೆ ವ್ಯಾಪಕ ಖಂಡನೆ ಕೇಳಿ ಬಂದಿದೆ.
ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಹೇಳಿಕೆಯನ್ನು ನಾನು ವಿರೋಧಿಸುತ್ತೇನೆ. ರಾಹುಲ್ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಧಾರವಾಡದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇಂಥ ಹೇಳಿಕೆ ಮೂಲಕ ಕೋಟ್ಯಾಂತರ ಹಿಂದೂಗಳಿಗೆ ಅವಮಾನ ಮಾಡಿದ್ದೀರಿ. ಸಂಸತ್ ನಲ್ಲಿ ರಾಹುಲ್ ಗಾಂಧಿ ಹಿಂದೂ ಬಗ್ಗೆ ಹೇಳಿಕೆ ವಿಚಾರ ಸರಿಯಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ಮುತಾಲಿಕ್ ವಾಗ್ದಾಳಿ ನಡೆಸಿದರು.
ಹಿಂದೂ ಧರ್ಮ ಎಂದಿಗೂ ಹಿಂಸೆಯನ್ನು ಭೋಧಿಸಿಲ್ಲ
ಗರ್ವದಿಂದ ಹೇಳುತ್ತೇನೆ ನಾನೊಬ್ಬ ಹಿಂದೂನಾ ನೊಬ್ಬನೇ ಅಲ್ಲ, ದೇಶದಲ್ಲಿ ಕೋಟ್ಯಾಂತರ ಜನರಿಗೆ ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಭೂಮಿ ನಮ್ಮದು. ಇಲ್ಲಿ ಹುಟ್ಟಿದ್ದೇವೆ ಎಂದು ಹೇಳಲು ಹೆಮ್ಮೆ ಇದೆ. ಹಿಂದೂಗಳು ಎಂದು ಹೇಳಿಕೊಳ್ಳುವರು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ನೀವು ಹೇಳಿದ್ದಾರೆ. ನಾನು ಹಿಂಸಕ ಅಲ್ಲ, ನಾನು ಸುಳ್ಳು ಹೇಳಲ್ಲ. ಹಿಂದೂ ಧರ್ಮ ಎಂದಿಗೂ ಹಿಂಸೆಯನ್ನು ಭೋಧಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಹಿಂದೂ ಧರ್ಮ ಎಂದೂ ಹಿಂಸೆ ಭೋಧಿಸುವುದಿಲ್ಲ. ಹಿಂದೂ ಎಂದರೆ 'ಸರ್ವೆ ಜನಾ ಸುಖಿನೋ ಭವಂತು'. ಎಲ್ಲರೂ ಸುಖವಾಗಿರಲಿ ಎಂದು ಹೇಳುವ ಏಕೈಕ ಧರ್ಮ ನಮ್ಮದು. ಹಿಂದೂಗಳು ಸಹಿಷ್ಣುತೆ, ಸಮಾನತೆ ಭೋಧಿಸುತ್ತಾರೆ ಎಂದು ಅವರು ತಿಳಿಸಿದರು.
'ರಾಗಾ'ಗೆ ಮುತಾಲಿಕ್ ಎಚ್ಚರಿಕೆ
ಹಿಂದೂ ಅತ್ಯಂತ ಶ್ರೇಷ್ಠವಾದ ವಿಚಾರವನ್ನು ಜಗತ್ತಿಗೆ ಪ್ರಸಾರ ಮಾಡುವ ಧರ್ಮ ಹಿಂದೂಗಳು ಹಿಂಸಕರಲ್ಲ ಅವರೆಂದೂ ಸುಳ್ಳು ಹೇಳುವವರಲ್ಲ. ರಾಜಕಾರಣದಲ್ಲಿ ಸಾವಿರ ಮಾತನಾಡಿ, ಆದರೆ ಹಿಂದೂ ಧರ್ಮ, ದೇವತೆಗಳ ಬಗ್ಗೆ ಈ ರೀತಿ ಅಪಮಾನ ಮಾಡುವುದು ಸರಿಯಲ್ಲ ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು.
ಈ ದೇಶದ ಹಿಂದೂಗಳು ಸಹನೆ ಮಾಡುವುದಿಲ್ಲ. ದೇಶದಲ್ಲಿ ಯಾರು ದಾಳಿಕೋರರು ಎಂಬುದನ್ನು ನೆನಪಿಟ್ಟುಕೊಳ್ಳಿ. ಮೊಘಲರು, ಮುಸ್ಲಿಮರು, ಪೋರ್ಚುಗೀಸರು ಈ ದೇಶದ ಮೇಲೆ ದಾಳಿ ಮಾಡಿದರು. ಹಿಂಸೆಯನ್ನು ಭೋಧಿಸುವವರು ಯಾರೆಂಬುದನ್ನು ಯೋಚಿಸಿ. ಹಿಂದೂ ಧರ್ಮ, ಹಿಂದುತ್ವದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಬೇಕು. ಅದರ ಬಗ್ಗೆ ಅನುಭವ ಪಡೆಯಬೇಕು ಎಂದು ಹೇಳಿದರು.












Click it and Unblock the Notifications