ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಟ್ಸಪ್, ಇ-ಮೇಲ್ ಮೂಲಕ ಕೇಂದ್ರ ಸಚಿವರ ಕಚೇರಿ ಕೆಲಸ

|
Google Oneindia Kannada News

ಧಾರವಾಡ, ಜುಲೈ 19 : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸಚಿವರೊಬ್ಬರ ಕಚೇರಿ ವಾಟ್ಸಪ್ ಹಾಗೂ ಇ-ಮೇಲ್ ಮೂಲಕ ನಿರ್ವಹಣೆಯಾಗಲಿದೆ. ಜನರು ಅರ್ಜಿಗಳನ್ನು ಕಳುಹಿಸಬಹುದು ಖುದ್ದಾಗಿ ಕಚೇರಿಗೆ ಬರುವ ಅಗತ್ಯವಿಲ್ಲ.

Recommended Video

Corona ಹೋರಾಟದಲ್ಲಿ ಭಾರತ ಮುಖ್ಯ ಪಾತ್ರ | Oneindia Kannada

ಧಾರವಾಡ ಸಂಸದ ಮತ್ತು ಕೇಂದ್ರ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಚೇರಿ ವಾಟ್ಸಪ್, ಇ-ಮೇಲ್ ಮೂಲಕ ಕಾರ್ಯ ನಿರ್ವಹಣೆ ಮಾಡಲಿದೆ. ಜನರು ಸೇವೆಗಳನ್ನು ಪಡೆಯಲು ಪದೇ ಪದೇ ಸಚಿವರ ಕಛೇರಿಗೆ ಅರ್ಜಿ ಸಲ್ಲಿಸಲು ಬರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಬಗ್ಗೆ ಮಹತ್ವ ನಿರ್ಣಯಗಳು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಬಗ್ಗೆ ಮಹತ್ವ ನಿರ್ಣಯಗಳು

ಸಾರ್ವಜನಿಕರು ಹಾಗೂ ಕಛೇರಿ ಸಿಬ್ಬಂದಿಗಳ ಆರೋಗ್ಯದ ದೃಷ್ಟಿಯಿಂದ ಕಛೇರಿ ನಿರ್ವಹಣೆಗೆ ಒಂದು ವಾಟ್ಸಪ್ ನಂಬರ್ ಕೊಡಲಾಗಿದೆ. ನಂಬರ್‌ಗೆ ಜನರು ಅರ್ಜಿಗಳನ್ನು ಸಲ್ಲಿಸಬಹುದು. ಕಛೇರಿ ಸಿಬ್ಬಂದಿ ಅದರ ಬಗ್ಗೆ ನಿಗಾವಹಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಪುನಃ ಅರ್ಜಿದಾರರಿಗೆ ಮಾಹಿತಿ ಕೊಡುತ್ತಾರೆ.

ತಹಶೀಲ್ದಾರ್ ಕಚೇರಿಗೆ ಇ-ಮೇಲ್, ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸಿ ತಹಶೀಲ್ದಾರ್ ಕಚೇರಿಗೆ ಇ-ಮೇಲ್, ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸಿ

Pralhad Joshi Office Will Work Through Whats Up And E Mail

ಜನರು ಬಳಕೆ ಮಾಡಬೇಕಾದ ವಾಟ್ಸಪ್ ನಂಬರ್ 9449491444 ಹಾಗೂ ಸ್ಥಿರ ದೂರವಾಣಿ ಸಂಖ್ಯೆ 0836-2251055, 2258955. ಇ-ಮೇಲ್ ಮೂಲಕವೂ ಸಹ ಸಮಸ್ಯೆಗಳ ಮನವಿಯನ್ನು ಕಛೇರಿಗೆ ಕಳಿಸಬಹುದು.

ವಾಟ್ಸಪ್, ಫೇಸ್ ಬುಕ್ ಮೂಲಕ ಮಾವು ಮಾರಿ ಮಾದರಿಯಾದ ರೈತ! ವಾಟ್ಸಪ್, ಫೇಸ್ ಬುಕ್ ಮೂಲಕ ಮಾವು ಮಾರಿ ಮಾದರಿಯಾದ ರೈತ!

ಧಾರವಾಡ ಜಿಲ್ಲೆಯಲ್ಲಿ ಶನಿವಾರ 186 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1917.

English summary
Dharwad MP and minister of parliamentary affairs, Coal & mines Pralhad Joshi office will work through whats up and e-mail. People can sent application on whats up. No need to visit office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X