ಪ್ರಹ್ಲಾದ್ ಜೋಶಿ ಗೆದ್ದರೂ ಬಿಜೆಪಿ ನಾಯಕರ ನಿರೀಕ್ಷೆ ಹುಸಿ: ಗೆಲುವಿನ ಉತ್ಸವಕ್ಕೆ ಬ್ರೇಕ್ ಬಿದ್ದಿದ್ದೇಕೆ?
ಧಾರವಾಡ, ಜೂನ್ 05: ಹಲವು ಪರ-ವಿರೋಧದ ಆರೋಪಗಳ ಮಧ್ಯೆ ಬಿಜೆಪಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಐದನೇ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಆದರೆ ಈ ಗೆಲುವು ಕೇಂದ್ರ ಬಿಜೆಪಿ ಹೈಕಮಾಂಡ್‌ಗೆ ಹರ್ಷ ತಂದಿಲ್ಲ ಎನ್ನಲಾಗಿದೆ. ಹೀಗಾಗಿಯೇ ಧಾರವಾಡದಲ್ಲಿ ಜೋಶಿಯವರ ಗೆಲುವಿನ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ. ವಿಕ್ಟರಿ ಉತ್ಸವಕ್ಕೆ ತಂದಿದ್ದ ಲಕ್ಷಾಂತರ ಲಾಡುಗಳನ್ನು ಕ್ಷೇತ್ರದಲ್ಲಿ ಹಂಚಲು ಮುಂದಾಗಿಲ್ಲ.
ಧಾರವಾಡ ಬಿಜೆಪಿ ಪರ ಒಲವು ವ್ಯಕ್ತವಾದರೂ ಸಹ ಇಲ್ಲಿ ಬಿಜೆಪಿ ಸಂಭ್ರಮಾಚರಣೆಯೇ ಕಾಣುತ್ತಿಲ್ಲ. ಇದಕ್ಕೆ ಪ್ರಬಲ ಸ್ಪರ್ಧೆ ಒಡ್ಡಿದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿಯವರು ಕಾರಣ ಎನ್ನಲಾಗಿದೆ. ಇವರನ್ನು ಗೆಲ್ಲಿಸಿಕೊಂಡು ಬರಲೇಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಕೇಂದ್ರ ಬಿಜೆಪಿ ವಿರುದ್ಧ ಅಬ್ಬರಿಸಿದ್ದರು. ಕ್ಷೇತ್ರದಾದ್ಯಂತ ಓಡಾಡಿದ್ದರು.

ಚುನಾವಣೆ ಘೋಷಣೆಯಾದ ಬಳಿಕ ಧಾರವಾಡದಲ್ಲಿ ಬಿಜೆಪಿ ಟಿಕೆಟ್ ಬಗ್ಗೆ ತಕ್ಕಮಟ್ಟಿನ ಗೊಂದಲ ಸೃಷ್ಟಿಯಾಯಿತು ಎನ್ನುಷ್ಟರಲ್ಲಿ ಪ್ರಹ್ಲಾದ್ ಜೋಶಿಯವರಿಗೆ ಮತ್ತೆ ಟಿಕೆಟ್ ಎಂಬುದು ಫೈನಲ್ ಆಯಿತು. ಏಕೆಂದರೆ ಈ ಕ್ಷೇತ್ರದ ಮೇಲೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹ ಕಣ್ಣಿಟ್ಟಿದ್ದರು.
ನಂತರ ದಿಂಗಾಲೇಶ್ವರ ಶ್ರೀಗಳು ಸ್ಪರ್ಧೆ ವಿಚಾರ, ಲಿಂಗಾಯತ ಸ್ವಾಮೀಜಿಗಳ ಸಭೆ, ಲಿಂಗಾಯತ ಸಮುದಾಯಕ್ಕೆ ನಿರಂತರ ಅನ್ಯಾಯ ಎಂಬ ಆರೋಪಗಳು ಕೇಳಿ ಬಂದವು. ಇತ್ತ ಕುರುಬ ಸಮುದಾಯದ ಹಾಗೂ 2018ರಲ್ಲಿ ಸೋತಿದ್ದ ವಿನೋದ್ ಅಸೂಟಿಯಂತ ಹೊಸ ಮುಖವನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿತು.
ಬರೀ 97324 ಮತಗಳ ಅಂತದಿಂದ ಗೆಲುವು
ಈಗಷ್ಟೇ ಚುನಾವಣೆ ರಾಜಕೀಯ ಪ್ರವೇಶ ಮಾಡಿದ್ದ ಕಾಂಗ್ರೆಸ್ ಯುವ ನಾಯಕ ವಿನೋದ್ ಅಸೂಟಿ ಈ ಭಾರಿ 'ಭಾರತೀಯ ಜನತಾ ಪಕ್ಷಕ್ಕೆ' (ಬಿಜೆಪಿ) ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಮತ ಎಣಿಕೆ ಆರಂಭದಿಂದಲೂ ಉತ್ತಮ ಸ್ಪರ್ಧೆ ಒಡ್ಡಿದ್ದಾರೆ. ಹೀಗಾಗಿಯೇ 2ರಿಂದ 2.5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಿದ್ದ ಪ್ರಹ್ಲಾದ್ ಜೋಶಿಯವರು ಈಗ 97324 ಮತಗಳ ಅಂತರದಿಂದ ಐದನೇ ಬಾರಿಗೆ ಸಂಸತ್‌ಗೆ ಆಯ್ಕೆ ಆಗಿದ್ದಾರೆ.
ಕಾಂಗ್ರೆಸ್‌ನಿಂದ ದೊಟ್ಟ ಮಟ್ಟದ ಪೈಪೋಟಿ
ವಿನೋದ್ ಅಸೂಟಿ ಅವರ ಮುಂದೆ ಪ್ರಹ್ಲಾದ್ ಜೋಶಿ ದೊಡ್ಡ ಮಟ್ಟದ ಪೈಪೋಟಿ ಎದುರಿಸಬೇಕಾಯಿತು. ಈ ಹಿಂದಿನ ಚುನಾವಣೆಗಳಂತೆ ಜೋಶಿಯವರು ಪ್ರಚಂಡ ಬಹುಮತ ಗಳಿಸಲಿದೆ ಎಂದು ಕೇಂದ್ರ ಹೈಕಮಾಂಡ್ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಬಿಜೆಪಿ ನಾಯಕರು ಸ್ಥಳೀಯ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದಾರೆ.
ಮತ ಎಣಿಕೆ ಶುರುವಾದ ನಂತರ ಕಡಿಮೆ ಅಂತರದಲ್ಲೇ ಮುನ್ನಡೆ ಸಾಧಿಸಿದ ಪ್ರಹ್ಲಾದ್ ಜೋಶಿ ಅವರಿಗೆ ಅಂತಿಮ ಹಂತದವರೆಗೂ ನಿರೀಕ್ಷಿತ ದೊಡ್ಡ ಲೀಡ್ ಸಿಗಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ತೀವ್ರ ಪೈಪೋಟಿ ನೀಡುತ್ತಲೇ ಹೋದರು. ಎಣಿಕೆ ಆರಂಭವಾದಾಗ ಎರಡು, ಮೂರು ಸಾವಿರ ಮತಗಳ ಅಂತರವಿತ್ತು. ನಂತರ ಅಂತರ ಏರಿಕೆ ಆಗುತ್ತಾ ಹೋಯಿತು.
2019ರಲ್ಲಿ ದಾಖಲೆ ಬರೆದಿದ್ದ ಪ್ರಹ್ಲಾದ್ ಜೋಶಿ
ಈ ಹಿಂದೆ ನಾಲ್ಕು ಚುನಾವಣೆ ಪೈಕಿ ಮೂರರಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಜಯ ಸಾಧಿಸಿದ್ದರು. ಅದರಲ್ಲೂ 2019ರ ಚುನಾವಣೆಯಲ್ಲಿ ಪ್ರಬಲ ಲಿಂಗಾಯತ ಸಮುದಾಯದ ವಿನಯ್ ಕುಲಕರ್ಣಿ ಅವರ ವಿರುದ್ಧ ದಾಖಲೆಯ 2.05 ಲಕ್ಷ ಮತಗಳ ಭಾರಿ ಮುನ್ನಡೆಯೊಂದಿಗೆ ಪ್ರಹ್ಲಾದ್ ಜೋಶಿಯವರು ಗೆದ್ದು ಬೀಗಿದ್ದರು.
ಮೊದಲ ಭಾರಿಗೆ 1 ಲಕ್ಷಕ್ಕಿಂತ ಕಡಿಮೆ ಅಂತರದಲ್ಲಿ ಜಯ
ಆದರೆ 2024 ರಲ್ಲಿ ಅಷ್ಟಾಗಿ ರಾಜಕೀಯ ಅನುಭವ ಇಲ್ಲದ ವಿನೋದ್ ಅಸೂಟಿ ಅವರನ್ನು ಮಣಿಸಲು ಪ್ರಹ್ಲಾದ್ ಜೋಶಿ ಅವರು ಬಹಳಷ್ಟು ಶ್ರಮ ಪಡಬೇಕಾಯಿತು. ಬಹು ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ ಎಂಬ ನಿರೀಕ್ಷೆಯನ್ನು ಇದು ಹುಸಿ ಮಾಡಿತು. ಆರಂಭದಿಂದಲೇ 2ರಿಂದ 2.5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಬೀಗಿದ್ದ ಬಿಜೆಪಿಗೆ ಇದು ಎಚ್ಚರಿಕೆ ಗಂಟೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಒಟ್ಟಾಗಿ ಚುನಾವಣೆ ಎದುರಿಸಲು ಮುಂದಾದರು. ಧಾರವಾಡ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ, ನಾಲ್ಕರಲ್ಲಿ ಕಾಂಗ್ರೆಸ್ ಸಮಬಲ ಹೊಂದಿವೆ. ಪ್ರಧಾನಿ ಮೋದಿ ಅಲೆ ಮಧ್ಯೆ ಯುವ ನಾಯಕ ತೀವ್ರ ಪೈಪೋಟಿ ಒಡ್ಡಿರುವುದು ರಾಜಕೀಯ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇದರಿಂದ ಕಾಂಗ್ರೆಸ್‌ಗೆ ವಿನೋದ್ ಅಸೂಟಿ ಮೇಲೆ ಭರವಸೆ ಮೂಡಿದೆ.
ಪ್ರಲ್ಲಾದ ಜೋಶಿ ಅವರು ಕೂಡ ಪ್ರಚಾರ ಸಂದರ್ಭದಲ್ಲಿ ಮತದಾರರು ಬೃಹತ್ ಅಂತರದ ಗೆಲುವು ನೀಡಲಿದ್ದಾರೆ ಎಂದು ವಿಶ್ವಾಸ ಹೊಂದಿದ್ದರು. ಬಿಜೆಪಿ ಘಟಾನುಘಟಿಗಳ ನಾಯಕರು ಪ್ರಚಾರ ಮಾಡಿದ್ದ ಧಾರವಾಡದಲ್ಲಿ ಇಂದು ನಿರೀಕ್ಷೆಗಳು ಹುಸಿಯಾಗಿವೆ.
ಜೋಶಿಗೆ ಕಡಿಮೆ ಅಂತರ: ಹಿಂದಿನ ಇತಿಹಾಸ ಹೇಗಿದೆ?
ಪ್ರಹ್ಲಾದ್ ಜೋಶಿ ಕೇವಲ 97ಸಾವಿರ ಮತಗಳ ಅಂತರದ ಗೆಲುವು ಸಿಕ್ಕಿರುವುದು ಅಷ್ಟೊಂದು ಉತ್ಸಾಹ ತಂದಿಲ್ಲ. ಹೀಗಾಗಿ ಗೆಲುವಿನ ಉತ್ಸವಕ್ಕಾಗಿ ಸಿಹಿ ಹಂಚಲು ತಂದಿದ್ದ ಲಕ್ಷಾಂತರ ಲಾಡುಗಳನ್ನು ಬಿಜೆಪಿ ನಾಯಕರು ಅವುಗಳನ್ನು ವಾಪಾಸ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
2004 ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಪ್ರಹ್ಲಾದ್ ಜೋಶಿಯವರು ಒಂದು ಲಕ್ಷಕ್ಕಿಂತ ಕಡಿಮೆ ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. ಉಳಿದಂತೆ 2009ರಲ್ಲಿ 1,37,660 ಮತಗಳು, 2014ರಲ್ಲಿ 1,11,657 ಮತಗಳು, 2019ರಲ್ಲಿ ಬರೋಬ್ಬರಿ 2.5 ಲಕ್ಷ ಮತಗಳ ಅಂತರದ ಗೆಲವು ಸಾಧಿಸಿದ್ದರು.
ಮತಗಳನ್ನು ಹೆಚ್ಚಿಸಿಕೊಂಡ ಪ್ರಹ್ಲಾದ್ ಜೋಶಿ
ಪ್ರಮುಖ ವಿಷಯವೆಂದರೆ ಪ್ರಹ್ಲಾದ್ ಜೋಶಿಯವರುರು ಪ್ರತಿ ಚುನಾವಣೆಯಲ್ಲಿ ಪಡೆದ ಮತಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿರುವುದು ಬಿಜೆಪಿಗೆ ಸಮಾಧಾನ ತಂದಿದೆ. ಮೊದಲ ಚುನಾವಣೆಯಲ್ಲಿ 3,85,084 ಮತಗಳು, ಎರಡನೇ ಚುನಾವಣೆ 4,46,786, ಮೂರನೇ ಚುನಾವಣೆಯಲ್ಲಿ 5,45,935 ಮತಗಳು, ನಾಲ್ಕನೇ ಚುನಾವಣೆಯಲ್ಲಿ 6,84,837 ಹಾಗೂ ಪ್ರಸ್ತುತ ಚುನಾವಣೆಯಲ್ಲಿ 7,16,231 ಮತಗಳನ್ನು ಪಡೆದಿದ್ದಾರೆ. ಅಂದರೆ ಹಿಂದಿನ ಚುನಾವಣೆಯಲ್ಲಿ ಪ್ರಹ್ಲಾದ್ ಜೋಶಿ ಅವರ ಮತ ಗಳಿಕೆ ಏರಿಕೆ ಆಗಿತ್ತಲೇ ಹೋಗಿದೆ.
-
Vijay: ಪ್ರಚಾರದ ವೇಳೆ ಹೂವಿನ ಚೆಂಡು ಎಸೆದ ಅಭಿಮಾನಿ; ಸೈಕಲ್ನಿಂದ ಇಳಿದು ಗಾಡಿ ಹತ್ತಿದ ದಳಪತಿ ವಿಜಯ್, ವಿಡಿಯೋ ವೈರಲ್ -
Upendra: ನಟ ಉಪೇಂದ್ರ ಅವರ "ಪ್ರಜಾಕೀಯ" ಪಕ್ಷದ ವೆಬ್ಸೈಟ್ ಲೋಕಾರ್ಪಣೆ, ಟಿಕೆಟ್ ಆಕಾಂಕ್ಷಿಗಳಿಗೆ ಹೊಸ ರೂಲ್ಸ್ -
Bihar: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ, ನೂತನ ಸಿಎಂ ಆಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆ -
ಧಾರವಾಡ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: 1 ಲಕ್ಷ ಬಾಂಡ್ಗೆ ಆಗ್ರಹಿಸಿದ ಪೊಲೀಸರ ವಿರುದ್ಧ ಯತ್ನಾಳ್ ಗರಂ -
Abdul Jabbar: ಕಾಂಗ್ರೆಸ್ ಪಕ್ಷದಿಂದ ಅಬ್ದುಲ್ ಜಬ್ಬಾರ್ ಅಮಾನತು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕ್ರಮ -
ಕೆಲವೇ ಗಂಟೆಗಳಲ್ಲಿ ಇರಾನ್ ಬಂದರುಗಳಿಗೆ ಅಮೆರಿಕದಿಂದ ಕಡಲ ದಿಗ್ಬಂಧನ? ಯುದ್ಧದ ಭೀತಿಯಲ್ಲಿ ಕೊಲ್ಲಿ ರಾಷ್ಟ್ರಗಳು -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
Siddaramaiah: ಜನರ ದಾರಿತಪ್ಪಿಸುವ ಬಿಜೆಪಿಯನ್ನು ನಂಬಬೇಡಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರಣವೇನು -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ











Click it and Unblock the Notifications