ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೋಹಿತ್ ವೇಮುಲ ಪರ ಪ್ರಗತಿಪರ ಸಂಘಟನೆ ರಾಷ್ಟ್ರಪತಿಗೆ ಬರೆದ ಪತ್ರ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ಫೆಬ್ರವರಿ, 17: ವಿದ್ಯಾರ್ಥಿ,ಯುವಜನ, ಅಧ್ಯಾಪಕ ಮತ್ತು ಪ್ರಗತಿಪರ ಸಂಘಟನೆಗಳ ಜಂಟಿ ಹೋರಾಟ ಸಮಿತಿಯು ರೋಹಿತ್ ವೇಮುಲ ಪರ ನ್ಯಾಯ ಕೊಡಿಸಿ ಎಂದು ಕರ್ನಾಟಕ ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ.ಮಲ್ಲೇಪುರಂ ವೆಂಕಟೇಶ್ ಅವರ ಮೂಲಕ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದಾರೆ.

ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಎಬಿವಿಪಿ ಮುಖಂಡರೊಬ್ಬರಿಗೆ ಹಲ್ಲೆ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿದ್ದರಿಂದ ನೊಂದು ಜನವರಿ 18ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ಕಾವು ದೇಶ ವ್ಯಾಪ್ತಿ ಹರಡಿ ಈತನ ಪರ ಹಲವಾರು ಸಂಘಟನೆಗಳು ಹೋರಾಟ ನಡೆಸುತ್ತಿವೆ.[ಹೈದರಾಬಾದ್ : ನೊಂದ ದಲಿತ ವಿದ್ಯಾರ್ಥಿ ಆತ್ಮಹತ್ಯೆ, ವಿವಿ ಪ್ರಕ್ಷುಬ್ಧ]

Pragatipara Sanghatane writes letter to the President and ask justice of Rohith vemula case

ಪ್ರಗತಿಪರ ಸಂಘಟನೆ ಬರೆದ ಪತ್ರದಲ್ಲೇನಿದೆ?

ರೋಹಿತ್ ವೇಮುಲ ಯಾರು?

ರೋಹಿತ್ ವೇಮುಲ ಬಡತನದ ಹಿನ್ನಲೆಯ ದಲಿತ ಸಮುದಾಯದಿಂದ ಬಂದ ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿ. ಸ್ವಾತಂತ್ರ್ಯ, ಸಮಾನತೆ, ಪ್ರಜಾಪ್ರಭುತ್ವ, ಹೋರಾಟಗಳಲ್ಲಿ ನಂಬಿಕೆ ಇರಿಸಿದ್ದ ಈತ ಉತ್ತಮ ಸಂಘಟಕ ಹಾಗೂ ಎಎಸ್ಎ, ಹೆಚ್ ಸಿಯು ಇತರ ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳ ಜೊತೆ ಸಕ್ರಿಯನಾಗಿದ್ದ. ಅಂಬೇಡ್ಕರ್ ವಿದ್ಯಾರ್ಥಿ ಸಂಘದ (ಆಸಾ) ಪ್ರಮುಖ ನಾಯಕನಾಗಿದ್ದನು.

ಕಳೆದ ಆಗಸ್ಟ್ ತಿಂಗಳಲ್ಲಿ ಎಬಿವಿಪಿ ಮುಖಂಡ ಸುಶೀಲ್ ಕುಮಾರ್ ಎಂಬಾತ ತನ್ನ ಫೇಸ್ಬುಕ್ ನಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಸಂಘದ
ಸದಸ್ಯರನ್ನು ಗೂಂಡಾಗಳು ಎಂದು ಬರೆದಿದ್ದರು. ಈ ಬಗ್ಗೆ ಸ್ಪಷ್ಟನೆ ಕೇಳಿದ ರೋಹಿತ್ ಮತ್ತು ಸ್ನೇಹಿತರು ಸುಶೀಲ್ ರನ್ನು ಭೇಟಿ ಮಾಡಿ ತಪ್ಪೊಪ್ಪಿಗೆ ಪತ್ರವನ್ನು ಬರೆಸಿಕೊಂಡಿದ್ದರು. ನಂತರ ಪ್ರಕರಣ ತಣ್ಣಗಾಗಿತ್ತು.

ಈ ಪ್ರಕರಣದಲ್ಲಿ ಆಗಿದ್ದೇನು?

ಬಿಜೆಪಿಯ ಯುವ ಮುಖಂಡನಾಗಿರುವ ಆತನ ಅಣ್ಣ ಸುಶೀಲ್ ಕುಮಾರ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವನಿಗೆ ಮೊದಲಿನಿಂದಲೂ ಇದ್ದ
ಅಪೆಂಡಿಸೈಟಿಸ್ ಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದ. ನಂತರ ಮಧ್ಯ ಪ್ರವೇಶಿಸಿದ ಬಿಜೆಪಿಯ ಕೆಲ ಮುಖಂಡರು ಅಂಬೇಡ್ಕರ್ ವಿದ್ಯಾರ್ಥಿ ಸಂಘದ ದಲಿತ ಹುಡುಗರು ಸುಶೀಲ್ ಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಹೇಳಿ ಅಸಾ ವಿದ್ಯಾರ್ಥಿಗಳ ಮೇಲೆ ದೂರು ದಾಖಲಿಸಿದ್ದಾರೆ.

ಬಿಜೆಪಿಯ ಎಂ.ಎಲ್.ಸಿ ರಾಮಚಂದ್ರ ರಾವ್ ತನ್ನ ಹಿಂಬಾಲಕರೊಂದಿಗೆ ವಿಶ್ವವಿದ್ಯಾಲಯಕ್ಕೆ ನುಗ್ಗಿ ರಾಷ್ಟ್ರದ್ರೋಹಿ ದಲಿತ ವಿದ್ಯಾರ್ಥಿಗಳನ್ನು ವಿವಿ ಯಿಂದ ಹೊರಹಾಕಬೇಕು ಎಂದು ಉಪ ಕುಲಪತಿ ಪ್ರೊ. ಆರ್.ಪಿ. ಶರ್ಮಾಗೆ ಧಮಕಿ ಹಾಕಿತ್ತು. ಒತ್ತಡಕ್ಕೊಳಗಾದ ಕುಲಪತಿಗಳು ಪ್ರೊ. ಅಲೋಕ್ ಪಾಂಡೆ ನೇತೃತ್ವದಲ್ಲಿ ಒಂದು ಶಿಸ್ತುಪಾಲನೆ ಸಮಿತಿ ರಚಿಸಿತು.[ದಲಿತ ವಿದ್ಯಾರ್ಥಿ ಆತ್ಮಹತ್ಯೆ : ಜಾತಿ ಬೆಂಕಿಗೆ ರಾಜಕೀಯ ತುಪ್ಪ]

ಈ ಸಮಿತಿಯು ಎರಡು ಗುಂಪುಗಳ ಹೇಳಿಕೆ ಪಡೆದು ಎಬಿವಿಪಿಯ ಸುಶೀಲ್ ಕುಮಾರ್ ದಾಖಲಾಗಿದ್ದ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಅನುಪಮಾ ಅವರನ್ನು ಭೇಟಿ ಮಾಡಿ 'ಸುಶೀಲ್ ಕುಮಾರ್ ಮೇಲೆ ಯಾವುದೇ ಹಲ್ಲೆಯಾಗಿಲ್ಲ. ಅವರು ತಮ್ಮ ಹಳೆ ಖಾಯಿಲೆ ಅಪೇಂಡಿಸೈಟಿಸ್ ಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಪ್ರಮಾಣ ಪತ್ರ ಪಡೆಯಿತು. ಬಳಿಕ ಸಮಿತಿಯು ಉಪಕುಲಪತಿ ಅವರಿಗೆ ವರದಿ ನೀಡಿತು.

Rohith vemula case

ನಂತರ ಇದ್ದಕ್ಕಿದಂತೆ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ, ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದು ಆಸಾದ ತೀವ್ರಗಾಮಿ, ಜಾತಿವಾದಿ, ಉಗ್ರವಾದಿ, ದಲಿತ ಹುಡುಗರು ವಿವಿಯನ್ನು ಹಾಳು ಮಾಡುತ್ತಿದ್ದು, ಅವರ ಮೇಲೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಎಂಹೆಚ್ಆರ್ ಡಿ ಇಲಾಖೆಯಿಂದ ವಿವಿಗೆ ಮತ್ತೆ ಫೋನ್, ಪತ್ರಗಳ ಒತ್ತಡದಿಂದ ಮತ್ತೊಂದು ಶಿಸ್ತುಪಾಲನ ಸಮಿತಿ ರಚಿಸಲಾಯಿತು.

ಈ ಸಮಿತಿಯು ಮೊದಲನೇ ಸಮಿತಿಯ ವರದಿಯನ್ನು ಅಧ್ಯಯನ ಮಾಡದೆ, ಮರು ತನಿಖೆಯೂ ಮಾಡದೆ ಏಕಾಏಕಿ 5 ಸಂಶೋಧನಾ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯದಿಂದ ಅಮಾನತು ಮಾಡಲಾಯಿತು. ಇದರ ವಿರುದ್ಧ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟಿಸಿದರು.[ಹೈದರಾಬಾದ್ 'ವೇಮುಲ' ಹೋರಾಟಕ್ಕೆ ಕೇಜ್ರಿವಾಲ್ ಬೆಂಬಲ]

ಪುನಃ ರಚಿಸಲಾದ ಕಾರ್ಯಕಾರಿ ಸಮಿತಿ 2015ರ ನವೆಂಬರ್ 24ರಂದು ನೀಡಿದ ವರದಿಯಲ್ಲಿ ಯಾವುದೇ ಹಲ್ಲೆ ನಡೆದೇ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿತು. ಆದರೆ 2015ರ ಡಿಸೆಂಬರ್ 12ರಂದು ತೀರಾ ಅನಿರೀಕ್ಷಿತವಾಗಿ ಹೊಸದಾಗಿ ನೇಮಕಗೊಂಡಿದ್ದ ವಿ.ವಿ. ಉಪಕುಲಪತಿ ಅಪ್ಪಾರಾವ್ ಪೊಡಿಲೆ 5 ಜನ ದಲಿತ ಸಂಶೋಧನಾ ವಿದ್ಯಾರ್ಥಿಗಳನ್ನು ಏಕಾಏಕಿ ಅಮಾನತುಪಡಿಸಿ ಫರ್ಮಾನು ಹೊರಡಿಸಿ ಈ ವಿದ್ಯಾರ್ಥಿಗಳು ಕೇವಲ ತರಗತಿಗಳಿಗೆ ಹಾಜರಾಗಬೇಕು. ವಿವಿಯ ಆವರಣದಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು, ಹಾಸ್ಟೆಲ್ ಪ್ರವೇಶಿಸಬಾರದೆಂದು ಆದೇಶ ಹೊರಡಿಸಿದರು.

ವಿಜ್ಞಾನ ಮತ್ತು ಸಾಮಾಜಿಕ ಶಿಸ್ತುಗಳನ್ನು ಮೇಳೈಸಿಕೊಂಡ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಇವರ ಆದೇಶದಿಂದ ಆಕ್ರೋಶಗೊಂಡು ವಿವಿ ಮತ್ತು ರಾಜಕಾರಣಿಗಳು ಮಾಡಿರುವ ಸಾಮಾಜಿಕ ಬಹಿಷ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದನು. ಈತನ ಮನವಿಗೆ ಮಣಿಯದ ವಿವಿಯಿಂದ ಮಾನಸಿಕ ಖಿನ್ನತೆಗೊಳಗಾದ ರೋಹಿತ್ ಪತ್ರಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡನು.

ಹಕ್ಕೊತ್ತಾಯಗಳು :

* ಹೈದರಾಬಾದ್ ವಿವಿ ವಿದ್ಯಾರ್ಥಿರೋಹಿತ್ ವೇಮುಲ ಸಾವಿಗೆ ಕಾರಣವಾದ ಕೇಂದ್ರ ಮಂತ್ರಿ ಬಂಡಾರು ದತ್ತಾತ್ರೇಯ, ವಿವಿ ಕುಲಪತಿ ಅಪ್ಪಾರಾವ್ ಪೊಡಿಲೆ, ಪ್ರೊ. ವಿಪಿನ್ ಶ್ರೀವಾತ್ಸವ, ಬಿಜೆಪಿ ಎಂಎಲ್ಸಿ. ರಾಮಚಂದ್ರಾರಾವ್, ಎಬಿವಿಪಿ ಮುಖಂಡ ಸುಶೀಲ್ ಕುಮಾರ್ ರನ್ನು ಕೂಡಲೇ ಬಂಧಿಸಬೇಕು.

* ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ಬಂಡಾರು ದತ್ತಾತ್ರೇಯ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು. ರೋಹಿತ್ ವೇಮುಲನ ಕುಟುಂಬಕ್ಕೆ ರೂ.50 ಲಕ್ಷ ಪರಿಹಾರ ಮತ್ತು ಅವರ ಮನೆಯವರೊಬ್ಬರಿಗೆ ಸರಕಾರಿ ಉದ್ಯೋಗ ಹಾಗೂ ಬಾಕಿಯಿದ್ದ ರೋಹಿತ್ ಅವರ ಫೆಲೋಶಿಪ್ ಹಣವನ್ನು ನೀಡಬೇಕು.

* ರೋಹಿತ್ ವೇಮುಲ ಪರ ದೇಶಾದ್ಯಂತ ಹೋರಾಟಕ್ಕಿಳಿದ ವಿದ್ಯಾರ್ಥಿಗಳ ಮೇಲೆ ಹೂಡಿರುವ ಎಲ್ಲಾ ಮೊಕದ್ದಮೆಗಳನ್ನು ಕೈಬಿಡಬೇಕು. ಹೈದರಾಬಾದ್ ವಿಶ್ವವಿದ್ಯಾಲಯದ 50 ವಿದ್ಯಾರ್ಥಿ, ಅಧ್ಯಾಪಕರ ಮೇಲೆ ಕೇಂದ್ರ ಸರ್ಕಾರ ಕಣ್ಗಾವಲು ನಡೆಸುತ್ತಿರುವುದನ್ನು ಕೈಬಿಡಬೇಕು.[ತಾಯಿ ಮಗನನ್ನು ಕಳೆದುಕೊಂಡಿದ್ದಾಳೆ: ನರೇಂದ್ರ ಮೋದಿ]

* ವಿವಿಗಳಲ್ಲಿ ತಳಸಮುದಾಯದ ವಿದ್ಯಾರ್ಥಿಗಳ ಮೇಲೆ ನಡೆಯುವ ಶೋಷಣೆಯನ್ನು ತಪ್ಪಿಸಲು ರೋಹಿತ್ ಕಾಯ್ದೆ ರಚಿಸಿ ಜಾರಿಗೊಳಿಸಬೇಕು. ಉನ್ನತ ಶಿಕ್ಷಣದ ಬ್ರಾಹ್ಮಣೀಕರಣ ಪ್ರಕ್ರಿಯೆ ನಿಲ್ಲಿಸಿ, ಸಾಂವಿಧಾನಿಕ ಪ್ರಜಾತಾಂತ್ರಿಕ, ಬಹುಸಂಸ್ಕೃತಿಯ ಮೌಲ್ಯಗಳನ್ನು ಬಲಪಡಿಸಬೇಕು.

Rohith vemula

ರಾಜ್ಯ ಸರಕಾರಕ್ಕೆ ಮನವಿ :

* ರಾಜ್ಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ಬಡ, ಹಿಂದುಳಿದ, ದಲಿತ ವಿದ್ಯಾರ್ಥಿಗಳಿಗೆ ಮಾಸಿಕ ಕನಿಷ್ಠ ರೂ. 5000 ಹಣವನ್ನು ಪ್ರೋತ್ಸಾಹ ಧನವನ್ನಾಗಿ ನೀಡುವುದು.

* ರಾಜ್ಯದ ವಿವಿಗಳಲ್ಲಿರುವ ಸಮಸ್ಯೆಗಳ ಅಧ್ಯಯನಕ್ಕಾಗಿ ಒಂದು ತಜ್ಞರ ಸಮಿತಿಯನ್ನು ರಚಿಸುವುದು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಶಿಕ್ಷಣ ಸಚಿವರು, ಎಲ್ಲಾ ವಿವಿಗಳ ಉಪಕುಲಪತಿಗಳು, ಉನ್ನತ ಅಧಿಕಾರಿಗಳು ಮತ್ತು ಈ ವೇದಿಕೆಯ ಪ್ರಮುಖರನ್ನು ಒಳಗೊಂಡ ಜಂಟಿ ಸಭೆ ಕರೆಯಬೇಕು.

* ರಾಜ್ಯದ ವಿವಿಗಳಿಗೆ ಅಗತ್ಯ ಹಣಕಾಸು, ಬೋಧಕ-ಬೋಧಕೇತರ ಸಿಬ್ಬಂದಿಗಳ ಖಾಯಂ ನೇಮಕ, ಆಡಳಿತಾತ್ಮಕ ಅಂಶಗಳ ಕುರಿತು ತುರ್ತು ಕ್ರಮ ಕೈಗೊಳ್ಳಬೇಕು.

English summary
Pragatipara Sanghatane writes letter to the President Pranab Mukherjee through the Karnataka University Vice-Chancellor Prof. Mallepuram Venkatesh and ask justice of Rohit vemula case in Dharwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X