ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಪ್ಪುಕುಳಗಳ ರಕ್ಷಣೆಗೆ ನಿಂತಿರುವ ಮೋದಿ: ಹಿರೇಮಠ್ ಟೀಕೆ

|
Google Oneindia Kannada News

ಧಾರವಾಡ, ಫೆಬ್ರವರಿ 05: ಕೇಂದ್ರ ಸರ್ಕಾರ ಅಕ್ರಮ ಸಂಪಾದನೆ ಮಾಡಿದವರ ರಕ್ಷಣೆ ಮಾಡುತ್ತಿದೆ. ಮೋದಿ ಅವರು ಜನಾರ್ಧನರೆಡ್ಡಿ ಹಾಗೂ ಎಸ್ ಎಂ ಕೃಷ್ಣ ಅವರಿಗೆ ಆಶ್ರಯಕೊಟ್ಟಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನರು ಮೋದಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್. ಹಿರೇಮಠ ಹೇಳಿದರು.

ಕೇಂದ್ರ ಸರ್ಕಾರ ಕಪ್ಪು ಹಣ ನಿಯಂತ್ರ ಮಾಡುತ್ತೇವೆ ಎಂದು ಹೇಳಿಕೆ ನೀಡಿ ಸುಮ್ಮನಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಅವರ ಅಳಿಯ ಸಿದ್ಧಾರ್ಥ ಅವರು ಜಗತ್ತಿನ ತುಂಬಾ ಅಕ್ರಮ ಸಂಪಾದನೆ ಮಾಡಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.ಈ ಬಗ್ಗೆ ಸುಪ್ರೀಂಕೋರ್ಟ್ ಎಸ್ಐಟಿ ಗೆ ವರದಿ ಸಲ್ಲಿಸಿದ್ದರು ಕೂಡ ಕ್ರಮ ಕೈಗೊಳದೆ ಇರುವುದು ದುರದೃಷ್ಟಕರ ಎಂದರು.

ಪದ್ಮಾವತ್ ಚಿತ್ರದ ವಿವಾದ ಇದ್ದಾಗ ಇವರು ಯಾರು ಮಾತನಾಡಿಲ್ಲ. ಅಕ್ರಮ ಸಂಪಾದನೆ ಮಾಡಿದ್ದಾರೆ. ಪನಾಮ ಹೆಸರಿನಲ್ಲಿ ಅಮಿತಾಬ್ ಹೆಸರು ಬಂದಿದ್ದು ಜೈಲಿನಲ್ಲಿ ಇರಬೇಕಿತ್ತು. ಇವರ ರಕ್ಷಣೆಗೆ ಮೊದಿ ನಿಂತಿದ್ದಾರೆ. ರಾಜ್ಯ ಸರ್ಕಾರ 10 ಪರ್ಸೆಂಟ್ ಹೆಚ್ಚಿಗೆ ಕಮಿಶನ್ ಕೇಳುತ್ತೆ. ಅಷ್ಟೊಂದು ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದು ಮೋದಿಗೆ ಗೊತ್ತಿಲ್ಲ. ಅವರು ಗುಜರಾತನಿಂದ ರಾಜ್ಯಕ್ಕೆ ಬಂದ ಹೊಸಬರಾಗಿದ್ದಾರೆ.

Pm Modi shielding corrupt people like SMK, Reddy, Bacchan: Hiremath

ಛಾಪಾ ಕಾಗದದ ಹಗರಣದ ರೂವಾರಿ ಕರಿಂಲಾಲ ತೆಲಗಿ ಯಿಂದ 1999 ರಿಂದ 2004 ರವರೆಗೆ ಎಸ್ ಎಂ ಕೃಷ್ಣ ಹಾಗೂ ಅಳಿಯ ಸಿದ್ದಾರ್ಥ ಸಾಮ್ರಾಜ್ಯ ನಿರ್ಮಾಣವಾಗಿದೆ. ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ ಗಂಭೀರ ಆರೋಪ

English summary
Samaja Parivarthana chief SR Hiremath criticises Prime minister Narendra Modi government about Shielding corrupt politicians like SM krishna, siddharth, janardhan reddy and Amitab Bacchan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X