ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಣ್ಣಿಗೇರಿಯ ರೈತ ವಿಜ್ಞಾನಿ ಅಬ್ದುಲ್‌ ಖಾದರ್ ನಡಕಟ್ಟಿನಗೆ ಪದ್ಮಶ್ರೀ ಗೌರವ

|
Google Oneindia Kannada News

ಧಾರವಾಡ, ಜನವರಿ 26: 73ನೇ ಗಣರಾಜ್ಯೋತ್ಸವದ ಮುನ್ನಾ ದಿನ ಕೇಂದ್ರ ಸರ್ಕಾರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಕವಿ ದಿ.ಸಿದ್ದಲಿಂಗಯ್ಯ ಸೇರಿದಂತೆ ಕರ್ನಾಟಕದ ಐವರು ಸಾಧಕರಿಗೆ ಪ್ರಶಸ್ತಿ ಲಭಿಸಿದೆ.

ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ರೈತನ ಮಗನಾಗಿ ಬೆಳೆದು, ತನ್ನ 19ನೇ ವಯಸ್ಸಿನಲ್ಲೇ ಕೃಷಿ ಉಪಕರಣದಲ್ಲಿ ಸಂಶೋಧನೆ ಮಾಡುವ ಮೂಲಕ ಇಡೀ ನಾಡಿನ ಗಮನ ಸೆಳೆದ ಧಾರವಾಡ ಜಿಲ್ಲೆ ಅಣ್ಣಿಗೇರಿಯ ವಿಶ್ವಶಾಂತಿ ಕೃಷಿ ಸಂಶೋಧಕ ಅಬ್ದುಲ್‌ ಖಾದರ್ ನಡಕಟ್ಟಿನ ಅವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ.

ಅಬ್ದುಲ್‌ ಖಾದರ್ ನಡಕಟ್ಟಿನ 1953ರಲ್ಲಿ ಅಣ್ಣಿಗೇರಿಯಲ್ಲಿ ಜನಿಸಿದ್ದು, ಎಸ್‌ಎಸ್‌ಎಲ್‌ಸಿವರೆಗೆ ಶಿಕ್ಷಣ ಮುಗಿಸಿದರು. ನಂತರ ತಂತ್ರಜ್ಞಾನದ ಕಡೆ ವಿಶೇಷ ಆಸಕ್ತಿ ಹೊಂದಿದ ಅವರು, 19 ವರ್ಷದವರಿದ್ದಾಗಲೇ ಯಂತ್ರಗಳನ್ನು ಕಂಡು ಹಿಡಿದು ಸೈ ಎನಿಸಿಕೊಂಡಿದ್ದರು.

Dharawad: Padma shri Award to Farm Equipment Inventor Abdul Khader Nadakattin

ಕೃಷಿ ಕುಟುಂಬದಲ್ಲಿ ಹುಟ್ಟಿದ ಅಬ್ದುಲ್‌ಖಾದರ್ ನಡಕಟ್ಟಿನ ಅವರು ರೈತರಿಗೆ ನೆರವಾಗಬೇಕೆಂಬ ಆಸೆಯನ್ನು ಹೊಂದಿದ್ದರು. ಅಂದಿನ ಪರಿಸ್ಥಿತಿ ಅವರನ್ನು ಸಮಾಜಮುಖಿಯಾಗಿ ಪರಿವರ್ತನೆಗೊಳ್ಳಲು ಬಿಡಲಿಲ್ಲ.

ಹಠ ಬಿಡದ ಅಬ್ದುಲ್‌ ಖಾದರ್ ನಡಕಟ್ಟಿನ ಅಂದಿನ ಸರಕಾರಕ್ಕೆ ತನ್ನ ಪರಿಸ್ಥಿತಿಯನ್ನು ತಿಳಿಸಿ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಬೆನ್ನತ್ತಿ ರೈತರಿಗೆ ಕೊಡಮಾಡುವ ಸಬ್ಸಿಡಿಯಿಂದ, ರೈತರಿಗೆ ಯಂತ್ರೋಪಕರಣಗಳನ್ನು ಕೊಟ್ಟು ಅಣ್ಣಿಗೇರಿಯ ಕೀರ್ತಿಯನ್ನು ದೆಹಲಿಯವರೆಗೂ ಪಸರಿಸಿದ್ದಲ್ಲದೇ, ದೇಶ-ವಿದೇಶಗಳಲ್ಲೂ ನಡಕಟ್ಟಿನ ಕೂರಿಗೆ (ಬಿತ್ತುವ ಯಂತ್ರ) ತಲೆ ಎತ್ತುವ ಹಾಗೆ ಆಗಿದೆ.

ಒಟ್ಟು 24 ಕೃಷಿ ಉಪಕರಣಗಳು!
ನಡಕಟ್ಟಿನ ಕೂರಿಗೆ, ಹುಣಿಸೆ ಹಣ್ಣಿನಿಂದ ಬೀಜ ಬೇರ್ಪಡಿಸುವ ಯಂತ್ರ, ಡೀಸೆಲ್ ಉಳಿತಾಯ ಮಾಡುವ ನಡಕಟ್ಟಿನ ಗಾಲಿ ಕುಂಠಿ, ಕುಡಾ ಹದಗೊಳಿಸುವ ಯಂತ್ರ, ಕಬ್ಬು ಬಿತ್ತುವ ಯಂತ್ರ, ಎಳನೀರು ಕಡಿದು ಚೆಲ್ಲಿದ ಗೊರಟುಗಳನ್ನು ಪುಡಿ ಮಾಡುವ ಯಂತ್ರ, ಎಡೆ ಹೊಡಿಯುವ, ಔಷಧಿ ಸಿಂಪಡನೆ ಮಾಡುವ ಯಂತ್ರ .. ಹೀಗೆ ಹಲವು ಯಂತ್ರಗಳನ್ನು ಸಂಶೋಧಿಸಿ ತಯಾರಿಸಿ ರೈತರಿಗೆ ನೆರವಾಗಿದ್ದಾರೆ.

Dharawad: Padma shri Award to Farm Equipment Inventor Abdul Khader Nadakattin

"ನನಗೆ ರೈತರ ಆಶೀರ್ವಾದ, ಭಗವಂತನ ಕೃಪೆ ಯಾವುದೂ ಕೂಡಾ ಸುಳ್ಳು ಆಗಲಿಲ್ಲ. ಅಣ್ಣಿಗೇರಿಯ ಹೆಸರು ದಿಲ್ಲಿವರೆಗೂ ಕೊಂಡೊಯ್ದು ದೇಶವೇ ತಿರುಗಿ ನೋಡುವ ಹಾಗೆ ಮಾಡಿದ ನನ್ನ ರೈತ ಸಂಕುಲಕ್ಕೆ ನನ್ನ ಸಾಷ್ಟಾಂಗ ನಮನಗಳು," ಎಂದು ಅಬ್ದುಲ್‌ ಖಾದರ್ ನಡಕಟ್ಟಿನ ತಿಳಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭಿನಂದನೆ
ದೇಶದ ಅತ್ಯುನ್ನತ ನಾಗರಿಕ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಕೂರಿಗೆ ತಜ್ಞ ಅಬ್ದುಲ್‌ ಖಾದರ್ ನಡಕಟ್ಟಿನ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿನಂದಿಸಿದ್ದಾರೆ. ನನ್ನದೇ ಮತಕ್ಷೇತ್ರದ ಕೃಷಿ ಸಂಶೋಧಕನಿಗೆ ಪ್ರಶಸ್ತಿ ಲಭಿಸಿರುವುದು ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಪ್ರಶಸ್ತಿ ಪಡೆದ ಕರ್ನಾಟಕದ ಇತರ ಸಾಧಕರು
ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಸುಬ್ಬಣ್ಣ ಅಯ್ಯಪ್ಪನ್ (ವಿಜ್ಞಾನ ಮತ್ತು ಇಂಜಿನಿಯರಿಂಗ್), ಎಚ್​. ಆರ್. ಕೇಶವಮೂರ್ತಿ (ಕಲೆ), ಅಬ್ದುಲ್ ಖಾದರ್ ನಡಕಟ್ಟಿನ, ಅಮೈ ಮಹಾಲಿಂಗ ನಾಯ್ಕ (ಕೃಷಿ), ಡಾ. ಸಿದ್ದಲಿಂಗಯ್ಯ (ಸಾಹಿತ್ಯ ಮತ್ತು ಶಿಕ್ಷಣ) ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದಿದ್ದಾರೆ.

English summary
The Padma Shri award has been conferred on Abdul Khader Nadakatina from Annigere in Dharwad district, who has attracted attention through research in agricultural equipment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X