ನ್ಯಾನೋ ತಂತ್ರಜ್ಞಾನದಿಂದ ಮನುಷ್ಯರ ಸಮಸ್ಯೆಗಳಿಗೆ ಪರಿಹಾರ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಧಾರವಾಡ, ಫೆಬ್ರವರಿ,29: ನ್ಯಾನೋ ತಂತ್ರಜ್ಞಾನ ಮುಂಬರುವ ದಿನಗಳಲ್ಲಿ ಮಾನವರ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ. ವಿಜ್ಞಾನ ಕೇಂದ್ರ ಕೇವಲ ಸಂಗ್ರಹಾಲಯವಲ್ಲ, ವಿದ್ಯಾರ್ಥಿಗಳು ವೈಜ್ಞಾನಿಕ ವಿಚಾರಗಳಲ್ಲಿ ಆಸಕ್ತಿ ವಹಿಸಬೇಕು ಎಂದು ಎಸ್.ಡಿ.ಎಂ. ವೈದ್ಯಕೀಯ ವಿಜ್ಞಾನ ಕಾಲೇಜಿನ ಡಯಾಗ್ನೋಸಿಸ್ ಮತ್ತು ನ್ಯಾನೋ ಮೆಡಿಸಿನ್, ರೇಡಿಯೋ ವಿಭಾಗದ ಮುಖ್ಯಸ್ಥ ಡಾ. ಎಸ್.ಕೆ. ಜೋಶಿ ಹೇಳಿದ್ದಾರೆ.

ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ (ಫೆಬ್ರವರಿ.28) ಮತ್ತು ವಿಜ್ಞಾನ ಕೇಂದ್ರದ 4ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ವೈದ್ಯಕೀಯ ರಂಗದಲ್ಲಿ ನ್ಯಾನೋ ಔಷಧಿಗಳು ಮಹತ್ವ ಪಾತ್ರ ವಹಿಸುತ್ತಿವೆ ಎಂದ ಜೋಶಿ, ನ್ಯಾನೋ ತಂತ್ರಜ್ಞಾನವನ್ನು ಬಳಸಿಕೊಂಡು ಮಾನವನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು' ಎಂದರು.[ಅಬ್ಬಬ್ಬಾ... ಅನ್ಯಗ್ರಹದ ಜೀವಿಗಳಿಗೂ ಬಲೆ ಹಾಕಿದ ಚೀನಾ!]

Dharwad

ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಕೆ.ಬಿ. ಗುಡಸಿ ಮಾತನಾಡಿ, 'ವಿಜ್ಞಾನ ತಿಳಿದುಕೊಳ್ಳುವುದಷ್ಟೇ ಅಲ್ಲದೇ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು ಆತ್ಮ ವಿಶ್ವಾಸ ಹಾಗೂ ಛಲವನ್ನು ಬೆಳೆಸಿಕೊಳ್ಳಬೇಕು' ಎಂದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.[ವಿಶ್ವದ ರಚನೆ ಕಾರಣ ಪತ್ತೆ ಹಚ್ಚಿದ ವಿಜ್ಞಾನಿಗಳು]

Dharwad

ವಿಜೇತರು :

ರಸಪ್ರಶ್ನೆ ಸ್ಪರ್ಧೆ: ಎನ್. ಕೆ. ಟಕರ್ ಶಾಲೆಯ ಆಕಾಶ ಎಂ. ಅಂಗಡಿ (ಪ್ರಥಮ), ಕೆ.ಎಲ್.ಇ. ರಾಯಾಪೂರ ಶಾಲೆಯ ಪ್ರಜ್ವಲ ಎಚ್. ಎನ್., ಕಾರ್ತಿಕ ರೇವಣಕರ (ದ್ವಿತೀಯ), ಬಿಎಂಇಎಂಎಚ್ಎಸ್ ಶಾಲೆ, ಹುಬ್ಬಳ್ಳಿ ಜಯಂತ ಕೋಟಿ, ಗುಲ್ಫಾನ ಪೀರಜಾದೆ (ತೃತೀಯ).[ಅಪರೂಪದ ಕಪ್ಪುರಂಧ್ರ ಪತ್ತೆ ಮಾಡಿದ ಅಮೆರಿಕದ ವಿಜ್ಞಾನಿ]

ಪ್ರಬಂಧ ಸ್ಫರ್ಧೆ: ರಾಜೇಶ್ವರಿ ಹರ್ನಾಡಕರ, ಬಂಗೂರನಗರ ಪದವಿ ಮಹಾವಿದ್ಯಾಲಯ, ದಾಂಡೇಲಿ (ಪ್ರಥಮ), ಕುಸುಮ ಮುಗಳಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ನರೇಗಲ್ಲ (ದ್ವಿತೀಯ) ಹಾಗೂ ಭಾಗ್ಯಶ್ರೀ ಎನ್. ಜೋಶಿ, ಜೆ. ಟಿ ಮಹಾವಿದ್ಯಾಲಯ, ಗದಗ (ತೃತೀಯ).

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
National Science Day Celebration organized by Science and technology Department at Regional Science Centre Dharwad on Sunday, February 28th.
Please Wait while comments are loading...