ಧಾರವಾಡದಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ನಕಲು: ಓರ್ವ ಡಿಬಾರ್

Posted By: Nayana
Subscribe to Oneindia Kannada

ಧಾರವಾಡ, ಡಿಸೆಂಬರ್ 19 : ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಅಭ್ಯರ್ಥಿಯನ್ನು ಡಿಬಾರ್ ಮಾಡಿದ ಘಟನೆ ಧಾರವಾಡದಲ್ಲಿ ಮಂಗಳವಾರ ನಡೆದಿದೆ.

ಕೆಪಿಎಸ್ಸಿಯ ಗೆಜೆಟೆಡ್ ಪ್ರೊಬೆಷನರಿ ಮುಖ್ಯ ಪರೀಕ್ಷೆಯ ಸಾಮಾನ್ಯ ಜ್ಞಾನ ಪ್ರಥಮ ಪತ್ರಿಕೆಯನ್ನು ಬರೆಯುವಾಗ ಆಧುನಿಕ ತಂತ್ರಜ್ಞಾನ ಬಳಸಿ ನಕಲು ಮಾಡುತ್ತಿದ್ದ ಅಭ್ಯರ್ಥಿ ರಾಜಕುಮಾರ್ ಗೌಡಪ್ಪಗೋಳ ಅವರನ್ನು ಪರೀಕ್ಷಾಉಪಸಮನ್ವಯಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಪರೀಕ್ಷಾ ವೀಕ್ಷಕ ರಮೇಶ್ ಕೋನರಡ್ಡಿ ಗುರತಿಸಿ ಡಿಬಾರ್ ಮಾಡಿದ್ದಾರೆ.

Malpractice in KAS exams:one debar

ಅಭ್ಯರ್ಥಿಯು ಬನಿಯನ್ ನಲ್ಲಿ ಚಿಪ್, ವೈರ್ ಅಳವಡಿಸಿಕೊಂಡಿದ್ದರು. ರಾಜಕುಮಾರ್ ವಿರುದ್ಧ ಪೊಲೀಸ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An aspirant of Civil service officer has been debarred in preliminary exams conducted by Karnataka state Public Service Commission in Dharwad who tried to use device for malpractice.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ