Hubballi-Dharwad: ಅವಳಿ ನಗರಕ್ಕೆ ಲಘು ರೈಲು ಸಾರಿಗೆ ಯೋಜನೆ, BRTS ಅಂತ್ಯಗೊಳ್ಳುತ್ತಾ?: ಸಂತೋಷ್ ಲಾಡ್
ಬೆಂಗಳೂರು, ಜನವರಿ 06: ರಾಜ್ಯದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ 'ಚಿಗರಿ ಬಸ್' ಎಂದು ಕರೆಯಲಾಗುವ ಬಿಆರ್‌ಟಿಎಸ್ ಬಸ್ ವಿರುದ್ಧ ಒಂದಷ್ಟು ಆರೋಪಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೆ ಅವಳಿ ನಗರಗಳ ಮಧ್ಯೆ ಲಘು ರೈಲು ಸಾರಿಗೆ ಯೋಜನೆ ಪರಿಚಯಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಸಾಕಷ್ಟು ಅನುಕೂಲಗಳು ಆಗಲಿವೆ ಎಂದು ಕಾರ್ಮಿಕ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವರು, ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಬಂದ್ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಅವಳಿ ನಗರದಲ್ಲಿ ಸದ್ಯ ಬಿಆರ್‌ಟಿಎಸ್ ಬಸ್‌ಗಳು ಸಂಚರಿಸುತ್ತಿವೆ. ಈ ಸಾರಿಗೆ ಸಂಸ್ಥೆ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿವೆ. BRTS ಸಾರಿಗೆಯು ಸುಮಾರು 40 ಕೋಟಿ ರೂಪಾಯಿ ನಷ್ಟದಲ್ಲಿ ಸಂಚಾರ ಸೇವೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಅವಳಿನಗರದಲ್ಲಿ ಲಘು ರೈಲ್ ಸಾರಿಗೆ ಪರಿಚಯಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು.

ಸಚಿವರ ಈ ಮಾತು ಕೇಳುತ್ತಿದ್ದಂತೆ ಚಿಗರಿ ಬಸ್ ಸಂಚಾರ ಅಂತ್ಯವಾಗುತ್ತಾ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಸೃಷ್ಟಿಯಗಿದೆ. ಚಿಗರಿ ಬಸ್‌ಗಳಿಂದ ನಿತ್ಯ ಒಂದಲ್ಲಾ ಒಂದು ಕಡೆ ಅಪಘಾತ ಸಂಭವಿಸುತ್ತಿವೆ. ಅಪಘಾತ ಸೇರಿದಂತೆ ಇನ್ನಿತರ ಕಾರಣಗಳಿಂದ ಬಿಆರ್‌ಟಿಎಸ್ ಹಲವು ಆರೋಪ ಎದುರಿಸುತ್ತಿದೆ. ಹೀಗಾಗಿ ಬಂದ್ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೆ ಸಚಿವರು ಹೊಸದಾಗಿ ಬಸ್ ಹಾಗೂ ಲಘು ರೈಲು ಸಾರಿಗೆ (ಬಸ್ ರೀತಿ ಉದ್ದದ ಬಸ್ಸುಗಳ ಸೇವೆ) ಅರಂಭಿಸುವ ಬಗ್ಗೆ ಸುಳಿವು ನೀಡಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿರುವ BRTS ಹುಬ್ಬಳ್ಳಿ ಧಾರವಾಡ ಜನರಿಗೆ ಅನಕೂಲವಾಗುತ್ತದೆ ಎಂದುಕೊಂಡಿದ್ದ ಜನರಿಗೆ ಇದರಿಂದ ಅನಾನುಕೂಲವಾಗದ್ದೆ ಹೆಚ್ಚು ಎನ್ನುತ್ತಿದ್ದಾರೆ. ಈ ಸಾರಿಗೆ ಬಂದ್ ಮಾಡಿ ಹೊಸ ಸಾರಿಗೆ ವ್ಯವಸ್ಥೆ ಪರಿಚಯಿಸುವ ಚಿಂತನೆ ಸರ್ಕಾರಕ್ಕೆ ಇದೆ ಎಂದು ಖುದ್ದು ಸಚಿವರು ತಿಳಿಸಿದರು.

ಬಿಜೆಪಿ ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಜಾರಿಗೆ ಬಂದಿದ್ದ ಸಾರಿಗೆ ಸೇವೆ ಇದಾಗಿದೆ. ಸಾವಿರಾರು ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ ಮಾಡಲಾಗಿತ್ತು. ಮೂಲಗಳ ಪ್ರಕಾರ, ಮಾಸಿಕವಾಗಿ 40 ಕೋಟಿ ರೂ. ನಷ್ಟದಲ್ಲಿ ಬಿಆರ್‌ಟಿಎಸ್ ಸೇವೆ ಒದಗಿಸುತ್ತಿದೆ ಎಂದು ಹೇಳಿದರು.
LRT ಯೋಜನೆ: ಸಕಾರಾತ್ಮಕ ಸ್ಪಂದನೆ
ಅವಳಿ ನಗರದ ಜನರಿಗೆ ಸುರಕ್ಷಿತ ಸಾರಿಗೆ ಸೇವೆ ಒದಗಿಸುವ ಕಾರಣದಿಂದ ಸರ್ಕಾರವು LRT ಯೋಜನೆ ಜಾರಿ ಮಾಡಲು ಮಾತುಕತೆ ನಡೆಯುತ್ತಿದೆ. ಈಗಾಗಲೇ ನಾನು ಪ್ರಾನ್ಸ್‌ಗೆ ಭೇಟಿ ನೀಡಿ ಅಲ್ಲಿನ ಕಂಪನಿ ಜೊತೆಗೆ ಮಾತುಕತೆ ನಡೆಸಿದ್ದೇನೆ. ಶೇಕಡಾ 50ರಷ್ಟು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಅವಳಿನಗರದಲ್ಲಿ ಲಘು ವಾಹನ ಸಾರಿಗೆ ಸೇವೆ ಆರಂಭಿಸಲು ಅವರೇ ಬಂಡವಾಳ ಹೂಡಿಕೆ ಮಾಡುತ್ತಾರೆ. ಅವರೇ ಬಸ್ ಸಂಚಾರವನ್ನೂ ನಿರ್ವಹಿಸುತ್ತಾರೆ ಎಂದು ವಿವರಿಸಿದರು.
ಒಂದೇ ಬಸ್‌ನಲ್ಲಿ 250 ಜನ ಸಂಚಾರ
ಪ್ರಾನ್ಸ್ ಭೇಟಿ ವೇಳೆ ಅಲ್ಲಿನ ಲಘು ಸಂಚಾರ ವಾಹನಗಳನ್ನು ಪರಿಶೀಲಿಸಲಾಗಿತ್ತು. ನಮ್ಮಲ್ಲಿ ಜಾರಿಯಾದರೆ LRT ವಾಹನಗಳಲ್ಲಿ ಸುಮಾರು 250 ಜನ ಹೋಗಬಹುದು. ಇದು ಇಲೆಕ್ಟ್ರಿಕಲ್ ಬಸ್ ಆಗಿರುವ ಕಾರಣಕ್ಕೆ ವಾತಾವರಣವು ಹಾಳಾಗಲ್ಲ. ಪರಿಸರ ಸ್ನೇಹಿ ಸಾರಿಗೆ ಇದಾಗಲಿದೆ. ಹೀಗಾಗಿ ಇಂಥದ್ದೊಂದು ಚಿಂತನೆ ನಡೆಸಿದ್ದೇವೆ ಎಂದರು.
BRTS ಜತೆ ಸಚಿವರ ಸಭೆ
ಜನವರಿಯಲ್ಲಿಯೇ BRTS ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ಈ ಸಾರಿಗೆಯಲ್ಲಿ ಏನೆಲ್ಲ ಬದಲಾವಣೆ ಮಾಡಬೇಕು ಎಂಬುದರ ಕುರಿತು ಸಭೆಯಲ್ಲಿ ಮಾತುಕತೆ ನಡೆಸಲಿದ್ದೇವೆ. ಕಳೆದ ತಿಂಗಳ ನಾನೇ ವೈಯಕ್ತಿಕವಾಗಿ ಫ್ರಾನ್ಸ್ ಗೆ ಹೋಗಿದ್ದೆ. ನಾನು ಅಲ್ಲಿನ ಕಂಪನಿ ಜೊತೆ ಮಾತಾಡಿದ್ದೇನೆ. ಇದೊಂದು ಪಿಪಿಇ ಪ್ರಾಜೆಕ್ಟ್ ಆಗಿದ್ದು, ಇದರ ಸಾಧಕ ಭಾದಕಗಳ ಕುರಿತು ಚರ್ಚೆ ನಡೆಸಿ ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದರು.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್












Click it and Unblock the Notifications