ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಹ್ಲಾದ್ ಜೋಶಿ ಬಾಯಿಗೆ ಧಾರವಾಡ ಪೇಡ

|
Google Oneindia Kannada News

ಬೆಂಗಳೂರು, ಮೇ 16 : ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿದಿರುವ ಪ್ರಹ್ಲಾದ್ ಜೋಶಿ ಧಾರವಾಡ ಕ್ಷೇತ್ರದಲ್ಲಿ 1,13,657 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ವಿನಯ್ ಕುಲಕರ್ಣಿ, ಜೆಡಿಎಸ್ ನ ಹನುಂತಪ್ಪ ಬಂಕಾಪುರ ಮತ್ತು ಆಮ್ ಆದ್ಮಿ ಪಕ್ಷದ ಹೇಮಂತ್ ಕುಮಾರ್ ಅವರನ್ನು ಸೋಲಿಸಿರುವ ಜೋಶಿ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ನ ವಿನಯ್ ಕುಲಕರ್ಣಿ ಜೋಶಿ ಅವರಿಗೆ ಪೈಪೋಟಿ ನೀಡಿದರು. ಆದರೆ, ಕೊನೆಯಲ್ಲಿ ಜೋಶಿ ಗೆಲುವು ಸಾಧಿಸಿದರು.

Dharwad

ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರಹ್ಲಾದ್ ಜೋಶಿ ಸ್ವ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಜೊತೆ ರಾಜ್ಯದಲ್ಲಿಯೂ, ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದರು. ರಾಜ್ಯ ಪ್ರವಾಸ ಮಾಡುತ್ತಾ, ಕ್ಷೇತ್ರದಲ್ಲೂ ಪ್ರಚಾರ ನಡೆಸಿ ಮತ ಯಾಚನೆ ಮಾಡಿದ ಅವರು, ಜಯಸಾಧಿಸಿದ್ದಾರೆ. ಏ.17ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಲ್ಲಿ ಶೇ 65.95ರಷ್ಟು ಮತದಾನವಾಗಿತ್ತು.

ಧಾರವಾಡ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪಡೆದ ಮತ [ಕರ್ನಾಟಕದಲ್ಲಿ ಗೆದ್ದವರು, ಸೋತವರು]

ಧಾರವಾಡ ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ಪ್ರಹ್ಲಾದ್ ಜೋಶಿ
1
ಬಿಜೆಪಿ 5,45,395
ವಿನೋದ್ ಕುಲಕರ್ಣಿ
2
ಕಾಂಗ್ರೆಸ್ 4,31,738

ಹನುಮಂತಪ್ಪ ಬಂಕಾಪುರ
3
ಜೆಡಿಎಸ್ 8,836
ಈರಪ್ಪ ಬರಮಪ್ಪ ಮಾದಾರ್ 4 ಬಿಎಸ್ಪಿ 6,858
English summary
Lok Sabha Election results 2014, Karnataka : BJP State president Prahlad Joshi wins in Dharwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X