ಲೋಕಸಭಾ ಚುನಾವಣೆಗೆ ಡಿಸೆಂಬರ್ 30ರೊಳಗೆ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ಅಂತಿಮ-ಲಕ್ಷ್ಮೀ ಹೆಬ್ಬಾಳ್ಕರ್
ಧಾರವಾಡ, ಡಿಸೆಂಬರ್ 16: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಡಿಸೆಂಬರ್ 30ರೊಳಗೆ ಧಾರವಾಡ ಕ್ಷೇತ್ರ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ಕೊಡಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಧಾರವಾಡ ಲೋಕಸಭಾ ಚುನಾವಣೆಯ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದ ವೀಕ್ಷಕ ಸಭೆ ನಡೆಸುತ್ತಿದ್ದು, ಸಭೆ ಈಗಾಗಲೇ ಆಗಬೇಕಾಗಿತ್ತು. ಆದರೆ ಗೃಹ ಲಕ್ಷ್ಮಿ ಯೋಜನೆಯಲ್ಲಿ ನಾನು ಬ್ಯುಸಿಯಾಗಿದ್ದೆ. ಇದರ ಜೊತೆಗೆ ನಾನು ಉಡುಪಿಯ ಉಸ್ತುವಾರಿಯೂ ಹೌದು ಹೀಗಾಗಿ ತಡವಾಗಿದೆ ಎಂದು ಹೇಳಿದರು.

ಬೆಳಗಾವಿಗೆ ಹೋಗಲು ವಾರಕ್ಕೆ ಎರಡು ದಿನ ಸಿಗುತ್ತಿದೆ. ಹೀಗಾಗಿ ಧಾರವಾಡಕ್ಕೆ ಬರುವುದಕ್ಕೆ ಸ್ವಲ್ಪ ತಡ ಆಗಿದೆ ಯಾವುದೇ ಕಾರಣಕ್ಕೂ ಡಿಸೆಂಬರ್ 30ರೊಳಗೆ ಧಾರವಾಡ ಲೋಕಸಭಾ ಕ್ಷೇತ್ರದ ಕಾಮಗ್ರೆಸ್ ಆಕಾಂಕ್ಷಿಗಳ ಪಟ್ಟಿ ಕೊಡಬೇಕಿದೆ. ಈ ಸಂಬಂಧ ನನಗೆ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು.
ಈ ಭಾಗದ ಶಾಸಕರು, ಸಚಿವರ ಜೊತೆ ಮಾತನಾಡಬೇಕಿದ್ದು, ಆಕಾಂಕ್ಷಿಗಳೆಲ್ಲ ಖುದ್ದಾಗಿ ಭೇಟಿಯಾಗಿ ಅರ್ಜಿ ಕೊಡಬೇಕಾಗಿದೆ. ಅಲ್ಪಸಂಖ್ಯಾತರದ್ದು ಇಡೀ ರಾಜ್ಯದಲ್ಲಿ 3 ಕ್ಷೇತ್ರದ ಬೇಡಿಕೆ ಇದೆ. ಎಲ್ಲವನ್ನೂ ಪಕ್ಷದ ಅಧ್ಯಕ್ಷರಿಗೆ ವರದಿ ಮಾಡುತ್ತೇನೆ. ಧಾರವಾಡದಿಂದ ಅಲ್ಪಸಂಖ್ಯಾತರು ಯಾರು ಅರ್ಜಿ ಸಲ್ಲಿಸಿಲ್ಲ. ನಾನು ಈಗ ಎಲ್ಲ ಮುಖಂಡರೊಂದಿಗೆ ಸಭೆ ಮಾಡುತ್ತೇನೆ ಎಂದು ಹೇಳಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ರಿಂದ ನಿಯಮ ಉಲ್ಲಂಘನೆ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಆರ್‌ಟಿಎಸ್ ಕಾರಿಡರ್‌ನಲ್ಲಿ ಪ್ರಯಾಣ ಮಾಡುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದಾರೆ. ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಅನಧಿಕೃತ ಪ್ರವೇಶ ಮಾಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಕಾರಿಡಾರ್‌ನಲ್ಲಿಯೇ ಬೈಕ್ ರ್ಯಾಲಿ ಮಾಡಿದ್ದಾರೆ. ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಸಭೆಗೆ ಬಂದ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಅವರ ಬೆಂಬಲಿಗರು ಉಲ್ಲಂಘನೆ ಮಾಡಿದ್ದಾರೆ .
ಬಿಆರ್‌ಟಿಎಸ್ ಬಸ್ ಹಾಗೂ ಅಂಬ್ಯುಲೆನ್ಸ್ ಓಡಾಡಕ್ಕೆ ಮಾತ್ರ ಅವಕಾಶ ಇದೆ. ಆದರೆ ಕಾರಿಡಾರ್‌ನಲ್ಲಿ ಅನಧಿಕೃತ ಪ್ರವೇಶ ಮಾಡಿದ ಕಾರ್ಯಕರ್ತರು ಧಾರವಾಡದ ಮಯೂರ ಹೊಟೇಲ್‌ಗೆ ಸಭೆ ನಡೆಸಲು ಆಗಮಿಸಬೇಕಿದ್ದ ಹೆಬ್ಬಾಳ್ಕರ್ ಅವರಿಗೆ ಟೋಲ್ ನಾಕಾದಲ್ಲಿ ಬೃಹತ್ ಹಾರ ಹಾಕಿ ಸ್ವಾಗತ ಕೋರಿದರು. ಅಲ್ಲದೇ ಕಾರಿಡಾರ್‌ನಲ್ಲಿಯೇ ಬೈಕ್ ರ್ಯಾಲಿ ಮಾಡಿ ಘೋಷಣೆ ಕೂಗಿದ್ದಾರೆ.












Click it and Unblock the Notifications