Breaking; ಪರಿಷತ್ ಫೈಟ್; ನಾಮಪತ್ರ ಸಲ್ಲಿಸಿದ ಹೊರಟ್ಟಿ

ಧಾರವಾಡ, ಮೇ 24; ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ ಮಾಡಿದರು. ಕೆಲವು ದಿನಗಳ ಹಿಂದೆ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು.

ಮಂಗಳವಾರ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಸಹಾಯಕ ಚುನಾವಣಾಧಿಕಾರಿ, ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಗೆ ದ್ವಿಪ್ರತಿ ನಾಮಪತ್ರಗಳನ್ನು ಸಲ್ಲಿಸಿದರು.

ಮೊದಲ ಬಾರಿ ಸಲ್ಲಿಸುವಾಗ ಬಸವರಾಜ ಹೊರಟ್ಟಿ ಜೊತೆಗೆ ಪತ್ನಿ ಹೇಮಲತಾ ಹೊರಟ್ಟಿ, ಎನ್. ಎನ್. ಸವಣೂರ. ಎರಡನೇ ಬಾರಿ ನಾಮಪತ್ರ ಸಲ್ಲಿಸುವಾಗ ವಿ. ಎಸ್. ಹುದ್ದಾರ, ಶ್ಯಾಮ ಮಲ್ಲನಗೌಡರ ಉಪಸ್ಥಿತರಿದ್ದರು.

Legislative Council Elections Basavaraj Horatti Files Nomination

ಅದೃಷ್ಟದ ಕಾರಿನಲ್ಲಿ ಬಂದರು; ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಬಸವರವಾಜ ಹೊರಟ್ಟಿ ತಮ್ಮ ಅದೃಷ್ಟದ ಅಂಬಾಸಿಡರ್ ಕಾರಿನಲ್ಲಿ ಆಗಮಿಸಿದರು.

1980ರಲ್ಲಿ ಮೊದಲ ಬಾರಿ ಚುನಾವಣಗೆ ಸ್ಪರ್ಧಿಸಿದಾಗಲೂ ಅವರು ಸಿಎನ್‌ಬಿ 5757 ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದರು.

ಕಾರಿನ ಕುರಿತು ಮಾತನಾಡಿದ ಹೊರಟ್ಟಿ, "ಈ ಕಾರಿನ ಮೇಲೆ ನನಗೇನೋ ಭಾವನಾತ್ಮಕ ಸಂಬಂಧದ ಆ ಪ್ರೀತಿಗಾಗಿ ಕಾರು ತೆಗೆದುಕೊಂಡು ಬಂದಿದ್ದೇನೆ" ಎಂದರು.

8ನೇಬಾರಿ ಗೆದ್ದು ದಾಖಲೆ; ಬಸವರಾಜ ಹೊರಟ್ಟಿ ಶಿಕ್ಷಕರ ಕ್ಷೇತ್ರದಿದ ಈಗಾಗಲೇ 7 ಬಾರಿ ಗೆದ್ದಿದ್ದಾರೆ. ಈಗ 8ನೇ ಬಾರಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+