Kodi Mutt Swamiji: ಪಂಚಭೂತಗಳಿಂದಲೇ ಗಂಡಾಂತರ, 3 ಪ್ರಧಾನಿಗಳ ಸಾವು: ಕೋಡಿಮಠ ಶ್ರೀಗಳಿಂದ ಸ್ಪೋಟಕ ಭವಿಷ್ಯ
ಧಾರವಾಡ, ಜೂನ್ 25: ಮಳೆ, ಪ್ರವಾಹ, ರಾಜಕೀಯ, ಪ್ರಳಯ ಸೇರಿದಂತೆ ದೇಶದ ಆಗು ಹೋಗುಗಳ ಬಗ್ಗೆ ಭವಿಷ್ಯ ನುಡಿಯುವ ಹಾಸನದ ಶ್ರೀ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಇದೀಗ ಮತ್ತೆ ಮಹತ್ವದ ಭವಿಷ್ಯ ನುಡಿದಿದ್ದಾರೆ.
ಮಂಗಳವಾರ ಧಾರವಾಡ ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ಸಂವತ್ಸರ ಒಳಿತಿಗಿಂತ ಕೆಡಕು ಹೆಚ್ಚು ಮಾಡುತ್ತದೆ ಎಂದು ಹಾಸನದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ಭಾರತೀಯ ಪದ್ಧತಿಯಲ್ಲಿ ಸಂವತ್ಸರಗಳಿಗೆ ಮಹತ್ವ ಇದೆ. ಈಗ ಕ್ರೋಧಿ ನಾಮ ಸಂವತ್ಸರ ನಡೆದಿದೆ ಈ ಸಂವತ್ಸರ ಒಳಿತಿಗಿಂತ ಕೆಡಕು ಹೆಚ್ಚು ಮಾಡುತ್ತದೆಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದಲೂ ತೊಂದರೆ ಇದೆ.
ಆಕಾಶ ತತ್ವದ ಬಗ್ಗೆ ಶ್ರಾವಣದಲ್ಲಿ ಭವಿಷ್ಯ
ಆಕಾಶ ತತ್ವ ಆಗಲಿದೆ ಆ ಆಕಾಶ ತತ್ವ ಏನೆಂದು ನಾನು ಶ್ರಾವಣದಲ್ಲಿ ಹೇಳುತ್ತೇನೆ. ಸುರಿದಲ್ಲೊಯೇ ಮಳೆ ಸುರಿಯುತ್ತಿದೆ. ಭೂ ಕುಸಿತ, ಜಲಪ್ರಳಯ ಉಂಟಾಗುವ ಲಕ್ಷಣಗಳು ಇದೆ. ಇದರಿಂದ ಜನರು ತೊಂದರೆ ಎದುರಿಸಬಹುದು ಎಂದು ಅವರು ತಿಳಿಸಿದ್ದಾರೆ.
ಪಂಚಭೂತಗಳಲ್ಲಿ ಒಂದಾಗಿರುವ ಗಾಳಿಯಿಂದಲೂ ತೊಂದರೆ ಆಗಲಿದೆ. ಮುಂದಿನ ಶ್ರಾವಣದಲ್ಲಿ ಇದೇ ವಿಚಾರ ಕುರಿತು ಪೂರ್ಣ ಮಾಹಿತಿ ನೀಡಲಿದ್ದಾರೆ. ಇದರೊಂದಿಗೆ ರಾಷ್ಟ್ರ ರಾಜಕೀಯ ಬಗ್ಗೆ ಮಾತನಾಡಿದ ಅವರು, ಅತಂತ್ರದಲ್ಲೇ ರಾಷ್ಟ್ರದಲ್ಲಿ ಅಧಿಕಾರಕ್ಕಾಗಿ ಕೂಡಿದ್ದಾರೆ. ಇನ್ನೂ ಅಂಗಡಿ ಒಪನ್ ಆಗಿಲ್ಲ ಎಂದು ಮಾರ್ಮಿಕವಾಗಿ ಸ್ವಾಮೀಜಿ ನುಡಿದಿದ್ದಾರೆ.
ರಾಷ್ಟ್ರ ರಾಜಕಾರಣ ಬಗ್ಗೆ ಶ್ರೀಗಳು ಹೇಳಿದ್ದೇನು?
ವ್ಯಾಪಾರ ಶುರುವಾಗಲಿ ಆ ಬಳಿಕ ರಾಷ್ಟ್ರ ರಾಜಕಾರಣದ ಭವಿಷ್ಯ ಹೇಳುತ್ತೇನೆ. ಅದೆಲ್ಲದರ ಬಗ್ಗೆ ಸಮಗ್ರವಾಗಿ ಶ್ರಾವಣದಲ್ಲಿ ಮಾಹಿತಿ ನೀಡಲಾಗುವುದು. ಶುರುವಾಗುವ ಮುನ್ನವೇ ಅಶುಭ ಈಗಲೇ ನುಡಿಯಬಾರದು. ಶುಭವೋ ಅಶುಭವೋ ಅಂತಾ ಶ್ರಾವಣದಲ್ಲಿ ಹೇಳುವೆ ಎಂದು ದೇಶದ ರಾಜಕಾರಣ ಬಗ್ಗೆ ಅವರು ಮಾತನಾಡಿದರು.
ಮಹಾಭಾರತದಲ್ಲಿ ಅಭಿಮನ್ಯುವಿನ ಬಿಲ್ಲಿನ ದಾರ ಕರ್ಣನಿಂದ ಕತ್ತರಿಸಿಸಿದರು. ಈಗ ಅಭಿಮನ್ಯುವಿನ ಹೆಂಡತಿ ಸಂಸತ್ ನಲ್ಲಿ ಪ್ರವೇಶ ಮಾಡುತ್ತಾಳೆ. ಆದರೆ ದುರ್ಯೋಧನನ ತೊಡೆ ಒಡೆಸಿದ ಕೃಷ್ಣ ಈಗ ಇಲ್ಲ. ಹೀಗಾಗಿ ದುರ್ಯೋಧನ ಗೆಲ್ಲುತ್ತಾನೆ ಎಂದರು.
ಮೂರು ಪ್ರಧಾನಿಗಳ ಸಾವು
ಜಗತ್ತಿನಲ್ಲಿ ಎರಡು ಮೂರು ಪ್ರಧಾನಿಗಳ ಸಾವು ಆಗಲಿದೆ. ದೊಡ್ಡ ದೊಡ್ಡವರಿಗೆ ನೋವು ತಾಪ ದುಃಖ ಎದುರಾಗಲಿದೆ. ಕರೆಯದೆ ಬರುವುದು ಕೋಪ. ಬರೆಯದೇ ಓದುವವನು ಕಣ್ಣು. ಬರಗಾಲಿನಲ್ಲಿ ನಡೆಯುವವನ ಮನಸ್ಸು. ಈ ಮೂರು ನಿಯಂತ್ರಣದಲ್ಲಿಡಬೇಕು ಆದರೆ ದುಡ್ಡು, ಅಧಿಕಾರ ಮುಖ್ಯ ಅಂತಾ ಹೊರಟಿದ್ದಾರೆ. ಇದುವೇ ಅಧಃಪತನಕ್ಕೆ ಕಾರಣವಾಗಲಿದೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.












Click it and Unblock the Notifications