ಮುಸ್ಲಿಂರನ್ನು ಅನುಮಾನದಿಂದ ನೋಡುತ್ತಾರೆ: ಖಾದರ್

ಧಾರವಾಡ, ಜನವರಿ 13: 'ಮುಸ್ಲಿಂರನ್ನು ಎಲ್ಲಡೆ ಅನುಮಾನದಿಂದ ನೋಡುತ್ತಾರೆ' ಎಂದು ಆಹಾರ ಮತ್ತು ನಾಗರೀಕ ಸಚಿವ ಯುಟಿ ಖಾದರ್ ಹೇಳಿದ್ದಾರೆ.

ಧಾರವಾಡದಲ್ಲಿ ಶನಿವಾರ ನಡೆದ ರಾಜ್ಯ ಸರ್ಕಾರಿ‌ ಮುಸ್ಲಿಂ ನೌಕರರ ಸಮ್ಮೇಳನದಲ್ಲಿ ಮಾತನಾಡಿದ ಅವರು, 'ಮುಸ್ಲಿಂ ಬಾಂಧವರಿಗೆ ಸರ್ಕಾರಿ ಕ್ಷೇತ್ರ ಮತ್ತು ಇತರೆ ಕಡೆ ಕೆಲಸ ನಿರ್ವಹಿಸುವಾಗ ಸ್ವಲ್ಪ‌ ಜಾಸ್ತಿಯೇ ತೊಂದರೆ ಬರುತ್ತವೆ' ಎಂದಿದ್ದಾರೆ.

ತಮ್ಮದೇ ವೈಯಕ್ತಿಕ ಅನುಭವವನ್ನು ಹೇಳಿಕೊಂಡ ಸಚಿವರು 'ನಾನು ವಿಮಾನ ನಿಲ್ದಾಣದಲ್ಲಿ ಬರೋವಾಗ ಯು.ಟಿ.ಖಾದರ್ ಅನ್ನೋ ಹೆಸರು ನೋಡಿದಾಗ ಎರಡು ಸಲ ಹೆಚ್ಚು ಬಾರಿ ಚೆಕ್ ಮಾಡುತ್ತಾರೆ, ಅದಕ್ಕೆ ಏನು ಮಾಡೋದು,ಅದಕ್ಕೆ ಉಪಾಯವಿಲ್ಲ ತಾಳ್ಮೆಯಿಂದ ಇರಲೇ ಬೇಕಾಗುತ್ತೆ' ಎಂದರು.

Khader says Muslims facing disbelief everywhere

ಮುಸ್ಲಿಂರು ಅವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧನಿ ಎತ್ತುವ ಹಾಗೂ ಇಲ್ಲ ಎಂದ ಅವರು 'ಯಾಕೆ ಜಾಸ್ತಿ ಚೆಕ್ ಮಾಡುತ್ತೀರಿ ಅಂತಾ ಕೇಳುವುದಕ್ಕೂ ಆಗುವುದಿಲ್ಲ, ಆ ರೀತಿಯ ಪರಿಸ್ಥಿತಿ ನಿರ್ಮಾಣ ಆಗಿದೆ' ಎಂದು ಅವರು ಹೇಳಿದರು.

ಸಮಾಜ ಮುಸ್ಲಿಂರಿಗೆ ಒಡ್ಡುತ್ತಿರುವ ಎಲ್ಲ‌ ಕಷ್ಟಗಳನ್ನು ಮೀರಿ ನಡೆಯುವಂತಹ ಶಕ್ತಿ ಮುಸ್ಲಿಂ ಬಾಂಧವರಲ್ಲಿ ಬರಬೇಕು ಜನಪ್ರತಿನಿಧಿ ಹಾಗೂ ಅಧಿಕಾರಿ ಯಾರೇ ಇರಲಿ ನಾವ ಜನರೊಂದಿಗೆ ಪ್ರೀತಿ ಪೂರ್ವಕವಾಗಿ ಇರಬೇಕು ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+