ರಾಜ್ಯ ಸರ್ಕಾರ ಪತನ ಶೀಘ್ರ: ಸಿಎಂ-ಡಿಸಿಎಂ ಪ್ಲಾನ್ ಏನೆಂದು ವಿವರಿಸಿದ ಪ್ರಹ್ಲಾದ್ ಜೋಶಿ

ಧಾರವಾಡ, ಏಪ್ರಿಲ್ 04: ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ಕೊಡುತ್ತಿರುವ ಈ ಕಾಂಗ್ರೆಸ್ ಬಹಳದಿನ ಉಳಿಯಲ್ಲ. ಅಧಿಕಾರದ ಆಸೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಧ್ಯೆ ಜಗಳ ಇದ್ದೇ ಇದೆ. ಇಬ್ಬರ ಮಧ್ಯೆ ಸಂಶಯವಿದೆ. ಅವರ ಮಧ್ಯೆ ಪರಸ್ಪರ ವಿರುದ್ಧದ ಪ್ಲಾನ್ ಏನಿವೆ? ಎಂಬುದನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಿಚ್ಚಿಟ್ಟಿದ್ದಾರೆ.

ಗುರುವಾರ ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಮಧ್ಯೆ ಜಗಳ ನಿರಂತರವಾಗಿದೆ.

Karnataka Congress Govt Will Fall Soon Pralhad Joshi Revealed Siddaramaiah and DK Shivakumar Plans

ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕೆಂದು ಡಿಕೆ ಶಿವಕುಮಾರ್ ಪ್ರಯತ್ನ ನಡೆದಿದೆ. ಡಿಕೆ ಶಿವಕುಮಾರ್ ಅವರನ್ನು ಒಳಗೆ (ಜೈಲಿಗೆ) ಹಾಕಿಸಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ರಾಜ್ಯ ಸರ್ಕಾರದಲ್ಲಿ ಈ ಇಬ್ಬರ ಮಧ್ಯೆಯೂ ಒಬ್ಬರಿಗೊಬ್ಬರಿಗೆ ಪರಸ್ಪರ ನಂಬಿಕೆ, ವಿಶ್ವಾಸವಿರದೇ ಸಂಶಯ ಇದೆ. ಹೀಗಾಗಿ ಈ ಕಾಂಗ್ರೆಸ್ ಸರ್ಕಾರ ತುಂಬ ದಿನ ಉಳಿಯುವುದಿಲ್ಲ ಎಂದು ಅವರು ಭವಿಷ್ಯ ನುಡಿದರು.

ಕಾರ್ಯಕರ್ತರಿಗೆ ತೊಂದರೆ: ಅಧಿಕಾರಿಗಳಿಗೆ ಜೋಶಿ ಎಚ್ಚರಿಕೆ

ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ. ನೀವು ಕಾಂಗ್ರೆಸ್ ಪಕ್ಷ, ಇಲ್ಲವೇ ಸರ್ಕಾರದ ಮಾತು ಕೇಳಿ ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡಬೇಡಿ. ಅನಗತ್ಯ ತೊಂದರೆ ಕೊಟ್ಟರೆ ಸುಮ್ಮನಿರುವುದಿಲ್ಲ ಎಂದು ಅವರು ಎಚ್ಚರಿಸಿದರು.

Karnataka Congress Govt Will Fall Soon Pralhad Joshi Revealed Siddaramaiah and DK Shivakumar Plans

ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರಿಗೆ ತೊಂದರೆ ಕೊಟ್ಟಿದ್ದೆ ಆದಲ್ಲಿ. ನಾನೇ ಮುಂದೆ ಬಂದು ನಿಲ್ಲುತ್ತೇನೆ. ಈ ಕಾಂಗ್ರೆಸ್ ಸರ್ಕಾರ ಬಹಳ ದಿನ ಇರುವುದಿಲ್ಲ. ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ನಾವು ಸುಮ್ಮನಿರುವುದಿಲ್ಲ. ಕೇಂದ್ರದಲ್ಲಿ ನಮ್ಮ ದೇ ಬಿಜೆಪಿ ಸರ್ಕಾರ ಇದೆ ಎಂದು ಹೇಳಿದರು.

ಮೈತ್ರಿಯದ್ದು ಎಲ್ಲ ಸ್ಥಾನ ಗೆಲ್ಲುವ ಸಂಕಲ್ಪ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಸೇರಿ ಅತ್ಯುತ್ತಮ ಪ್ರಚಾರದ ಸಂಕಲ್ಪ ಮಾಡಿದ್ದೇವೆ. ರಾಜ್ಯದಲ್ಲಿ 28 ಸ್ಥಾನವೆಲ್ಲವನ್ನು ಗೆಲ್ಲುವ ಸಂಕಲ್ಪ ಮೈತ್ರಿ ಪಕ್ಷಗಳು ಮಾಡಿಕೊಂಡಿವೆ. ದೇಶದ ಅಭಿವೃದ್ಧಿ ವಿರೋಧಿ ಪಕ್ಷ ಕಾಂಗ್ರೆಸ್ 65 ವರ್ಷ ಆಡಳಿತ ಮಾಡಿದೆ. ಯುಪಿಎ ಆಡಳಿತದ ಹತ್ತು ವರ್ಷದಲ್ಲಿ ಐದು ದುರ್ಬಲ ಆರ್ಥಿಕ ದೇಶಗಳಲ್ಲಿ ಸೇರಿತ್ತು ಎಂದರು.

ಪ್ರಧಾನಿ ಮೋದಿಯವರು ಬಂದ ಮೇಲೆ ಏನು ಮಾಡಿದಾರೆಂದು ಕೇಳುತ್ತಾರೆ. ಇವತ್ತು ಭಾರತ ಜಗತ್ತಿನ ಐದನೇ ಪ್ರಬಲ ದೇಶವಾಗಿದೆ. ಇದಕ್ಕೆ ಕಾರಣವೇ ಪ್ರಧಾನಿ ನರಂದ್ರ ಮೋದಿ. ಕಾಂಗ್ರೆಸ್ ಅವಧಿಯಲ್ಲಿ ಎಲ್ಲ ಹೊಲಸೆದ್ದು ಹೋಗಿತ್ತು.ಇವರು ಮಾಡಿದ ಹೊಲಸು ತೊಳೆಯಲು ನಾವು ಐದು ವರ್ಷ ತೆಗೆದುಕೊಂಡಿದ್ದೇವೆ.

ಮುಂದಿನ ದಿನಗಳಲ್ಲಿ ಭಾರತದಲ್ಲಿ ಮತ್ತಷ್ಟು ಅಭಿವೃದ್ಧಿ ಆಗಲಿವೆ. ಆದ್ದರಿಂದಲೇ ಮೂರನೇ ಅವಧಿಗೆ ಮೋದಿ ಗ್ಯಾರಂಟಿ ಕೊಡುತ್ತಿದ್ದೇವೆ ಎಂದು ಬಿಜೆಪಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಅವರು ತಿರುಗೇಟು ಕೊಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+