ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಇಟಿ ಫಲಿತಾಂಶ: ಹುಬ್ಬಳ್ಳಿ ಪ್ರೇರಣಾ ವಿದ್ಯಾರ್ಥಿಗಳ ಅಪೂರ್ವ ಸಾಧನೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮೇ. 28 :ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಸಿಇಟಿ ಫಲಿತಾಂಶವನ್ನು ಶನಿವಾರ ಪ್ರಕಟಿಸಿದರು.

ಕೆ.ಎಲ್.ಇ. ಸಂಸ್ಥೆಯ ಪ್ರೇರಣಾ ಕಾಲೇಜಿನ ವಿದ್ಯಾರ್ಥಿಗಳು ಸಿಇಟಿಯಲ್ಲಿ Rank ಪಡೆದುಕೊಂಡಿದ್ದಾರೆ. ಸಿ.ಇ.ಟಿ. ಎಂಜಿನಿಯರಿಂಗ್ ನಲ್ಲಿ ಒಟ್ಟು ಮೂರು, ಮೆಡಿಕಲ್ ನಲ್ಲಿ ಇಬ್ಬರು, ಎಂಜಿನಿಯರಿಂಗ್ (ಆರ್ಕಿಟೆಕ್ಚರ್)ನಲ್ಲಿ ಇಬ್ಬರು, ಬಿ.ಎಸ್ಸಿ ಅಗ್ರಿಕಲ್ಚರನಲ್ಲಿ ಐದು ವಿದ್ಯಾರ್ಥಿಗಳು 500 ರೊಳಗಿನ Rank ಗಳಿಸಿದ್ದಾರೆ.[2016ನೇ ಸಾಲಿನ ಸಿಇಟಿ ಫಲಿತಾಂಶ ಇಲ್ಲಿದೆ]

ಎಂಜಿನಿಯರಿಂಗ್ ನಲ್ಲಿ ಇಬ್ಬರು, ಮೆಡಿಕಲ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು 1000 ರೊಳಗೆ Rankನ್ನು ಗಳಿಸಿದ್ದಾರೆ. ಎಂಜಿನಿಯರಿಂಗ್ ನಲ್ಲಿ ಹದಿನೇಳು ವಿದ್ಯಾರ್ಥಿಗಳು 5000 ರೊಳಗೆ Rankನ್ನು ಗಳಿಸಿದ್ದಾರೆ. ಮೆಡಿಕಲ್ ನಲ್ಲಿ ಒಟ್ಟು ಆರು ವಿದ್ಯಾರ್ಥಿಗಳು 3000 ರೊಳಗೆ Rankನ್ನು ಗಳಿಸಿದ್ದಾರೆ. [ಇಂಜಿನಿಯರಿಂಗ್ ಪ್ರವೇಶ ಶುಲ್ಕ ಶೇ 10ರಷ್ಟು ಹೆಚ್ಚಳ]

ವಿದ್ಯಾರ್ಥಿಗಳಾದ ಎನ್. ಪಿ. ಆಕಾಶ ಎಂಜಿನಿಯರಿಂಗ್ ನಲ್ಲಿ 298ನೇ Rank, ಮೆಡಿಕಲ್ ನಲ್ಲಿ 358 ನೇ Rank, ಬಿ.ಎಸ್ಸಿ. ಅಗ್ರಿಕಲ್ಚರ್ನಲ್ಲಿ 92ನೇ rank ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿರುತ್ತಾರೆ. (ಆಯ್.ಎಸ್.ಎಮ್.ಎಚ್.ನಲ್ಲಿ 195 ನೇ ರ್ಯಾಂಕ್, ವೆಟರ್ನರಿ ವಿಜ್ಞಾನ ವಿಷಯದಲ್ಲಿ 358ನೇ ರ್ಯಾಂಕ್ ಮತ್ತು ಬಿ-ಫಾರ್ಮಾ, ಡಿ-ಫಾರ್ಮಾನಲ್ಲಿ 749 ನೇ rank)

Prerana College Student

ಅತ್ಯುನ್ನತ rank ಪಡೆದವರ ವಿವರ:
* ಶ್ರೇಯಾ ಎಸ್ ಕರಮುಡಿ (ಮೆಡಿಕಲ್ 472, ಎಂಜಿನಿಯರಿಂಗ್ ನಲ್ಲಿ 2617),
* ಜಮುನಾ ಚವಡಿ (ಎಂಜಿನಿಯರಿಂಗ್ನಲ್ಲಿ 345, ಮೆಡಿಕಲ್ 1433),
* ಕೃಪಾ ಜೈನ್ (ಎಂಜಿನಿಯರಿಂಗ್ 350),
* ಬಸನಗೌಡ ವೆಂಕನಗೌಡರ (ಎಂಜಿನಿಯರಿಂಗ್ ನಲ್ಲಿ - 519, ಮೆಡಿಕಲ್ನಲ್ಲಿ 756),
* ಮುಗ್ಧಾ ಕ್ಯಾಮನಗೌಡರ (ಎಂಜಿನಿಯರಿಂಗ್ - 631, ಮೆಡಿಕಲ್ 1063),
* ಸಂಜನಾ ಎಸ್ ನೆಲೊಗಲ್ ಎಂಜಿನಿಯರಿಂಗ್ - 1034, ಮೆಡಿಕಲ್ ನಲ್ಲಿ 646),
* ಗುರುಪ್ರಸಾದ ಹಿರೇಮಠ (ಎಂಜಿನಿಯರಿಂಗ್ - 1706),
* ಸಾಹಿತ್ಯ ಬೆಳಗಾವಿ (ಎಂಜಿನಿಯರಿಂಗ್(ಆರ್ಕಿಟೇಕ್ಚರ್)-166, ಎಂಜಿನಿಯರಿಂಗ್ - 1991, ಮೆಡಿಕಲ್ 3902),

ಹುಬ್ಬಳ್ಳಿ ಪ್ರೇರಣಾ ವಿದ್ಯಾರ್ಥಿಗಳ ಅಪೂರ್ವ ಸಾಧನೆ


* ಚೇತನ ಎಮ್. ಬಂಡಾರಿ (ಎಂಜಿನಿಯರಿಂಗ್ 2328),
* ದಿಶಾ ಮಹಾಜನ್ (ಎಂಜಿನಿಯರಿಂಗ್ 2553),
* ಕುಮಾರ ಕೆ. ಕಾರ್ತಿಕ ಎಂಜಿನಿಯರಿಂಗ್ 2629),
* ಕುಮಾರಿ ಅನಘಾ ಬಿ ಕೊಪ್ಪಳ (ಎಂಜಿನಿಯರಿಂಗ್ (ಆರ್ಕಿಟೇಕ್ಚರ್) 251).

ಸಂಸ್ಥೆಯ ಚೇರಮನ್ ಡಾ. ಪ್ರಭಾಕರ ಕೋರೆ, ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

English summary
Karnataka CET 2016 : More than 12 students secured rank in Engineering, Medical and Architecture section. Hubballi Prerana college is affiliated to KLE Institute, Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X