Kundgol Elections: ಕುಂದಗೋಳ: ಕಾಂಗ್ರೆಸ್ ಭದ್ರಕೋಟೆ ಕುಂದಗೋಳದಲ್ಲಿ "ಕಮಲ" ಕಲಿಗಳ ಕಸರತ್ತು ಹೇಗಿದೆ?- ಇಲ್ಲಿದೆ ಮಾಹಿತಿ
ಕುಂದಗೋಳ, ಮಾರ್ಚ್, 23: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕ ಏರುತ್ತಲೇ ಇದೆ. ಹಾಗೆಯೇ ಎಲ್ಲಾ ಕ್ಷೇತ್ರಗಳಲ್ಲೂ ರಾಜಕೀಯ ನಾಯಕರು ತಮ್ಮ ಪಕ್ಷದ ಗೆಲುವಿಗಾಗಿ ಕ್ರೀಯಾಶೀಲರಾಗಿ ಓಡಾಡುತ್ತಿದ್ದಾರೆ. ಅದೇ ರೀತಿ ಅಪ್ಪಟ ಬಯಲುಸೀಮೆಯ ಕೃಷಿ ಭೂಮಿಯಾಗಿರುವ ಕುಂದಗೋಳದಲ್ಲಿ ರಾಜಕೀಯ ರಂಗು ಹೇಗೆ ಇದೆ ಎಂದು ತಿಳಿಯೋಣ ಬನ್ನಿ.
ಕುಂದಗೋಳವು ಬ್ಯಾಡಗಿ ಮೆಣಸಿನಕಾಯಿ ಘಾಟಿನ ತವರು, ಹಿಂದೂಸ್ಥನಿ ನಲೆಯಾಗಿ ಹೊರಹೊಮ್ಮಿದೆ. ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತಂದೆ ಎಸ್. ಆರ್. ಬೊಮ್ಮಾಯಿಯವರು ಕೂಡ ಕುಂದಗೋಳ ತಾಲೂಕಿನ ಕಮಡೊಳ್ಳಿಯವರು ಎಂಬುದು ಗಮನಾರ್ಹವಾದ ವಿಚಾರವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಕುಂದಗೋಳ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ ಆಗಿ ಮಾರ್ಪಟ್ಟಿದೆ. ಇದಕ್ಕೆ ಸಿ.ಎಸ್. ಶಿವಳ್ಳಿ ಸಾರಥ್ಯವೇ ಪ್ರಮುಖ ಕಾರಣವಾಗಿತ್ತು. ಸತತ ಎರಡು ಚುನಾವಣೆಗಳಲ್ಲಿ ಜನಭೇರಿ ಸಾಧಿಸಿದ್ದ ಶಿವಳ್ಳಿಯವರು, 2019ರ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ನಂತರ ಶಿವಳ್ಳಿ ಅವರು ನಿಧನರಾಗಿದ್ದು, ಇದು ಪಕ್ಷಕ್ಕೆ ದೊಡ್ಡ ಆಘಾತವನ್ನು ತಂದಿತ್ತು. ಬಳಿಕ ಉಪಚುನಾವಣೆಯಲ್ಲಿ ಕಣ ಪ್ರವೇಶಿಸಿದ್ದ ಶಿವಳ್ಳಿ ಪತ್ನಿ ಕುಸುಮಾವತಿ ಶಿವಳ್ಳಿ ಅನುಕಂಪದ ಮೇರೆಗೆ ವಿಜಯಪತಾಕೆಯನ್ನು ಹಾರಿಸಿದ್ದರು.
ಶಿವಳ್ಳಿ ನಿಧನದ ಬಳಿಕ ಕ್ಷೇತ್ರ ಹೇಗಿದೆ?
ಕ್ಷೇತ್ರದಲ್ಲಿ ಶಿವಳ್ಳಿ ನಿಧನದ ಬಳಿಕ ರಾಜಕೀಯ ಚಿತ್ರಣವೇ ಬದಲಾಗಿದೆ. ಕಾಂಗ್ರೆಸ್ ಪರ ಅಲೆಯಲ್ಲಿ ಏರಿಳಿ ಅಗಿದ್ದು, ಇದೀಗ ಕಾಂಗ್ರೆಸ್ ಟಿಕೆಟ್‌ಗಾಗಿ 14 ಜನ ಅರ್ಜಿ ಸಲ್ಲಿಸಿ ಕುತೂಹಲ ಮೂಡಿಸಿದ್ದಾರೆ. ಇದರಲ್ಲಿ ಶಾಸಕಿ ಕುಸುಮಾವತಿ ಮತ್ತು ಶಿವಳ್ಳಿ ಸಹೋದರ ಮುತ್ತಣ್ಣ ಶಿವಳ್ಳಿಯೂ ಕೂಡ ಸೇರಿದ್ದಾರೆ. ಮಾಜಿ ಶಾಸಕ ಎಂ.ಎಸ್. ಅಕ್ಕಿ, ಅರವಿಂದ ಕಟಗಿ, ಶಿವಾನಂದ ಬೆಣತೂರ, ಚಂದ್ರ ಶೇಖರ ಜುಟ್ಟಲ ಸೇರಿದಂತೆ ಉಳಿದ ಆಕಾಂಕ್ಷಿಗಳು ಕೂಡ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್‌ನ ಪ್ಲಾನ್ ಏನು?
ಇನ್ನು ಕಾಂಗ್ರೆಸ್ ಹೈಕಮಾಂಡ್ ಮಾತ್ರ ಯಾರಿಗೂ ಟಿಕೆಟ್ ಭರವಸೆ ನೀಡಿಲ್ಲ. ಹೈಕಮಾಂಡ್ ಲೆಕ್ಕಾಚಾರವೇ ಬೇರೆ ಆಗಿದ್ದು, ಎದುರಾಳಿ ಪಕ್ಷಗಳ ಅಭ್ಯರ್ಥಿಗಳ ಸುಳಿವು ಸಿಗಲೆಂದು ಬಕಪಕ್ಷಿಯಂತೆ ಕಾಯುತ್ತಿದೆ. ಬೇರೆ ಪಕ್ಷಗಳ ಅಭ್ಯರ್ಥಿಗಳ ಸುಳಿವು ಸಿಕ್ಕ ಕೂಡಲೇ ತನ್ನ ಅಭ್ಯರ್ಥಿಯ ಹೆಸರು ಪ್ರಕಟಿಸುವ ಯೋಚನೆಯಲ್ಲಿದೆ ಎನ್ನಲಾಗಿದೆ.

ಜೆಡಿಎಸ್‌ಗೆ ಹೇಗೆ ಲಾಭ ಆಗಲಿದೆ?
ಹಾಗೆಯೇ ಮತ್ತೊಂದೆಡೆ ಕ್ಷೇತ್ರದಲ್ಲಿ ಜೆಡಿಎಸ್ ನಲೆ ಗಟ್ಟಿಯಾಗಿಲ್ಲ. ಆದರೂ ಕೂಡ ಜನಾತಾ ದಳವನ್ನು ನಿರ್ಲಕ್ಷಿಸುವಂತಿಲ್ಲ. ಉಪಚುನಾವಣೆಯಲ್ಲಿ ಪಕ್ಷದಿಂದ ಕಣಕ್ಕಿಳಿದಿದ್ದ ಹಜರತ ಅಲಿ ಜೋಡಮನಿ ಮತ್ತು ಶಂಕರಗೌಡ ದೊಡ್ಡಮನಿ ಹೆಸರು ಟಿಕೆಟ್ ಸರದಿಯಲ್ಲಿದೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿಬರುತ್ತಿವೆ.
ಅಲ್ಲದೆ ಕಾಂಗ್ರೆಸ್, ಬಿಜೆಪಿಯ ಟಿಕೆಟ್ ವಂಚಿತರು ಜೆಡಿಎಸ್‌ನಿಂದ ಕಣಕ್ಕಿಳಿದರೂ ಯಾವುದೇ ಅಚ್ಚರಿಯಿಲ್ಲ. ಎರಡು ಪಕ್ಷಗಳ ಮುಖಂಡರು ಜೆಡಿಎಸ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿದ್ದು, ಇದು ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ನೀಡಲಿದೆ ಎಂದರೆ ತಪ್ಪಾಗಲಾರದು. ಎಎಪಿ ಸೇರಿದಂತೆ ಇತರ ಪಕ್ಷಗಳ ಸ್ಪರ್ಧಿಗಳು ಕಣಕ್ಕಿಳಿದರೂ, ಸಾಂಪ್ರದಾಯಿಕ ಎದುರಾಳಿಗಳ ಎದುರು ಅವರ ಪರಿಣಾಮ ಇಲ್ಲಿ ಅಷ್ಟೇನು ಇರುವುದಿಲ್ಲ ಎನ್ನುವುದು ಗೊತ್ತಿರುವ ಸಂಗತಿಯಾಗಿದೆ.
ಸೋತು ಸುಣ್ಣವಾಗಿದ್ದ ಬಿಜೆಪಿ
ಈ ಹಿಂದೆ ನಡೆದ ಮೂರು ಚುನಾವಣೆಗಳಲ್ಲಿ ಪೈಪೋಟಿ ಕೊಟ್ಟು ಸೋತು ಸುಣ್ಣವಾಗಿರುವ ಬಿಜೆಪಿ ಈ ಬಾರಿ ಕ್ಷೇತ್ರದಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು ಪಣತೊಟ್ಟು ನಿಂತಿದೆ. ಇನ್ನು ಬಿಜೆಪಿಯ ಚುನಾವಣಾ ಚಾಣಕ್ಯ ಅಂತಲೇ ಹೆಸರುವಾಸಿಯಾಗಿರುವ ಅಮಿತ್ ಶಾ ಕುಂದಗೋಳದಲ್ಲಿ ಇತ್ತೀಚೆಗಷ್ಟೇ ರೋಡ್ ಶೋ ನಡೆಸಿದ್ದು, ಇದು ಪಕ್ಷಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ ಎನ್ನುವ ಮಾತುಗಳಿ ಕೇಳಿಬರುತ್ತಿವೆ.
ಕ್ಷೇತ್ರದಲ್ಲಿ ಬಣ ರಾಜಕೀಯ "ರಗಳೆ"
ಕ್ಷೇತ್ರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಣ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಬಣದ ರಾಜಕೀಯ ಇದದೀಗ ಗರಿಗೇದರಿದೆ. ಟಿಕೆಟ್ ರೇಸ್‌ನಲ್ಲಿ ಯಡಿಯೂರಪ್ಪ ಸಂಬಂಧಿ ಎಸ್.ಐ.ಚಿಕ್ಕನಗೌಡ್ರು, ಪ್ಲಾಲ್ಹಾದ್ ಜೋಶಿ ಬಣದ ಎಂ.ಆರ್.ಪಾಟೀಲ ಹಾಗೂ ಆರ್‌ಎಸ್‌ಎಸ್ ಹಿನ್ನೆಲೆಯುಳ್ಳ ಮಲ್ಲಿಕಾರ್ಜುನ್ ಬಾಳಿಕಾಯಿ ಹೆಸರುಗಳು ಕೂಡ ಕೇಳಿಬಂದಿವೆ. 3 ಬಾರಿಯೂ ಕ್ಷೇತ್ರ ಪ್ರತಿನಿಧಿಸಿದ್ದ ಚಿಕ್ಕನಗೌಡ್ರ ಸೋಲುಂಡಿದ್ದಾರೆ.
ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ
ಅಷ್ಟಕ್ಕೂ ಸುಮ್ಮನಾಗದ ಚಿಕ್ಕನಗೌಡ್ರ ಸೋಲಿನ ಅನುಕಂಪದ ಜೊತೆಗೆ ಹೈಕಮಾಂಡ್ ಮನವೊಲಿಸಿ ಟಿಕೆಟ್ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. 2013ರಲ್ಲಿ ಪಕ್ಷದಿಂದ ಎಂ.ಆರ್. ಪಾಟೀಲ ಕಣಕ್ಕಿಳಿದಿದ್ದಾಗ ಚಿಕ್ಕನಗೌಡ್ರ ಅವರು ಯಡಿಯೂರಪ್ಪನವರ ನೇತೃತ್ವದ ಕೆಜೆಪಿಯಿಂದ ಸ್ಪರ್ಧೆಗೆ ಇಳಿದಿದ್ದರು.

ಬಳಿಕ ಬಿಜೆಪಿಯಲ್ಲಿ ಕೆಜೆಪಿ ಪಕ್ಷ ವಿಲೀನ ಆಯಿತು. ಮುಂದಿನ ಚುನಾವಣೆಯಲ್ಲಿ ಚಿಕ್ಕನಗೌಡ್ರ ಬಿಜೆಪಿ ಟಿಕೆಟ್ ಗಿಟ್ಟುಸಿಕೊಳ್ಳುವಲ್ಲಿ ಯಶಸ್ವಿ ಆಗಿರುವುದು ಎಂ.ಆರ್. ಪಾಟೀಲ ಕೋಪಕ್ಕೆ ಕಾರಣವಾಗಿದೆ. ಇದನ್ನ ಗಮನಿಸಿದರೆ ಇಲ್ಲಿ ಪಕ್ಷದಲ್ಲಿ ದೊಡ್ಡ ಬದಲಾವಣೆ ಆದಂತೆ ಕಾಣುತ್ತಿದೆ. ಮತ್ತೊಂದೆಡೆ ನೋಡಿದರೆ ಇದು ಜೆಡಿಎಸ್‌ಗೂ ಕೂಡ ಪ್ಲಸ್ ಪಾಯಿಂಟ್ ಅನಿಸುತ್ತದೆ.
ಇದೀಗ ಚಿಕ್ಕನಗೌಡ್ರ ಮತ್ತು ಎಂ.ಆರ್.ಪಾಟೀಲ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಇದು ಪಕ್ಷಕ್ಕೂ ತಲೆನೋವಾಗಿ ಪರಿಣಮಿಸಿದೆ. ಇವರಿಬ್ಬರಲ್ಲಿ ಯಾರಿಗೆ ಟಿಕೆಟ್ ಸಿಕ್ಕರೂ ಮತ್ತೊಬ್ಬರು ಬಂಡಾಯ ಏಳುವ ಸಾಧ್ಯತೆ ಇದೆ. ಅಥವಾ ಪಕ್ಷದ ವಿರುದ್ಧ ಸಮರ ಸಾರುವ ಸಾಧ್ಯತೆಯೂ ಇದೆ.
ಬಿಜೆಪಿ ನಾಯಕರ ಪ್ಲಾನ್ ಏನು?
ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕರು ದೊಡ್ಡ ಪ್ಲಾನ್ ಮಾಡಲು ಹೊರಟಿದ್ದಾರೆ. ಒಂದು ವೇಳೆ ಕೊನೆ ಕ್ಷಣಗಳಲ್ಲಿ ಮಲ್ಲಿಕಾರ್ಜುನ ಬಾಳಿಕಾಯಿ ಇಲ್ಲದಿದ್ದರೆ ಅಚ್ಚರಿಯ ಮತ್ತೊಂದು ಹೆಸರು ಘೋಷಣೆಯಾದರೂ ಯಾವುದೇ ಅಚ್ಚರಿ ಇಲ್ಲ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡುವ ಮೂಲಕ ಬಂಡಾಯ ಏಳುವ ನಾಯಕರನ್ನು ಹೇಗೆ ಶಾಂತಗೊಳಿಸುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
ಕ್ಷೇತ್ರದಲ್ಲಿನ ಮತದಾರರ ವಿವರ
ಕ್ಷೇತ್ರದಲ್ಲಿ ಈ ಹಿಂದೆ ಇದ್ದ 1,94,432 ಮತದಾರರ ಸಂಖ್ಯೆಯಲ್ಲಿ ಪಟ್ಟಿ ಪರಿಷ್ಕರಣೆ ನಂತರ 15,536 ಜನರು ಕಡಿಮೆಯಾಗಿದ್ದಾರೆ. ಇದೀಗ ಈ ವಿಚಾರ ಚುನಾವಣೆ ಆಕಾಂಕ್ಷಿಗಳ ಕಣ್ಣು ಕೆಂಪಾಗಿಸುವಂತೆ ಮಾಡಿದೆ. ಮತ್ತೊಂದೆಡೆ ಸ್ಥಳೀಯ ಶಾಸಕಿ ಕುಸುಮಾವತಿ ಶಿವಳ್ಳಿ ಸೇರಿದಂತೆ ಕಾಂಗ್ರೆಸ್ ಚುನಾವಣಾ ಆಕಾಂಕ್ಷಿಗಳು ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ವತಃ ತಹಶೀಲ್ದಾರರಿಗೆ ಮನವಿಯನ್ನು ಸಹ ಸಲ್ಲಿಸಿದ್ದರು.
ಹೊಸದಾಗಿ ಮತದಾರರ ಪಟ್ಟಿ ಪರಿಷ್ಕರಣೆ ನವೆಂಬರ್ 18, 2022ರ ಪ್ರಕಾರ ಕುಂದಗೋಳ ಮತಕ್ಷೇತ್ರದಲ್ಲಿ 1,78,890 ಸಾವಿರ ಮತದಾರರಿದ್ದು, ಅದರಲ್ಲಿ ಪುರುಷರು 92,298, ಮಹಿಳೆಯರು 86,588, 4 ಜನ ತೃತೀಯ ಲಿಂಗಿಗಳಿದ್ದಾರೆ. ಪರಿಷ್ಕರಣೆ ವೇಳೆ 16 ಸಾವಿರ ಜನ ಕಡಿಮೆ ಆಗಿರುವುದು ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಮಂತ್ತೊದೆಡೆ ಮತಕ್ಷೇತ್ರದಲ್ಲಿ ಬಿ.ಎಲ್.ಓಗಳು ನಡೆಸಿದ ಪರಿಷ್ಕರಣೆ ಸಕ್ರಮವಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications