ಕಳಸಾ-ಬಂಡೂರಿ ಹೋರಾಟದ ಕಿಚ್ಚು, ಇಂದು ಗದಗ ಬಂದ್

ಧಾರವಾಡ, ಆ.27 : ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ಇಂದು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ವಿವಿಧ ಸಂಘಟನೆಗಳು ಗುರುವಾರ ಗದಗ ಜಿಲ್ಲಾ ಬಂದ್‌ಗೆ ಕರೆ ನೀಡಿವೆ. ಮುಂದಿನ ಹೋರಾಟದ ರೂಪುರೇಷೆ ರೂಪಿಸಲು ನರಗುಂದದಲ್ಲಿ ದುಂಡು ಮೇಜಿನ ಸಭೆ ಕರೆಯಲಾಗಿದೆ.

ಬುಧವಾರ ವಿವಿಧ ಸಂಘಟನೆಗಳು ಕರೆ ನೀಡಿದ್ದ ಧಾರವಾಡ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿಭಟನೆ ವೇಳೆಯಲ್ಲಿ ಹುಬ್ಬಳ್ಳಿ, ನವಲಗುಂದ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಹಿಂಸಾಚಾರ ನಡೆದಿವೆ. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ನಿವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದರು. [ಹುಬ್ಬಳ್ಳಿಯಲ್ಲಿ ಗೋವಾ ಬಸ್ಸಿಗೆ ಬೆಂಕಿ]

mahadayi

ನವಲಗುಂದದಲ್ಲಿ ಬುಧವಾರ ಲೋಕೋಪಯೋಗಿ ಇಲಾಖೆ ಕಚೇರಿಗೆ ಕಲ್ಲು ತೂರಲಾಗಿದೆ. ನರಗುಂದ, ರಾಮದುರ್ಗ, ಬಾದಾಮಿ ಸೇರಿದಂತೆ ಉತ್ತರ ಕರ್ನಾಟಕದ ಇತರೆಡೆಯೂ ಪ್ರತಿಭಟನೆ, ರಸ್ತೆ ತಡೆಗಳು ನಡೆದಿವೆ. ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಗೋವಾ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಕಲ್ಲು ತೂರಲಾಗಿದೆ. [ಸರ್ವಪಕ್ಷ ನಿಯೋಗಕ್ಕೆ ನಿರಾಸೆ ಉಂಟು ಮಾಡಿದ ಪ್ರಧಾನಿ]

ಇಂದು ಗದಗ ಬಂದ್ : ವಿವಿಧ ಸಂಘಟನೆಗಳು ಗುರುವಾರ ಗದಗ ಜಿಲ್ಲಾ ಬಂದ್‌ಗೆ ಕರೆ ನೀಡಿವೆ. ಕಳಸಾ-ಬಂಡೂರಿ ಹೋರಾಟಕ್ಕೆ ವಕೀಲರು ಬೆಂಬಲ ನೀಡಿದ್ದಾರೆ. ಗದಗದಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. [ಕೇಳುವವರೇ ಗತಿಯಿಲ್ಲದ ಕಳಸ ಭಂಡೂರಿ!]

hubballi

ಇಂದು ದುಂಡು ಮೇಜಿನ ಸಭೆ : ಕಳಸಾ-ಬಂಡೂರಿ ಯೋಜನೆ ಕುರಿತ ಮುಂದಿನ ಹೋರಾಟದ ರೂಪುರೇಷೆ ರೂಪಿಸಲು ಗುರುವಾರ ನರಗುಂದದಲ್ಲಿ ಮಠಾಧೀಶರು ಹಾಗೂ ರೈತ ಮುಖಂಡರ 2ನೇ ದುಂಡು ಮೇಜಿನ ಸಭೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+