ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಹುಬ್ಬಳ್ಳಿಯಲ್ಲಿ ಅಭಿವೃದ್ಧಿ ಸಂವಾದ

By ಹುಬ್ಬಳ್ಳಿ ಪ್ರತನಿಧಿ
|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ 7 : 'ಆಸಕ್ತಿಯಿಂದ ಕೆಲಸ ಮಾಡಲು ಉತ್ಸುಕರಾಗಿರುವ ಯುವ ಉದಯೋನ್ಮುಖ ಉದ್ಯಮಿಗಳಿಗೆ ದೇಶಪಾಂಡೆ ಫೌಂಡೇಶನ್ ಆರ್ಥಿಕವಾಗಿ ಅನುಕೂಲ ಕಲ್ಪಿಸಲು ಸಿದ್ಧವಿದೆ' ಎಂದು ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಗುರುರಾಜ ದೇಶಪಾಂಡೆ ಹೇಳಿದ್ದಾರೆ.

ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಆವರಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಸಂವಾದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, 'ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರೆ ಅವುಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ' ಎಂದು ಭರವಸೆ ನೀಡಿದರು. ['ಬಡತನ, ಹಸಿವಿಗೆ ಪರಿಹಾರ ಯಾವ ಪಠ್ಯದಲ್ಲೂ ಇಲ್ಲ']

'ಹುಬ್ಬಳ್ಳಿಯಲ್ಲಿರುವ ಸ್ಯಾಂಡ್ ಬಾಕ್ಸ್ ಉತ್ತರ ಕರ್ನಾಟಕ ಭಾಗದ ಐದು ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಯುವೋದ್ಯಮಿಗಳಿಗೆ ಹೊಸ ಮಾರ್ಗಗಳನ್ನು ತಿಳಿಸುವುದು ಮತ್ತು ಸಂಪರ್ಕ ಸಂವಹನವನ್ನು ಹೆಚ್ಚಿಸಿಕೊಳ್ಳುವಲ್ಲಿ ನಮ್ಮ ಫೌಂಡೇಶನ್ ಸಹಕರಿಸುತ್ತಿದೆ' ಎಂದರು. [ಟೈ ಸಮಾವೇಶದಲ್ಲಿ, ದಿಗ್ಗಜ ಮಹಿಳೆಯರ ಸಾಧನೆಯಾನ]

ಈ ಅಭಿವೃದ್ಧಿ ಸಂವಾದಲ್ಲಿ ಅಮೆರಿಕ, ಕೆನಡಾ, ಕಾಂಬೋಡಿಯಾ ಹಾಗೂ ಜರ್ಮನಿ, ದೇಶದ ವಿವಿಧ ರಾಜ್ಯಗಳ ಸುಮಾರು 600 ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಸಂಘ-ಸಂಸ್ಥೆಗಳ 40 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಸಂವಾದದ ಚಿತ್ರಗಳನ್ನು ನೋಡಿ.....

ವಿಶಿಷ್ಟ ರೀತಿಯ ಉದ್ಘಾಟನೆ

ವಿಶಿಷ್ಟ ರೀತಿಯ ಉದ್ಘಾಟನೆ

ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಆವರಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಸಂವಾದ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಉದ್ಘಾಟಿಸಲಾಯಿತು. ಅಭಿವೃದ್ಧಿ ಸಂವಾದದ ಚಿಹ್ನೆಯನ್ನೇ ಉದ್ಘಾಟನೆ ರೂಪಿಸಲಾಗಿತ್ತು. ಕಲಾವಿದರ ವಿಶಿಷ್ಟ ರೀತಿಯ ನೃತ್ಯ ಮನಸೆಳೆಯಿತು.

600 ಪ್ರತಿನಿಧಿಗಳು

600 ಪ್ರತಿನಿಧಿಗಳು

ಈ ಅಭಿವೃದ್ಧಿ ಸಂವಾದಲ್ಲಿ ಅಮೆರಿಕ, ಕೆನಡಾ, ಕಾಂಬೋಡಿಯಾ ಹಾಗೂ ಜರ್ಮನಿ ಮತ್ತು ದೇಶದ ವಿವಿಧ ರಾಜ್ಯಗಳ ಸುಮಾರು 600 ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಸಂಘ-ಸಂಸ್ಥೆಗಳ 40 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ.

'ಸಮಯದ ಸದುಪಯೋಗದಿಂದ ಯಶಸ್ಸು'

'ಸಮಯದ ಸದುಪಯೋಗದಿಂದ ಯಶಸ್ಸು'

'ಯಶಸ್ವಿ ಉದ್ಯಮಿಯಾಗಲು ಸಮಯ ಬೇಕು. ಹೀಗಾಗಿ ಸಮಯದ ಸದುಪಯೋಗಪಡಿಸಿಕೊಂಡು ಆದಾಯದ ಮೂಲವನ್ನು ಹೆಚ್ಚು ಬಳಸದೆ ಇರುವುದು ಸೂಕ್ತ ಎಂದು ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣಮೂರ್ತಿ ಹೇಳಿದರು. 'ಈ ದೇಶದಲ್ಲಿ ಉದ್ಯಮ ಬೆಳೆಸುವುದು ತುಂಬಾ ಸರಳ. ನಮ್ಮ ಜನ ಹೆಚ್ಚಿನ ಖರ್ಚು ಮಾಡಲು ಸಾಕಷ್ಟು ಆದಾಯ ಹೊಂದಿಲ್ಲ. ಇದರಿಂದ ಅವರು ಹೊಸದೇನನ್ನಾದರೂ ಖರೀದಿಸಲು ಹತ್ತತ್ತು ಬಾರಿ ವಿಚಾರಿಸುತ್ತಾರೆ. ಇಂಥಹ ಗ್ರಾಹಕ ಮನೋಭಾವವನ್ನು ಉದ್ಯಮಿಗಳು ಅರಿತುಕೊಳ್ಳಬೇಕು' ಎಂದರು.

ರಾಜ್ಯದಲ್ಲಿ ಧ್ರುವ ಯೋಜನೆ

ರಾಜ್ಯದಲ್ಲಿ ಧ್ರುವ ಯೋಜನೆ

'ಕರ್ನಾಟಕದಲ್ಲಿ ಧ್ರುವ ಯೋಜನೆಯನ್ನು ವಿಸ್ತರಿಸಲು ಯೋಚಿಸಿರುವುದಾಗಿ' ಬಾಹ್ಯಾಕಾಶ ಯಾನಿ ಡಾ.ಅನೌಶೇಷ ಅನ್ಸಾರಿ ಹೇಳಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಉದ್ಯಮಶೀಲತೆಗೆ ಸೂಕ್ತ ಬೆಂಬಲ ಮತ್ತು ಅವಕಾಶ ಸಿಕ್ಕರೆ ರಾಜಸ್ಥಾನದಲ್ಲಿರುವಂತೆ ಈ ರಾಜ್ಯದಲ್ಲೂ ಧ್ರುವ ಯೋಜನೆ ವಿಸ್ತರಣೆ ಮಾಡಬಹುದಾಗಿದೆ' ಎಂದು ಹೇಳಿದರು.

ಮಳಿಗೆಗಳಿಗೆ ಅವಕಾಶ

ಮಳಿಗೆಗಳಿಗೆ ಅವಕಾಶ

ಅಭಿವೃದ್ಧಿ ಸಂವಾದದಲ್ಲಿ ಸಂಘ-ಸಂಸ್ಥೆಗಳ 40 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ.

English summary
In pictures : Deshpande Foundation organized development dialogue 2016 at Hubblli, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X