• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಏನಿದು ವಿವಾದ?

By Mahesh
|

ಹುಬ್ಬಳ್ಳಿ, ಅ.5: ವಿರಕ್ತ ಪೀಠಗಳ ಪರಂಪರೆಯ ಮೂರು ಸಾವಿರ ಮಠದಲ್ಲಿ ಮತ್ತೆ ವಿವಾದ ಭುಗಿಲೆದ್ದಿದೆ. ಹಾಲಿ ಮಠಾಧೀಶ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಅವರು ಪೀಠ ತ್ಯಜಿಸಲು ನಿರ್ಧರಿಸಿದ್ದಾರೆ. ಸ್ವಾಮೀಜಿಗಳ ಇಂಗಿತದಂತೆ ಉತ್ತರಾಧಿಕಾರಿ ನೇಮಕವುದೋ? ಇಲ್ಲವೋ? ಹೊಸ ಉತ್ತರಾಧಿಕಾರಿ ಯಾರಾಗಲಿದ್ದಾರೆ? ಎಂಬೆಲ್ಲ ಪ್ರಶ್ನೆಗಳತ್ತ ಒಂದು ನೋಟ ಇಲ್ಲಿದೆ.

ಕಳೆದ ಕೆಲವು ದಶಕಗಳಿಂದ ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಭಕ್ತಾದಿಗಳ ನಡುವೆ ಮನಸ್ತಾಪ ಬೆಳೆದುಕೊಂಡು ಬಂದಿತ್ತು. ನೂತನ ಪೀಠಾಧೀಶರಾಗಿ ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ರಾಜಯೋಗೀಂದ್ರ ಸ್ವಾಮೀಜಿ ಆಯ್ಕೆ ಮಾಡಿರುವುದು ಮಠದ ಭಕ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಉತ್ತರ ಕರ್ನಾಟಕದ ವಿರಕ್ತ ಪೀಠಗಳ ಪರಂಪರೆ ಉಳಿಸಲು ರಾಜಯೋಗೀಂದ್ರ ಸ್ವಾಮೀಜಿ ಅವರು ಮೂರು ಸಾವಿರ ಮಠದಲ್ಲಿ ಉಳಿಯುವುದು ಅವಶ್ಯವಾಗಿದೆ. ಹೀಗಾಗಿ ತಮ್ಮ ನಿರ್ಧಾರ ಪರಿಶೀಲಿಸಬೇಕೆಂಬ ಉನ್ನತ ಮಟ್ಟದ ಸಮಿತಿ ಮನವಿ ಮಾಡಿಕೊಂಡಿತ್ತು. ಅದರೆ, ಮನವಿ ತಿರಸ್ಕರಿಸಿರುವ ಸ್ವಾಮೀಜಿಗಳು ಈ ತಿಂಗಳ ಅಂತ್ಯಕ್ಕೆ ನೂತನ ಪೀಠಾಧಿಪತಿಗಳನ್ನು ಸ್ವಾಗತಿಸಲು ಸಿದ್ಧರಾಗುವಂತೆ ಸಮಿತಿಗೆ ಸೂಚಿಸಿದ್ದಾರೆ.

ವಿವಾದ ಅಂತ್ಯ: ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಇದ್ದ ಗೊಂದಲ ಈಗ ನಿವಾರಣೆಯಾಗಿದ್ದು, ದಿಂಗಾಲೇಶ್ವರ ಮಠದ ಶ್ರೀಗಳು ಅಕ್ಟೋಬರ್ ಅಂತ್ಯಕ್ಕೆ ಮೂರು ಸಾವಿರ ಮಠದ ಪೀಠ ಏರಲಿದ್ದಾರೆ ಎಂದು ಉನ್ನತ ಮಟ್ಟದ ಸಮಿತಿ ಸುಳಿವು ನೀಡಿದೆ. ಈ ಬಗ್ಗೆ ಚರ್ಚೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬರಲು ಭಾನುವಾರ ಸಂಜೆ ಸಭೆ ಕರೆಯಲಾಗಿತ್ತು.

Mooru Savira Mutt Seer's selection of successor dispute

ಅದರೆ, ಈ ಸುದ್ದಿ ಬರೆಯುವ ಹೊತ್ತಿಗೆ ಸ್ವಾಮೀಜಿ ಅವರು ಸಭೆಗೆ ಗೈರು ಹಾಜರಾಗಿದ್ದು ಸಭೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿರುವ ಮಾಹಿತಿ ಸಿಕ್ಕಿದೆ. ಹಾಲಿ ಮೂರು ಸಾವಿರಮಠದ ಪೀಠಾಧಿಪತಿಗಳಾಗಿರುವ ಶ್ರೀಗಳೇ ಹಾನಗಲ್ಲ ಶ್ರೀ ಕುಮಾರೇಶ್ವರ ಮಠದ ಅಧ್ಯಕ್ಷರೂ ಆಗಿದ್ದು, ಎರಡೂ ಮಠಗಳನ್ನು ನಿಭಾಯಿಸುವ ಶ್ರಮ ಹೆಚ್ಚುವುದು ಹೀಗಾಗಿ ಮಠದ ಅಭಿವೃದ್ಧಿ ದೃಷ್ಟಿಯಿಂದ ತಾವು ಮೂರು ಸಾವಿರ ಮಠದ ಪೀಠವನ್ನು ತ್ಯಜಿಸುತ್ತಿರುವುದಾಗಿ ಶ್ರೀ ಗುರು ಸಿದ್ಧರಾಜ ಯೋಗೀಂದ್ರರು ತಿಳಿಸಿದ್ದಾರೆ.

ಸಮಿತಿಯಲ್ಲಿ ಯಾರು ಯಾರಿದ್ದಾರೆ?: ಸಿಎಂ ಉದಾಸಿ, ಜಗದೀಶ್ ಶೆಟ್ಟರ್, ವೀರಣ್ಣ ಮತ್ತಿಕಟ್ಟಿ, ಬಸವರಾಜ ಹೊರಟ್ಟಿ, ಚಂದ್ರಕಾಂತ್ ಬೆಲ್ಲದ್, ವೀರಭದ್ರಪ್ಪ ಹಾಲಹರವಿ ಮುಂತಾದವರು ಸೇರಿದಂತೆ ಗದಗದ ತೋಂಟದ ಮಠದ ಸಿದ್ದಲಿಂಗಾ ಸ್ವಾಮಿ, ಶಿರಹಟ್ಟಿಯ ಫಕೀರ ಸಿದ್ದರಾಮೇಶ್ವರ ಸ್ವಾಮಿ ಅವರು ಉತ್ತರಾಧಿಕಾರಿ ನೇಮಕ ವಿವಾದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಸಿದ್ದಾರೆ.

1991ರಲ್ಲಿ ಈ ಹಿಂದೆ ಗುರುಗಳಾದ ಗಂಗಾಧರ ರಾಜಯೋಗೀಂದ್ರ ಸ್ವಾಮಿ ಅವರು ಮೊದಲಿಗೆ ರುದ್ರಮುನಿ ಸ್ವಾಮೀಜಿ ಅವರ ಕೈಗೆ ಮೂರು ಸಾವಿರ ಮಠದ ಅಧಿಕಾರ ನೀಡಲು ನಿರ್ಧರಿಸಿದ್ದರು. ಅದರೆ, ನಂತರ ತಮ್ಮ ನಿರ್ಧಾರ ಬದಲಿಸಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದರು.

ಅದರೆ, ಇದನ್ನು ರುದ್ರಮುನಿ ಸ್ವಾಮೀಜಿ ಅವರು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಕೋರ್ಟಿನಿಂದ ಹೊರಗೆ ಈ ವ್ಯಾಜ್ಯಕ್ಕೆ ಪರಿಹಾರ ಕಂಡುಕೊಳ್ಳುವಂತೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದರು. ನಂತರ ಗುರುಸಿದ್ದ ರಾಜಯೋಗೀಂದ್ರ ಸ್ವಾಮಿಗಳು ಮೂರು ಸಾವಿರ ಮಠದ ಉತ್ತರಾಧಿಕಾರಿಯಾದರು. ರುದ್ರಮುನಿ ಸ್ವಾಮಿಗಳು ತಿಪಟೂರಿನ ಷಡಕ್ಷರ ಮಠದ ಅಧಿಪತಿಯಾದರು. ಈಗ ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ ಮತ್ತೊಮ್ಮೆ ವಿವಾದ ಕೇಂದ್ರ ಬಿಂದುವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubli: A dispute erupted over the choice of a successor to the Mooru Savira Mutt. Sri Gurusiddha Rajayogindra Swami had chosen Sri Dingaleshwar Swami, head of Bale Hosur Mutt, to head the Mooru Savira Mutt after him.But, It is opposed by several devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more