ವಿಕಾಸ ಪರ್ವಕ್ಕೆ ಹೊರಟ ಮೋದಿಗೆ ಪ್ರತಿಭಟನೆ ಬಿಸಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಮೇ. 29: ವಿಕಾಸ ಪರ್ವ ಸಮಾವೇಶಕ್ಕಾಗಿ ನಗರದ ವಿಮಾನ ನಿಲ್ದಾಣಕ್ಕೆ ಭಾನುವಾರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳಸಾ-ಬಂಡೂರಿ ಹೋರಾಟಗಾರರು ಪ್ರತಿಭಟನೆಯ ಬಿಸಿ ಮುಟ್ಟಿದ್ದಾರೆ..

ಸ್ಥಳೀಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ವಿರುದ್ಧ ಕಳಸಾ-ಬಂಡೂರಿ ಹೋರಾಟಗಾರರು 'ಗೋ ಬ್ಯಾಕ್ ಮೋದಿ' ಎಂದು ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.

Hubballi :PM Modi faces Protest from Kalasa Banduri agitators and Dalits

ವಿಮಾನ ನಿಲ್ದಾಣದ ಮುಂದೆ ಧಾರವಾಡದ ಮನಸೂರ ಮಠದ ಬಸವರಾಜ ದೇವರ ನೇತೃತ್ವದಲ್ಲಿ ಪ್ರಧಾನಿಗೆ ಕಳಸಾ-ಬಂಡೂರಿ ಹೋರಾಟಗಾರರು ಮನವಿ ಕೊಡಲು ಪೊಲೀಸರು ನಿರಾಕರಣೆ ಮಾಡಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಮೋದಿ ವಿರುದ್ಧ ಘೋಷಣೆ ಕೂಗಿದರು.

'300 ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಆದ್ರೆ ಕೇಂದ್ರ ಸರ್ಕಾರ ಇತ್ತ ಕಣ್ಣೆತ್ತಿ ನೋಡುತ್ತಿಲ್ಲ. ಕಳಸಾ ಬಂಡೂರಿ ಯೋಜನೆ ಅನುಷ್ಠಾನ ಮಾಡದ ಮೋದಿ ರಾಜ್ಯದಲ್ಲಿ ಕಾಲಿಡಲು ಅರ್ಹರಲ್ಲ. ಕೂಡಲೇ ಅವರು ಮರಳಿ ಹೋಗಬೇಕೆಂದು ಘೋಷಣೆ ಕೂಗಿ ದಾವಣಗೆರೆ ಸಮಾವೇಶ ಯಾವ ಪುರಷಾರ್ಥಕ್ಕೆ' ಎಂದು ಕಿಡಿಕಾರಿದರು.

ವಿಕಾಸ ಪರ್ವಕ್ಕೆ ಹೊರಟ ಮೋದಿಗೆ ಪ್ರತಿಭಟನೆ ಬಿಸಿ

ವಿಕಾಸ ಪರ್ವಕ್ಕೆ ಹೊರಟ ಮೋದಿಗೆ ಪ್ರತಿಭಟನೆ ಬಿಸಿ

-
-
-
-
-

ಅಲ್ಲದೇ ದಾವಣಗೆರೆ ಸಮಾವೇಶದಲ್ಲಿ ಮೋದಿ 3 ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಚರ್ಚಿಸುವುದಾಗಿ ಘೋಷಿಸಬೇಕು ಎಂದು ಕಳಸಾ ಬಂಡೂರಿ ಹೋರಾಟಗಾರರು ಆಗ್ರಹಿಸಿದರು. ಈ ವೇಳೆ ಹೋರಾಟಗಾರರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದರು.

ರೋಹಿತ್ ವೇಮುಲಗೆ ನ್ಯಾಯ ಕೊಡಿ: ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಪ್ರಕರಣಕ್ಕೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿ ಎನ್​ಎಸ್​ಯುುಐ ಕಾರ್ಯಕರ್ತರು ಕೂಡಾ ಅಂಬೇಡ್ಕರ್ ವೃತ್ತದ ಬಳಿ ಪ್ರಬಲ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ. ಕಾರ್ಯಕ್ರಮಕ್ಕೆ ಪ್ರತಿಭಟನೆ ಭೀತಿ ಎದುರಾದ ಬೆನ್ನಲ್ಲೇ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi : PM Narendra Modi today(May 29) faced protest from Kalasa Banduri agitators and Dalits leaders. Modi was in the town and later went to attend Vikas Parv function at Davanagere to celebrate two years of success administration from NDA.
Please Wait while comments are loading...