ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ: ಸಾಧಕಿ ಬಿಜಲ್ ದಮಾನಿ ಅವರೊಂದಿಗೆ ಸಂವಾದ

By ಶಂಭು
|
Google Oneindia Kannada News

ಹುಬ್ಬಳ್ಳಿ,ಸೆಪ್ಟೆಂಬರ್. 12 : ವಿಶ್ವಶ್ರೇಷ್ಠ ಯುನೆಸ್ಕೋ ಪ್ರಶಸ್ತಿ, ಇತ್ತೀಚೆಗೆ ರಾಷ್ಟ್ರಪತಿಯವರಿಂದ ಅತ್ಯುತ್ತಮ ಶಿಕ್ಷಕಿ ಪುರಸ್ಕಾರ ಪಡೆದ ಕುಮಾರಿ ಬಿಜಲ್ ದಮಾನಿ ಸೆಪ್ಟೆಂಬರ್ 12 ರಂದು ಹುಬ್ಬಳ್ಳಿಯಲ್ಲಿ ವಾಣಿಜ್ಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಗುಜರಾತ್ ನ ರಾಜಕೋಟ್ ನ ಬಿಜಲ್ ಸ್ವತಃ ಉದ್ಯೋಗ ಕ್ಷೇತ್ರದಲ್ಲಿ ವಿನೂತನ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಇವರು ಪ್ರಯೋಗ ಮಾಡಿ ಯಶಸ್ವಿಯಾದ ಗ್ಯಾಲಕ್ಸಿ ಬಝಾರ್ ನಂತೆ ಹುಬ್ಬಳ್ಳಿಯ ಐದು ಕಾಲೇಜಿನವರು ವಿದ್ಯಾಸಂತೆ ಎಂಬ ಪ್ರಾಯೋಗಿಕವಾಗಿ ಮಾರುಕಟ್ಟೆಯನ್ನು ನಡೆಸುತ್ತಿದ್ದಾರೆ.

hubli

ಸ್ವತಃ ಕವಿಯಾಗಿ ಹಿಂದಿ, ಗುಜರಾತಿ, ಇಂಗ್ಲೀಷ್‍ನಲ್ಲಿ ಕವಿತೆಗಳನ್ನು ರಚಿಸಿದ ಬಿಜಲ್, ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ, ಗಿಟಾರ್ ನುಡಿಸುವಿಕೆ, ತಬಲಾ, ಮತ್ತು ಸಂಗೀತ ಕ್ಷೇತ್ರದಲ್ಲಿ ತಮ್ಮ ಅಚ್ಚಳಿಯದ ಸಾಧನೆ ಮಾಡಿದ್ದಾರೆ. ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ತಮ್ಮ ಹೊಸ ಯೋಚನೆಯ ಲಹರಿಗಳನ್ನು ತಿಳಿಸಿ ಅವುಗಳನ್ನು ಯಶಸ್ವಿಯಾಗುವಂತೆ ಮಾಡಿ ಹೆಸರುವಾಸಿಯಾಗಿದ್ದಾರೆ.

ಕರಾಟೆ ಪಟುವು ಆಗಿರುವ ಬಿಜಲ್ ಬ್ಯ್ಲಾಕ್ ಬೆಲ್ಟ್ ಪದವಿ ಪಡೆದಿದ್ದಾರೆ. ಜೊತೆ ಜೊತೆಗೆ ಕಂಪ್ಯೂಟರ್ ಅಪ್ಲಿಕೇಷನ್ ಪದವಿ ಪಡೆದು ಟೆಕ್ಕಿಯೂ ಆಗಿದ್ದಾರೆ. ಇದೂ ಅಲ್ಲದೇ ಸಾಹಸಮಯ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ಬಿಜಲ್ ಟ್ರೆಕ್ಕಿಂಗ್ ಮತ್ತು ಸಾಹಸಮಯ ಪ್ರವಾಸಗಳನ್ನು ತಮ್ಮ ಬಿಡುವಿನ ವೇಳೆಯಲ್ಲಿ ಮಾಡುತ್ತಿದ್ದಾರೆ. 44 ವಯಸ್ಸಿನ ಬಿಜಲ್ ಭಾರತದ ಮಹಿಳೆಯರ ಪ್ರತಿನಿಧಿಯಂತೆ ತಮ್ಮ ಸಾಧನೆ ಮಾಡಿ ವಿಶ್ವಾದ್ಯಂತ ಭಾರತವನ್ನು ಮಿನುಗುವಂತೆ ಮಾಡಿದ್ದಾರೆ.

ಕು.ಬಿಜಲ್ ದಮಾನಿಯವರಿಗೆ ಸ್ವಾಗತ ನೀಡುವುದರೊಂದಿಗೆ ಅವರ ಸಾಧನೆ ಅನುಸರಣೆ ಮಾಡುವುದಕ್ಕೆ ಮುಂದಾಗೋಣ. ಕನ್ನಡ ನಾಡಿಗೆ ಮೊದಲ ಸಾರಿ ಆಗಮಿಸುತ್ತಿರುವ ಅವರನ್ನು ಸಂಭ್ರದಿಂದ ಬರಮಾಡಿಕೊಳ್ಳಲಾಗುತ್ತಿದೆ.

English summary
Hubballi: Multi talented teacher, industrialist Bijal Damani interacting with Hubballi commerce students, on August 12, 2015. Rajkot's Bijal Damani taking about today's business steps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X