ಮರಾಠಾ ಸಮಾಜದ ಶಾಸಕರಿಗೆ ಮಂತ್ರಿ ಪದವಿ ನೀಡಿ

By: ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಜೂನ್. 15: ಕ್ಷತ್ರೀಯ ಮರಾಠಾ ಸಮಾಜದ ಶಾಸಕರಿಗೆ ಪ್ರಸಕ್ತ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಪದವಿ ನೀಡಬೇಕೆಂದು ಮರಾಠಾ ಸಮಾಜದ ರಾಜ್ಯ ಉಪಾಧ್ಯಕ್ಷ ವಿಜಯಕುಮಾರ ಘಾಟಗೆ ಒತ್ತಾಯ ಮಾಡಿದ್ದಾರೆ.

ಅವರು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಿಂದೆ ನಮ್ಮ ಸಮಾಜದ ಸಂತೋಷ ಲಾಡ್ ಸಚಿವರಾಗಿದ್ದರು. ಅವರ ನಂತರ ಇದುವರೆಗೂ ಯಾರನ್ನೂ ಸಚಿವ ಪದವಿಗೆ ನೇಮಿಸಿಲ್ಲ. ನಮ್ಮ ಸಮಾಜದ ನಾಲ್ವರು ಶಾಸಕರಿದ್ದಾರೆ. ನಾಲ್ವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಪದವಿ ನೀಡಬೇಕೆಂದು ಒತ್ತಾಯ ಮಾಡಿದರು.[ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಹೊರಟ್ಟಿಗೆ ದಾಖಲೆ ಗೆಲುವು]

hubballi

ಈ ಹಿಂದೆ ಪ್ರತಿ ಸರಕಾರದಲ್ಲಿ ಮರಾಠಾ ಸಮಾಜದವರು ಸಚಿವರಿರುತ್ತಿದ್ದರು. ಈಗ ಒಬ್ಬರೂ ಇಲ್ಲ. ಆದ್ದರಿಂದ ಮರಾಠಾ ಸಮಾಜದ ಶಾಸಕ ಶ್ರೀನಿವಾಸ ಮಾನೆ ಅಥವಾ ಇನ್ನೂ ಮೂವರಲ್ಲಿ ಒಬ್ಬರನ್ನಾದರೂ ಸಿದ್ಧರಾಮಯ್ಯನವರು ಸಚಿವ ಸ್ಥಾನ ನೀಡಬೇಕೆಂದು ಘಾಟಗೆ ಒತ್ತಾಯಿಸಿದರು. ಬಿ.ಬಿ.ಶಿವಾಳಕರ, ಡಾ.ಶೇಖರ ಮಾನೆ, ಅರುಣಕುಮಾರ ಚವ್ಹಾಣ, ಮಲ್ಲಪ್ಪ ವೆಂಕೂಜಿ ಮುಂತಾದವರು ಉಪಸ್ಥಿತರಿದ್ದರು.


ದೇಶಾದ್ಯಂತ ಬೊಜ್ಜು ನಿವಾರಣಾ ಶಿಬಿರ
ಹುಬ್ಬಳ್ಳಿ : ಬೊಜ್ಜಿನ ಸಮಸ್ಯೆಯಿಂದ ಹಲವಾರು ರೋಗಗಳು ಬರುತ್ತವೆ ಹೀಗಾಗಿ ದೇಶದ ಎಲ್ಲೆಡೆ ಬೊಜ್ಜು ನಿವಾರಣಾ ಶಿಬಿರವನ್ನು ಪತಂಜಲಿ ಸಂಸ್ಥೆ ಹಮ್ಮಿಕೊಂಡಿದೆ ಎಂದು ಪತಂಜಲಿ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ.ಶೆರ್ಲಿ ಟೆಲಿಸ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿಯ ಕೇಶವಪುರದ ಸಮುದಾಯ ಭವನದಲ್ಲಿ ಶಿಬಿರ ಆರಂಭವಾಗಿದ್ದು ಜನರು ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.[ಯೋಗ ಗುರು ರಾಮ್ ದೇವ್ ಮೋಜಿನ ರೈಡ್ ನೋಡಿ]

hubballi

ಬೊಜ್ಜಿನ ಸಮಸ್ಯೆ ಬಗೆಹರಿದಲ್ಲಿ ವ್ಯಕ್ತಿಯೂ ಸುಂದರನಾಗಿ ಕಾಣುತ್ತಾನೆ. ವಿವಿಧ ಉಪಕರಣಗಳಿಂದ ಬೊಜ್ಜು ನಿವಾರಿಸಿಕೊಳ್ಳಲು ಜನರು ಪ್ರಯತ್ನಿಸುತ್ತಾರೆ. ಆದರೆ ಅದರಲ್ಲಿ ಸಫಲರಾಗುವುದಿಲ್ಲ. ತಾವು ಹಮ್ಮಿಕೊಂಡಿರುವ ಪಾರಂಪರಿಕ ಯೋಗ ಚಿಕಿತ್ಸೆಯಿಂದ ಬೊಜ್ಜು ನಿವಾರಣೆಯಾಗುತ್ತದೆ ಎಂದರು. ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ಸಂಗಮೇಶ ನಿಂಬರಗಿ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka Kshatriya Maratha Parishat has urged Chief Minister Siddaramaiah to give representation to the community leaders during the forthcoming Cabinet reshuffle. Addressing presspersons, office-bearers of the Parishat including State vice-president Vijaykumar Ghatge said that the community had been left out while giving representation to various communities in the State Cabinet.
Please Wait while comments are loading...