ಅಂತೂ-ಇಂತೂ ಉಣಕಲ್ ಕೆರೆ ಸ್ವಚ್ಛತೆ ಆರಂಭ

ಹುಬ್ಬಳ್ಳಿ, ಜೂನ್, 11- ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿರುವ ಉಣಕಲ್ ಕೆರೆಯ ಸ್ವಚ್ಛತಾ ಕಾಮಗಾರಿ ಶನಿವಾರದಿಂದ ಆರಂಭವಾಗಿದೆ. ಕಳೆಗಳಿಂದ ತುಂಬಿಕೊಂಡಿದ್ದ ಉಣಕಲ್ ಕೆರೆಯು ಹುಲ್ಲುಗಾವಲಿನ ತರಹ ಕಾಣುತ್ತಿತ್ತು. ಇತ್ತೀಚೆಗಷ್ಟೇ ಈ ಕೆರೆಗೆ ಭೇಟಿ ನೀಡಿದ್ದ ಸಚಿವ ವಿನಯ ಕುಲಕರ್ಣಿ ಶೀಘ್ರ ಕೆರೆಯ ಸ್ವಚ್ಛತಾ ಕಾರ್ಯ ಆರಂಭಿಸುವುದಾಗಿ ಹೇಳಿದ್ದರು.

ಬೆಂಗಳೂರಿನ ಕ್ಲೀನ್ ಟೆಂಕ್ ಕಂಪನಿಗೆ ಕೆರೆ ಸ್ವಚ್ಛತಾ ಕಾಮಗಾರಿಯ ಟೆಂಡರ್ ನೀಡಲಾಗಿದೆ. ಸಂಪೂರ್ಣ ಕೆರೆಯಲ್ಲಿನ ಅಂತರಗಂಗೆಯನ್ನು ತೆಗೆದುಹಾಕಲು ಕನಿಷ್ಠ ಒಂದೂವರೆ ತಿಂಗಳು ಬೇಕಿದೆ.[ಮೂರೇ ಮೂರು ದಿನದಲ್ಲಿ ಹುಬ್ಬಳ್ಳಿ ಉಣಕಲ್ ಕೆರೆ ಸ್ವಚ್ಛ]

hubballi

ಭೂ ಸೇನಾ ನಿಗಮವು ಈ ಕೆರೆ ಸ್ವಚ್ಛತಾ ಕಾಮಗಾರಿಗೆ 15 ಲಕ್ಷ ರೂ. ಅನುದಾನ ನೀಡಿದೆ. ಟೆಂಡರ್ ನಮಗೆ ನೀಡಿದ್ದು ಆದಷ್ಟು ಬೇಗನೇ ಕೆರೆಯನ್ನು ಅಂತರಗಂಗೆ ಮುಕ್ತವಾಗಿಸಲಾಗುವುದು ಎಂದು ಕ್ಲೀನ್ ಟೆಕ್ ಕಂಪನಿಯ ಮಾರಾಟ ವ್ಯವಸ್ಥಾಪಕ ಉದಯ ಕುಲಕರ್ಣಿ ಹೇಳಿದ್ದಾರೆ.[ಬೆಳ್ಳಂದೂರು ಕೆರೆ ಶುದ್ಧೀಕರಣಕ್ಕೆ ತಜ್ಞರ ಸಮಿತಿ]

-

-

-

-

-

ಕೆರೆಯನ್ನು ಎನ್ಜಿಓ ಗಳಿಗೆ ನಿರ್ವಹಣೆಗಾಗಿ ನೀಡಲು ಯೋಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ. ಪಾಲಿಕೆ ಆಯುಕ್ತ ನೂರಮನ್ಸೂರ, ಜಿಲ್ಲಾಧಿಕಾರಿ ರಾಜೇಂದ್ರ ಚೋಳಿನ್ ಮತ್ತಿತರರು ಕೆರೆ ಸ್ವಚ್ಛತಾ ಕಾಮಗಾರಿಯನ್ನು ಪರಿಶೀಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+