ಮಳೆಗಾಲ ಬಂತು, ಎಚ್ಚೆತ್ತುಕೊಳ್ಳಿ: ಜಗದೀಶ್ ಶೆಟ್ಟರ್

Subscribe to Oneindia Kannada

ಹುಬ್ಬಳ್ಳಿ, ಜೂನ್ 08: ಮಳೆಯಿಂದ ಹಾನಿಗೀಡಾಗಿರುವ ನಗರದ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ತಕ್ಷಣ ಸಮಸ್ಯೆ ಪರಿಹರಿಸಬೇಕು ಮತ್ತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೂಚನೆ ನೀಡಿದರು.

ಅವರು ಬುಧವಾರನ ನಡೆದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸೋಮವಾರ ಸುರಿದ ಭಾರಿ ಮಳೆಯಿಂದ ನಗರದ ಹಲವಾರು ತಗ್ಗು ಪ್ರದೇಶಗಳಲ್ಲಿನ ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿದ್ದು ಮುಂದೆ ಹೀಗೆ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.[ಹುಬ್ಬಳ್ಳಿ: ಔಡಲ ಬೀಜ ತಿಂದು 57 ವಿದ್ಯಾರ್ಥಿಗಳು ಅಸ್ವಸ್ಥ]

Hubballi-Dharwad Mahanagara Palike general meet

ಅವಳಿ ನಗರ ಪೊಲೀಸ್ ಕಮೀಷನರ್ ಪಾಂಡುರಂಗ ರಾಣೆ ಮಾತನಾಡಿ, ಪ್ರಕೃತಿ ವಿಕೋಪದಂತಹ ಸಂದರ್ಭಗಳನ್ನು ನಿರ್ವಹಣೆಗಾಗಿ ಹಲವಾರು ವಿಭಾಗಗಳನ್ನು ಮಾಡಲಾಗಿದೆ, ದುರಂತಳೇನಾದರೂ ಸಂಭವಿಸಿದರೆ ಅಧಿಕಾರಿಗಳನ್ನು ಜನತೆ ಸಂಪರ್ಕಿಸಬೇಕು ಎಂದು ತಿಳಿಸಿದರು.[ಹುಬ್ಬಳ್ಳಿ ಮೇಯರ್ ಮಂಜುಳಾರನ್ನೇ ಬಸ್ ಹತ್ತಿಸಿದ ಪಾಲಿಕೆ!]

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ನಗರದ ಪೂರ್ವ ಭಾಗದ ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನಿಂತುಕೊಂಡು ಹಾನಿಯಾಗಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು ಸ್ವಚ್ಛತಾ ಸಿಬ್ಬಂದಿ ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕೆಂದು ತಿಳಿಸಿದರು.[ಹುಬ್ಬಳ್ಳಿಯಲ್ಲಿ ಸುರಿದ ಭಾರಿ ಮಳೆ]

ಮೇಯರ್ ಮಂಜುಳಾ ಅಕ್ಕೂರ, ಉಪ ಮೇಯರ್ ಲಕ್ಷ್ಮೀ ತಿಪ್ಪಾರ, ಜಿಲ್ಲಾಧಿಕಾರಿ ರಾಜೇಂದ್ರ ಚೋಳಿನ್, ಪಾಲಿಕೆ ಸದಸ್ಯರು, ಅಧಿಕಾರಿಗಳು

-
ಮಳೆಗಾಲ ಬಂತು, ಎಚ್ಚೆತ್ತುಕೊಳ್ಳಿ: ಜಗದೀಶ್ ಶೆಟ್ಟರ್

ಮಳೆಗಾಲ ಬಂತು, ಎಚ್ಚೆತ್ತುಕೊಳ್ಳಿ: ಜಗದೀಶ್ ಶೆಟ್ಟರ್

-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi: Hubballi-Dharwad Mahanagara Palike officers must took solution in rain hit areas. Leader of the Opposition Karnataka Legislative Assembly Jagadish Shettar said. Shettar participated Hubballi-Dharwad Mahanagara Palike general meet on June 8, 2016.
Please Wait while comments are loading...