'ಪ್ರಹ್ಲಾದ ಜೋಶಿಗೆ ಕಲ್ಲು ಹೊಡೆದಿದ್ದು ಬಿಜೆಪಿ ಕಾರ್ಯಕರ್ತರು'

ಹುಬ್ಬಳ್ಳಿ,ಫೆಬ್ರವರಿ,13: ಬಿಜೆಪಿ ಅಭ್ಯರ್ಥಿ ಬಂಧನ ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾಗ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರ ಮೇಲೆ ಕಲ್ಲು ತೂರಿದ್ದು ಬಿಜೆಪಿ ಕಾರ್ಯಕರ್ತರೇ ಹೊರತು ಬೇರೆ ಯಾರೂ ಅಲ್ಲ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ವೇದವ್ಯಾಸ ಕೌಲಗಿ ಆರೋಪಿಸಿದ್ದಾರೆ.

ಸಚಿವ ವಿನಯ ಕುಲಕರ್ಣಿ ಅವರ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ. ಹೆಬ್ಬಳ್ಳಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯೋಗೇಶಗೌಡ ನಿನ್ನೆ ರಾತ್ರಿ ಚುನಾವಣಾ ನಿಯಮ ಉಲ್ಲಂಘಿಸಿ ಸಭೆ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೋಲೀಸರೊಂದಿಗೆ ಒರಟಾಗಿ ವರ್ತಸಿದ್ದಾರೆ. ಹೀಗಾಗಿ ಅವರನ್ನು ಬಂಧಿಸಲಾಗಿದೆ. ಯೋಗೇಶಗೌಡ ಈ ಹಿಂದೆ ಪಕ್ಷೇತರ ಸದಸ್ಯರಾಗಿದ್ದಾಗ ಅನವಶ್ಯಕವಾಗಿ ಕಾಂಗ್ರೆಸ್ ನ್ನು ಟೀಕಿಸುವುದು, ಶಾಸಕರಾಗಿದ್ದ ವಿನಯ ಕುಲಕರ್ಣಿಯವರ ಬಗ್ಗೆ ಸುಳ್ಳು ಆರೋಪ ಮಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು ಎಂದು ಹೇಳಿದ್ದಾರೆ.[ಮುಗಿದ ಮೊದಲ ಹಂತದ ಜಿಪಂ, ತಾಪಂ ಚುನಾವಣೆ]

congress


ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಜೋಶಿ ಕಾರ್ಯಕರ್ತರೊಂದಿಗೆ ಡಿಸಿ ಕಚೆರಿ ಬಳಿ ಪ್ರತಿಭಟನೆ ನಡೆಸಿದ್ದು,ಕೇವಲ ಪ್ರಚಾರಕ್ಕಾಗಿ. ಪ್ರತಿಭಟನೆ ನಡೆಸುತ್ತಿರುವಾಗ ಬಿಜೆಪಿ ಕಾರ್ಯಕರ್ತರು ಪೋಲೀಸ ವ್ಯಾನಿಗೆ ತೂರಿದ ಕಲ್ಲು ಸಂಸದರಿಗೆ ಬಡೆದಿದೆ. ಆದರೆ, ಶೆಟ್ಟರ್, ಜೋಷಿಯವರು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಗೂಂಡಾಗಿರಿ ಮಾಡುತ್ತಿದ್ದಾರೆಂದು ಅಸಂಬದ್ಧ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ದೂರಿದ್ದಾರೆ. [ಬಿಎಸ್ವೈ, ಎಚ್ಡಿಕೆ ಮೇಲೆ ಕಿಡಿಕಾರಿದ ವೇದವ್ಯಾಸ ಕೌಲಗಿ]

ಪ್ರತಿಭಟನೆಯ ಸ್ಥಳದಲ್ಲಿ ಪೋಲೀಸರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಹೊರತು ಪಡಿಸಿ ಬೇರೆ ಯಾರೂ ಬರಲು ಸಾಧ್ಯವೇ ಇಲ್ಲ. ಕೇವಲ ಅಗ್ಗದ ಪ್ರಚಾರಕ್ಕಾಗಿ ಜೋಶಿ, ಶೆಟ್ಟರ್ ತಮ್ಮ ಸ್ಥಾನಮಾನದ ಅರಿವಿಲ್ಲದೇ ಜಿಲ್ಲಾ ಸಚಿವರ ರಾಜೀನಾಮೆ ಕೇಳುತ್ತಿರುವುದು ರಾಜಕೀಯ ದುರುದ್ದೇಶ ಅಲ್ಲದೇ ಮತ್ತಿನ್ನೇನು? ಎಂದು ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+