ಹುಬ್ಬಳ್ಳಿಗರೇ ಗ್ಯಾಲರಿಯಲ್ಲೇ ಕುಳಿತು ಕೆಪಿಎಲ್ ನೋಡಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜೂನ್, 23: ನಗರದಲ್ಲಿ ಇನ್ನು ಒಂದೂವರೆ ವರ್ಷದಲ್ಲಿ ಸುಸಜ್ಜಿತ ಪ್ರೇಕ್ಷಕರ ಗ್ಯಾಲರಿ ನಿರ್ಮಾಣಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಧಾರವಾಡ ವಲಯ ನಿಯಂತ್ರಕ ಬಾಬಾ ಬೂಸದ ಹೇಳಿದ್ದಾರೆ.

ಅವರು ಇಲ್ಲಿನ ರಾಜನಗರ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಒಂದನೇ ಹಂತದ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.[ಕಳಸಾ ಬಂಡೂರಿ: ಜುಲೈ 14ಕ್ಕೆ ಉತ್ತರ ಕರ್ನಾಟಕ ಬಂದ್]

cricket

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಮ್ಯಾಚ್ ಗಳು ಬೆಂಗಳೂರಿನ ಬದಲು ಈ ಬಾರಿ ಹುಬ್ಬಳ್ಳಿಯಲ್ಲಿ ನಡೆಯುವುದು ನಿರ್ಧಾರವಾಗಿದೆ. ಹೀಗಾಗಿ ಆದಷ್ಟು ಬೇಗ ಕಾಮಗಾರಿಗಳನ್ನು ಮುಗಿಸಿ ಕೆಪಿಎಲ್ ಮ್ಯಾಚ್ ಗೆ ಮೈದಾನವನ್ನು ಸಜ್ಜು ಮಾಡಲಾಗುತ್ತದೆ ಎಂದರು.

ಸುಮಾರು 22.7 ಕೋಟಿ ರೂ.ಗಳ ವೆಚ್ಚದಲ್ಲಿ ಮೊದಲನೇ ಹಂತದ ಕಾಮಗಾರಿ ಆರಂಭವಾಗುತ್ತಿದ್ದು, ಚೆನ್ನೈನ ಆರ್.ಕೃಷ್ಣಮೂರ್ತಿ ಎಂಬ ಕಂಪನಿಯು ಕಾಮಗಾರಿಯ ಗುತ್ತಿಗೆ ಪಡೆದಿದೆ ಎಂದರು.[ಬೌಲಿಂಗ್ ಪ್ರತಿಭೆಗಳನ್ನು ಗುರುತಿಸಲು ಹೊಸ ಕ್ರಿಕೆಟ್ ಫೌಂಡೇಶನ್]

cricket

ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯ ಮೂರು ಅಂತಸ್ತಗಳಾಗಲಿದ್ದು, ಕೆಳಗಡೆ 600 ವಾಹನಗಳಿಗೆ ಪಾರ್ಕಿಂಗ್, ಮಧ್ಯದಲ್ಲಿ ಮತ್ತು ಮೇಲಂತಸ್ತಿನಲ್ಲಿ ಪ್ರೇಕ್ಷಕರ ಗ್ಯಾಲರಿಗಳಿರಲಿವೆ ಎಂದರು.

ಒಟ್ಟು 18 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಕ್ರಿಕೆಟ್ ನೋಡಬಹುದಾಗಿದೆ. ಪತ್ರಕರ್ತರಿಗೆ ವಿಶೇಷ ಮಿಡೀಯಾ ಮತ್ತು ಬ್ರಾಡಕಾಸ್ಟಿಂಗ್ ಬಾಕ್ಸ್, 18 ಐಷಾರಾಮಿ ವಿಐಪಿ ದರ್ಜೆಯ ರೂಮುಗಳಿರಲಿವೆ. ಜೊತೆಗೆ ಸ್ವಿಮ್ಮಿಂಗ್ ಫೂಲ್, ಜಿಮ್, ಬ್ಯಾಡ್ಮಿಂಟನ್ ಗ್ರೌಂಡ್, ಎರಡು ರೆಸ್ಟೋರೆಂಟ್ ಗಳು, ಟೇಬಲ್ ಟೆನ್ನಿಸ್ ಗ್ರೌಂಡ್ ಮುಂತಾದ ಸೌಲಭ್ಯಗಳಿರಲಿವೆ ಎಂದರು.

hubballi

16.95 ಎಕರೆ ಪ್ರದೇಶಗಳಲ್ಲಿ ನಿರ್ಮಾಣವಾಗುತ್ತಿರುವ ಈ ಕಾಮಗಾರಿಯು ಜನಾರ್ದನ ರೆಡ್ಡಿ ಎಂಬ ಎಂಜಿನಿಯರ್ ಅವರ ನೇತೃತ್ವದಲ್ಲಿ ನೆರವೇರಲಿದೆ. ಮೊದಲ ಹಂತದಲ್ಲಿ 8750 ಚದುರಡಿ ಕಾಮಗಾರಿ ನಡೆಯಲಿದೆ ಎಂದರು.

ಉತ್ತರ ಭಾಗದ ಪೆವಿಲಿಯನ್ ಕಾಮಗಾರಿಯೂ ಇದರಲ್ಲಿ ಸೇರಿರುವುದರಿಂದ ಅಂಪೈರ್ ರೂಮ್ ಮತ್ತು ಇತರೆ ಅವಶ್ಯಕತೆಗಳೆಲ್ಲವನ್ನೂ ಸುವ್ಯವಸ್ಥಿತವಾಗಿ ಕಲ್ಪಿಸಲಾಗುವುದು ಎಂದರು. ಶಿವಾನಂದ ಗುಂಜಾಳ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: This is a good news for North Karnataka cricket fans. Rajanagar KSCA stadium is get ready for new Audience Gallery.
Please Wait while comments are loading...