ಸಿದ್ಧಾರೂಢರ ಅದ್ಧೂರಿ ರಥೋತ್ಸವ: ತೆಪ್ಪದ ತೇರು, ಕೌದಿ ಪೂಜೆ ವಿಶೇಷ!
ಸಿದ್ಧಾರೂಢ ಸ್ವಾಮೀಜಿ ರಥೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಇಂದು ಸಂಜೆ ಅದ್ಧೂರಿ ಸಿದ್ಧಾರೂಢರ ಮಹಾರಥೋತ್ಸವ ನಡೆಯಲಿದೆ. ಈ ರಥೋತ್ಸವಕ್ಕೆ ಸಾವಿರಾರು ಜನ ಭಕ್ತಾದಿಗಳು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಸಿದ್ಧಾರೂಢ ಸ್ವಾಮೀಜಿ ಅಂದರೆ ಅಶಕ್ತರ ಶಕ್ತಿ, ಧೈರ್ಯ. ಇಲ್ಲಿನ ಜನರ ಜೀವನದ ಭಾಗ.. ಸಿದ್ಧಾರೂಢ ಸ್ವಾಮೀಜಿ ಅವರು ಇಲ್ಲಿನ ಜನರ ಆಧ್ಯಾತ್ಮಿಕ ಸವಾಲುಗಳಿಗೆ ಕಿವಿಯಾದವರು, ನಂಬಿ ಬಂದವರ ದುಗುಡಗಳನ್ನು ದೂರವಾಗಿಸಿದವರು. ಪಂಚಾಕ್ಷರಿ ಮಂತ್ರವನ್ನು ಬಹಿರಂಗವಾಗಿ ಪಠಿಸಲು ಜನರಿಗೆ ಪ್ರೇರಣೆ ನೀಡಿದವರು. ಅದಕ್ಕೆ ಇಲ್ಲಿನ ಸಿದ್ಧಾರೂಢರ ಸನ್ನಿಧಾನದಲ್ಲಿ ಓಂ ನಮಃ ಶಿವಾಯ ಮಂತ್ರ ಸದಾ ಅನುರಣಿಸುತ್ತಲೇ ಇರುತ್ತದೆ. ಸಿದ್ಧಾರೂಢರ ಅಂಗಾರ ಜಗಕೆಲ್ಲ ಬಂಗಾರ 🖤 ಎನ್ನುವ ಘೋಷಾವಾಕ್ಯ ಮೊಳಗುತ್ತಿರುತ್ತದೆ. ಇಂದು ಸ್ವಾಮೀಜಿ ಸನ್ನಿಧಾನದಲ್ಲಿ ಭಕ್ತ ಸಮೂಹವೇ ಸೇರಿದೆ.
ಸಿದ್ಧಾರೂಢರ ರಥೋತ್ಸವದ ವಿಶೇಷ: ಸಿದ್ಧಾರೂಢರ ರಥೋತ್ಸವವು ಹಲವು ಕಾರಣಕ್ಕೆ ವಿಶೇಷವಾಗಿದೆ. ರಥೋತ್ಸವದ ವಿಶೇಷವಾಗಿ ಹಳ್ಳಿ ಹಳ್ಳಿಯಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ರೊಟ್ಟಿಗಳನ್ನು ಮಾಡಿ ಮಠಕ್ಕೆ ತಲುಪಿಸುತ್ತಾರೆ. ಜಾತ್ರೆ ಆರಂಭಕ್ಕೂ ಮುನ್ನದಿಂದ ಜಾತ್ರೆ ಮುಗಿಯುವವರೆಗೂ ದೂರ ದೂರದಿಂದೆಲ್ಲ ಕಾಲು ನಡಿಗೆಯಲ್ಲಿ ಮಠಕ್ಕೆ ಬರುವ ರೂಢಿಯು ಇದೆ. ಅವರವರ ಭಕ್ತಿಗೆ ಅನುಗುಣವಾಗಿ ದವಸ ಧಾನ್ಯ, ಬೆಲ್ಲ, ಸೇವಾ ಕಾರ್ಯಗಳನ್ನು ಸ್ವಯಂ ಪ್ರೇರಿತವಾಗಿ ಸಲ್ಲಿಸುತ್ತಾರೆ. ಇನ್ನು ಸಿದ್ದಾರೂಢರ ಜಾತ್ರೆಯಲ್ಲಿ ತೆಪ್ಪದ ತೇರು, ಕೌದಿ ಪೂಜೆಗಳು ಕೂಡ ವಿಶೇಷವಾದವು.

ಇದೀಗ ಹುಬ್ಬಳ್ಳಿಯ ಸುಪ್ರಸಿದ್ಧ ಸಿದ್ಧಾರೂಢರ ಮಹಾರಥೋತ್ಸವ ಹಿನ್ನೆಲೆ ಸಾಗರೋಪಾದಿಯಲ್ಲಿ ಜನ ಸೇರಿದ್ದಾರೆ. ಪ್ರತಿ ವರ್ಷ ಶಿವರಾತ್ರಿ ಅಂಗವಾಗಿ ನಡೆಯುವ ಮಹಾರಥೋತ್ಸವ ಇದಾಗಿದೆ. ಮಹಾರಥೋತ್ಸವ ಅಂಗವಾಗಿ ಸಿದ್ಧಾರೂಢರ ಮಠದತ್ತ ಸಹಸ್ರಾರು ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಮಠಕ್ಕೆ ಆಗಮಿಸುವ ಭಕ್ತರಿಗೆ ಉಚಿತ ಸೇವೆಯನ್ನು ಸ್ಥಳೀಯ ಭಕ್ತಾದಿಗಳು ನೀಡುತ್ತಿದ್ದಾರೆ.
ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರಿಗೆ ಉಚಿತ ಆಟೋ ಸೇವೆ ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಸ್ವಯಂಪ್ರೇರಿತವಾಗಿ ಅನ್ನಸಂತರ್ಪಣೆ ಹಾಗೂ ಉಚಿತ ಆಟೋ ಸೇವೆ ಮಾಡಲಾಗಿದೆ. ನಗರದ ಕಾರವಾರ ರಸ್ತೆಯುದ್ದಕ್ಕೂ ಭಕ್ತರಿಗೆ ಅನ್ನ ಸಂತರ್ಪಣೆ ಹಾಗೂ ಉಚಿತ ಆಟೋ ಸೇವೆ ಮಾಡಲಾಗಿದೆ. ಗುರುವಾರ ಸಂಜೆ ಸಿದ್ಧಾರೂಢರ ಮಹಾರಥೋತ್ಸವ ನೆರವೇರಲಿದೆ. ಈ ಮಹಾರಥೋತ್ಸವದಲ್ಲಿ ಭಾಗಿಯಾಗಲಿದ್ದಾರೆ ಲಕ್ಷಾಂತರ ಭಕ್ತರು ಸಿದ್ಧಾರೂಢರ ಜಲರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.

ಮಹಾರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಸೇವಾ ಮನೋಭಾವ ವ್ಯಕ್ತಪಡಿಸುತ್ತಿದ್ದಾರೆ ಇಲ್ಲಿನ ಭಕ್ತರು. ಕಾರವಾರ ರಸ್ತೆಯುದ್ದಕ್ಕೂ ಭಕ್ತರಿಗೆ ಪಲಾವ್, ಮಜ್ಜಿಗೆ,ಹಣ್ಣು ಹಂಪಲು ವಿತರಣೆ ಮಾಡಲಾಗುತ್ತಿದೆ. ಹುಬ್ಬಳ್ಳಿ - ಧಾರವಾಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆ ಹಾಗೂ ವಿವಿಧ ರಾಜ್ಯಗಳಿಂದ ಭಕ್ತರುಆಗಮಿಸುತ್ತಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಹರಿದು ಬರುತ್ತಿರುವ ಭಕ್ತರಿಗೆ ಉಚಿತ ಸೇವೆಯನ್ನು ಹುಬ್ಬಳ್ಳಿಯ ಭಕ್ತರು ನೀಡುತ್ತಿದ್ದಾರೆ.












Click it and Unblock the Notifications