ಉಚಿತ ಬಸ್‌ ಪ್ರಯಾಣದಿಂದ ಬಸ್‌ ಫುಲ್‌ ರಶ್‌: ಪ್ರತಿ ನಿತ್ಯ ಅಪಾಯದಲ್ಲಿ ವಿದ್ಯಾರ್ಥಿಗಳ ಸಂಚಾರ

ಧಾರವಾಡ, ಜೂನ್‌ 26: ಕಾಂಗ್ರೆಸ್ ಸರ್ಕಾರ ಆರಂಭ ಮಾಡಿದ ಶಕ್ತಿ ಯೋಜನೆಯ ಉಚಿತ ಸಾರಿಗೆ ಬಸ್ ಪ್ರಯಾಣ ಮಹಿಳೆಯರಿಗೆ ಎಷ್ಟೋ ಲಾಭವಾಗಿದೆಯೋ ಅದೇ ರೀತಿ ಇತರ ಪ್ರಯಾಣಿಕರಿಗೆ ತೊಂದರೆ ಕೂಡ ಆಗುತ್ತಿದೆ. ಅದರಲ್ಲೂ ಮುಖ್ಯವಾಗಿ ಬಸ್‌ ರಶ್‌ನಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದ

ಕುಂದಗೋಳ ತಾಲೂಕಿನಲ್ಲೂ ಬಸ್‌ ಸಮಸ್ಯೆ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಸಾರಿಗೆ ಬಸ್‌ನ ಪುಟ್ ಬೋರ್ಡ್ ಮೇಲೆ ನಿಂತು ಅಪಾಯದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಉಚಿತ ಬಸ್ ಪ್ರಯಾಣಕ್ಕಾಗಿ ಮಹಿಳೆಯರು ಮುಗಿಬಿದ್ದಿದ್ದು, ಸಾರಿಗೆ ಬಸ್ ಕಿಟಕಿಯಲ್ಲಿ ತಮ್ಮ ತಮ್ಮ ಮಕ್ಕಳನ್ನು ತೂರಿ ಆಸನ ಹಿಡಿಯುತ್ತಿದ್ದಾರೆ. ಇನ್ನೊಂದೆಡೆ ಸಂಪೂರ್ಣ ಬಸ್ ಪ್ರಯಾಣಿಕರಿಂದ ಭರ್ತಿಯಾದರೂ ವೇಗವಾಗಿ ಚಲಿಸುವ ಸಾರಿಗೆ ಬಸ್ ಪುಟ್ ಬೋರ್ಡ್ ಮೇಲೆ ನಿಂತು ಅಪಾಯದ ಭಯ ತೊರೆದು ವಿದ್ಯಾರ್ಥಿಗಳು, ನಾಗರಿಕರು ಪ್ರಯಾಣ ನಡೆಸುತ್ತಿದ್ದಾರೆ.

Kundagola KSRTC Bus Full Rush

ಪ್ರತಿ ನಿತ್ಯ ಶಾಲಾ ಕಾಲೇಜು ಆರಂಭದ ಸಮಯ ಬೆಳಗ್ಗೆ ಮತ್ತು ಸಾಯಂಕಾಲ ವಾಪಸ್‌ ಆಗುವ ವೇಳೆ ಸಾರಿಗೆ ಬಸ್ ಏರುವುದೇ ವಿದ್ಯಾರ್ಥಿಗಳಿಗೆ ಸವಾಲಾಗಿದೆ. ಎಂದಿಗಿಂತ ದುಪ್ಪಟ್ಟು ಪ್ರಯಾಣಿಕರು ಸಾರಿಗೆ ಬಸ್ ಏರುತ್ತಿರುವ ಕಾರಣ ಬಸ್ ಪ್ರಯಾಣಿಕರಿಂದ ತುಂಬಿ ತುಳುಕುವ ದುಸ್ಥಿತಿ ಉಂಟಾಗಿ ಶಕ್ತಿ ಯೋಜನೆ ಆರಂಭವಾಗಿ ಎರಡು ವಾರ ಕಳೆದರೂ ಮಹಿಳೆಯರ ಪ್ರಮಾಣ ಹೆಚ್ಚುತ್ತಲೇ ಇದೆ.

ಸ್ಥಳೀಯರ ತರಾಟೆ, ಗ್ರಾಮ ಪಂಚಾಯಿತಿ ಸದಸ್ಯೆ ಕಣ್ಣೀರು

ಧಾರವಾಡ: ಧಾರವಾಡದ ಸಾಧುನವರ ಎಸ್ಟೇಟ್‌ ನಿವಾಸಿಯೊಬ್ಬರು ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಧಾರವಾಡದಲ್ಲಿ ನಡೆದಿದ್ದು, ಗ್ರಾಮ ಪಂಚಾಯಿತಿ ಸದಸ್ಯೆ ಕಣ್ಣೀರು ಹಾಕಿದ ಪ್ರಸಂಗ ಕೂಡ ನಡೆದಿದೆ.

Kundagola KSRTC Bus Full Rush

ಧಾರವಾಡದ ಸಾಧುನವರ ಎಸ್ಟೇಟ್ ಚಿಕ್ಕಮಲ್ಲಿಗವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ ಇಲ್ಲಿ ರಾಸಾಯನಿಕ ಸೇರಿ ನೊರೆಯುಕ್ತ ನೀರು ಹರಿಯುತ್ತಿದೆ. ಈ ಸಮಸ್ಯೆ ಬಗೆಹರಿಸುವಂತೆ ಅಲ್ಲಿನ ನಿವೃತ್ತ ಸರ್ಕಾರಿ ಅಧಿಕಾರಿ ಶಿವಕುಮಾರ ದೊಡಮನಿ ಅವರು ಗ್ರಾಮ ಪಂಚಾಯಿತಿ ಪವಿತ್ರಾ ತಳವಾರ ಅವರಿಗೆ ಕರೆ ಮಾಡಿದಾಗ ಅವರು ಸರಿಯಾಗಿ ಸ್ಪಂದನೆ ನೀಡಲಿಲ್ಲ ಎಂಬ ಕಾರಣಕ್ಕೆ ಇಂದು ಪವಿತ್ರಾ ತಳವಾರ ಅವರನ್ನು ಸ್ಥಳದಲ್ಲೇ ಶಿವಕುಮಾರ ಎನ್ನುವವರು ತೀವ್ರ ತರಾಟೆಗೆ ತೆಗೆದುಕೊಂಡರು.

ಇಂದು ಸ್ಥಳಕ್ಕೆ ಸಚಿವ ಸಂತೋಷ ಲಾಡ್ ಅವರು ಭೇಟಿ ನೀಡಿದ್ದರಿಂದ ಚಿಕ್ಕಮಲ್ಲಿಗವಾಡ ಗ್ರಾಮ ಪಂಚಾಯಿತಿ ಸದಸ್ಯೆ ಪವಿತ್ರಾ ತಳವಾರ ಕೂಡ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಪವಿತ್ರಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರಿಂದ ಅವರು ಸ್ಥಳದಲ್ಲೇ ಕಣ್ಣೀರು ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+