ಡೀಮ್ಡ್ ಅರಣ್ಯ ವ್ಯಾಪ್ತಿ ಕಡಿತ ಬೇಡ: ಪಶ್ಚಿಮಘಟ್ಟ ಸಂಘಟನೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ, 13: ರಾಜ್ಯ ಸರ್ಕಾರ ಡೀಮ್ಡ್ ಅರಣ್ಯ ವ್ಯಾಪ್ತಿಯನ್ನು ಕಡಿತಗೊಳಿಸಬಾರದು ಎಂದು ಪಶ್ಚಿಮ ಘಟ್ಟದ ಪರಿಸರ ಸಂಘಟನೆಗಳು ಒತ್ತಾಯಿಸಿದ್ದು, ಶುಕ್ರವಾರ ಅರಣ್ಯ ಸಚಿವ ರಮಾನಾಥ ರೈ ಹಾಗೂ ಅರಣ್ಯ ಪರಿಸರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರಿಗೆ ಮನವಿ ಸಲ್ಲಿಸಿವೆ.

ಪಶ್ಚಿಮ ಘಟ್ಟದ ಡೀಮ್ಡ್ ಅರಣ್ಯ ವ್ಯಾಪ್ತಿ ಕಡಿತ ಮಾಡದಂತೆ ಕ್ರಮ ತೆಗೆದುಕೊಳ್ಳದಂತೆ ನಿಗಾ ವಹಿಸುತ್ತೇವೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಪಶ್ಚಿಮ ಘಟ್ಟದ ಪರಿಸರ ಸಂಘಟನೆಗಳಿಗೆ ತಿಳಿಸಿವೆ.[ಶಿವಮೊಗ್ಗದಲ್ಲಿ ಪಶ್ಚಿಮ ಘಟ್ಟ ಅಭಿವೃದ್ಧಿ ಸಂಸ್ಥೆ ಸ್ಥಾಪನೆ]

Hubballi

ಸಂಘಟನೆಗಳ ಒತ್ತಾಯ ಹೀಗಿದೆ :

ಸರಕಾರ ಡೀಮ್ಡ್ ಅರಣ್ಯ ವಿಷಯ ಕುರಿತು ಖಚಿತ ನಿರ್ಧಾರ ಪ್ರಕಟಿಸಬೇಕು. ಡೀಮ್ಡ್ ಅರಣ್ಯ ವ್ಯಾಪ್ತಿಯನ್ನು ಇನ್ನೂ ಕಡಿಮೆ ಮಾಡಬಾರದು. ಯಾವುದೇ ಕಾರಣಕ್ಕೂ ಈಗಾಗಲೇ ಸಿದ್ದಪಡಿಸಿದ ಡೀಮ್ಡ್ ಅರಣ್ಯ ಕುರಿತು ವರದಿಯನ್ನು ಕೈ ಬಿಡಬಾರದು.

ಡೀಮ್ಡ್ ಅರಣ್ಯವೆಂದರೇನು?

ಪಶ್ಚಿಮ ಘಟ್ಟದ ಸಂರಕ್ಷಣೆಯಲ್ಲಿ ಡೀಮ್ಡ್ ಅರಣ್ಯಗಳು ಪ್ರಮುಖ ಪಾತ್ರವಹಿಸುತ್ತಿವೆ. ಜಲಮೂಲಗಳು, ದೇವರ ಕಾಡು, ಕೆರೆಗಳು, ಹಳ್ಳಗಳು, ಔಷಧೀ ಸಸ್ಯಗಳು, ರಾಂಪತ್ರೆ ಜಡ್ಡಿ ಮುಂತಾದ ಅಮೂಲ್ಯ ಜೀವ ವೈವಿಧ್ಯ, ಪಕ್ಷಿ, ಪ್ರಾಣಿ, ವೈವಿಧ್ಯ ಡೀಮ್ಡ್ ಅರಣ್ಯಗಳಲ್ಲಿ ಇವೆ.[ವನಸುಮವೇ ಆದ ವನೌಷಧಿ ತಜ್ಞ ಕುಂಜಿರ]

ಅರಣ್ಯ ಅಧ್ಯಯನ ಸಮೀಕ್ಷೆಗಳೂ ನಡೆದು ಕಾನು, ದೇವರ ಕಾಡು ಯೋಜನೆಗಳು ಜಾರಿ ಆಗಿದೆ. ಇವುಗಳನ್ನು ಡೀಮ್ಡ್ ಅರಣ್ಯ ಎಂದು ಈಗಾಗಲೇ ಅಧಿಕೃತವಾಗಿ ಗುರುತಿಸಲಾಗಿದೆ. ನದಿ ಕಣಿವೆಗಳು, ಜಲಮೂಲಗಳು ಉಳಿವಿಗೆ ಪಶ್ಚಿಮ ಘಟ್ಟದ ಡೀಮ್ಡ್ ಅರಣ್ಯಗಳ ಸಂರಕ್ಷಣೆ ಅತ್ಯವಶ್ಯ.

ಪಶ್ಚಿಮ ಘಟ್ಟದ ಲಕ್ಷಾಂತರ ಎಕರೆ ಅರಣ್ಯ ಈಗಾಗಲೇ ನಾಶವಾಗಿದೆ. ಪುನಃ ಸ್ವಾಭಾವಿಕ ಅರಣ್ಯ ಬೆಳೆಸಲು ಸಾಧ್ಯವಿಲ್ಲ. ಆದ್ದರಿಂದ ಈಗಾಗಲೇ ಇರುವ ನೈಸರ್ಗಿಕ ಅರಣ್ಯಗಳನ್ನು ಸಂರಕ್ಷಣೆ ವ್ಯಾಪ್ತಿಗೆ ಒಳಪಡಿಸಲೇಬೇಕು.[ವಿಶ್ವಪಾರಂಪರಿಕಾ ಪಟ್ಟಿಗೆ ರಾಜ್ಯದ 8 ತಾಣಗಳು]

Hubballi

ಪುನರ್ ಪರಿಶೀಲನೆ ಹೆಸರಲ್ಲಿ ಈಗಾಗಲೇ ಸುಮಾರು 10 ಲಕ್ಷ ಹೆಕ್ಟೇರ್ ನಿಂದ 5 ಲಕ್ಷ ಹೆಕ್ಟೇರ್ ಗೆ ಡೀಮ್ಡ್ ಅರಣ್ಯ ವ್ಯಾಪ್ತಿಯನ್ನು ಕಡಿತ ಮಾಡಲಾಗಿದೆ. ಅಂದರೆ ಸುಮಾರು ಶೇ.50% ರಷ್ಟು ಡೀಮ್ಡ್ ಅರಣ್ಯ ವ್ಯಾಪ್ತಿ ಕಡಿತ ಮಾಡಲಾಗಿದೆ. ರಾಜಕೀಯ ಪಕ್ಷಗಳು ಪರಿಸರ ಅರಣ್ಯ ಸಂರಕ್ಷಣೆ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಮುಂತಾದ ಬೇಡಿಕೆಗಳನ್ನು ಸಂಘಟನೆಗಳು ಮನವಿಯಲ್ಲಿ ತಿಳಿಸಿವೆ.[ದಾಂಡೇಲಿ ಕವಳ ಗುಹೆ ಕಾರ್ಪೋರೇಟ್ ಸಂಸ್ಥೆಗೆ ದತ್ತು]

ಅನಂತ ಹೆಗಡೆ ಅಶೀಸರ, ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ, ವೃಕ್ಷಲಕ್ಷ ಆಂದೋಲನದ ಸಂಚಾಲಕ ಬಿ.ಹೆಚ್. ರಾಘವೇಂದ್ರ, ರವಿ ಹನಿಯ, ಕೆ.ವೆಂಕಟೇಶ್ ಮುಂತಾದವರು ನಿಯೋಗದಲ್ಲಿ ಇದ್ದರು. ಶಿರಸಿಯ ಅನಂತ ಹೆಗಡೆ ಅಶೀಸರ ಅವರು ವೃಕ್ಷಲಕ್ಷ ಆಂದೋಲನ ಕರ್ನಾಟಕದ ಅಧ್ಯಕ್ಷರಾಗಿ, ಪಶ್ಷಿಮ ಘಟ್ಟ ಕಾರ್ಯಪಡೆ, ರಾಜ್ಯ ಔಷಧೀ ಮೂಲಿಕಾ ಪ್ರಾಧಿಕಾರ, ರಾಜ್ಯ ಜೀವ ವೈವಿದ್ಯ ಮಂಡಳಿ, ರಾಜ್ಯ ವನ್ಯಜೀವಿ ಮಂಡಳಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Deemed Forest is the source of Karnataka. Do not reduction Forest insists by Westernghat organizations in Hubballi on Saturday, February, 13th.
Please Wait while comments are loading...