ಪೊಲೀಸ್ ಇಲಾಖೆಯ ಎಲ್ಲಾ ಮಾಹಿತಿ ಒಂದೇ ವೆಬ್‌ಸೈಟ್‌ನಲ್ಲಿ ಲಭ್ಯ
ಧಾರವಾಡ, ಜನವರಿ 26: ಧಾರವಾಡ ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೊಳಿಸಿ, ಸಾರ್ವಜನಿಕರಿಗೆ ಸುರಕ್ಷತೆ, ಅಪರಾಧಗಳ ಕುರಿತು ಮಾಹಿತಿ, ಜಾಗೃತಿ ನೀಡುವದರೊಂದಿಗೆ ಅಗತ್ಯ ಸುರಕ್ಷತಾಕ್ರಮಗಳನ್ನು ಕೈಗೊಳ್ಳಲು ಪೂರಕವಾಗಿ ಜಿಲ್ಲಾ ಪೊಲೀಸ್ ಇಲಾಖೆಯ ವೆಬ್‍ಸೈಟ್ ಆರಂಭಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು.
ಮಂಗಳವಾರ ಧಾರವಾಡ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಗಣರಾಜೋತ್ಸವ ಧ್ವಜಾರೋಹಣವನ್ನು ಪಿ. ಕೃಷ್ಣಕಾಂತ ನೆರವೇರಿಸಿದರು. ಧಾರವಾಡ ಪೊಲೀಸ್ ಕಛೇರಿಯ ಅಧಿಕೃತವಾದ ವೆಬ್‍ಸೈಟ್‍ಗೆ ಚಾಲನೆಯನ್ನು ನೀಡಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಆರಂಭಿಸಿರುವ https://dharwadpolice.karnataka.gov.in ವೆಬ್‍ಸೈಟ್ ತುಂಬಾ ಮಾಹಿಯುಕ್ತವಾಗಿ ನಿರ್ಮಾಣಗೊಂಡಿದೆ. ಅದರಲ್ಲಿ ಜಿಲ್ಲಾ ಪೊಲೀಸ್ ಘಟಕದ ಪೊಲೀಸ್ ಠಾಣೆಗಳ ಮಾಹಿತಿ, ಅಧಿಕಾರಿಗಳ ದೂರುವಾಣಿಗಳ ಪಟ್ಟಿ, ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳಗಳ ಮಾಹಿತಿ, ಪೊಲೀಸ್ ಪದಕ ವಿಜೇತರ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳಿವೆ.

ಪೊಲೀಸ್ ನೇಮಕಾತಿ, ಜಿಲ್ಲಾ ಪೊಲೀಸ್ ಕಛೇರಿಯಿಂದ ಪ್ರಕಟಿಸುವ ಪತ್ರಿಕಾ ಪ್ರಕಟಣೆಗಳು, ಜಿಲ್ಲೆಯ ಸಾಮಾಜಿಕ ಜಾಲತಾಣಗಳ ಬಗ್ಗೆ, ಸಾರ್ವಜನಿಕರಿಂದ ದೂರು ಸ್ವೀಕರಣೆ, ಸಾರ್ವಜನಿಕರಿಗೆ ಸೇವೆಗಾಗಿರುವ ವೆಬ್‍ಸೈಟ್‍ಗಳ ಮಾಹಿತಿ, ಸೈಬರ್ ಅಪರಾಧ, ಸುರಕ್ಷತಾ ಅಪರಾದ ಕುರಿತು ಸಲಹೆ ಸೂಚನೆಗಳು ಮುಂತಾದ ಮಾಹಿತಿಗಳನ್ನು ಹಾಕಲಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಡಿಸೆಂಬರ್ 12, 2020ರಲ್ಲಿ ತುರ್ತು ಸ್ಪಂದನೆ ಸಹಾಯವಾಣಿ 112ಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಇಲ್ಲಿವರೆಗೆ ಸಹಾಯವಾಣಿ ಕರೆಯ ಮೂಲಕ 325 ಪ್ರಕರಣಗಳು ದಾಖಲಾಗಿದ್ದು, ಪರಿಹರಿಸಲಾಗಿದೆ.












Click it and Unblock the Notifications